ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿಂದು 111 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2709ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮೂವರು ಸಾವನ್ನಪ್ಪಿದ್ದರೆ, 148ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು, ಈವರೆಗೂ 1092 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 379 ಆಗಿದೆ. ಇಂದು ಒಟ್ಟು 629 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 250 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 974 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.
ತಾಲೂಕುವಾರು ವಿವರ: ಶಿವಮೊಗ್ಗ: 41 ಭದ್ರಾವತಿ: 33 ಶಿಕಾರಿಪುರ: 16 ಸಾಗರ: 2 ತೀರ್ಥಹಳ್ಳಿ: 5 ಹೊಸನಗರ: 5 ಸೊರಬ: 5 ಇತರೆ ಜಿಲ್ಲೆ: 4
Get In Touch With Us info@kalpa.news Whatsapp: 9481252093
Discussion about this post