No Result
View All Result
Blood Donation Camp Successfully Organised at Mysuru Division
English Articles

Blood Donation Camp Successfully Organised at Mysuru Division

by ಕಲ್ಪ ನ್ಯೂಸ್
June 16, 2026
0

Kalpa Media House  | Mysuru | South Western Railway, Mysuru Division, organised a Blood Donation Camp in collaboration with Railway...

Read moreDetails
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
  • Advertise With Us
  • Grievances
  • About Us
  • Contact Us
Wednesday, June 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಈ ಒಂದು ಕಾರ್ಯಕಾರ್ಯಕ್ಕಾಗಿ ಯಡಿಯೂರಪ್ಪ, ರಾಘವೇಂದ್ರರನ್ನು ಭವಿಷ್ಯದ ಪೀಳಿಗೆ ನೆನೆಯುತ್ತದೆ!

ಇಡಿಯ ವಿಶ್ವವೇ ನಮ್ಮ ಜೋಗದತ್ತ ತಿರುಗಿನೋಡುವಂತಹ ಅಭಿವೃದ್ಧಿ ಈಗ ಆಗುತ್ತದೆ! ಜೋಗ ಜಲಪಾತ ರಮಣೀಯತೆಗಾಗಿ ಕಾರ್ಯಾನುಷ್ಠಾನ ಚರ್ಚೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 11, 2020
in ಶಿವಮೊಗ್ಗ
0
ಈ ಒಂದು ಕಾರ್ಯಕಾರ್ಯಕ್ಕಾಗಿ ಯಡಿಯೂರಪ್ಪ, ರಾಘವೇಂದ್ರರನ್ನು ಭವಿಷ್ಯದ ಪೀಳಿಗೆ ನೆನೆಯುತ್ತದೆ!
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಜೋಗ ಜಲಪಾತ ಸರ್ವಋತು ಪ್ರವಾಸೀ ತಾಣವಾಗಿ ಅಭಿವೃದ್ಧಿ ನಡೆಸಲು ಈಗಾಗಲೇ ನೀಲನಕ್ಷೆ ತಯಾರಾಗಿ ಸರ್ಕಾರದಿಂದ ಹಣ ಮಂಜೂರಾಗಿದೆ.

ಇದೀಗ, ಮಾನ್ಯ ಮುಖ್ಯಮಂತ್ರಿಗಳಿಂದ ಕಳುಹಿಸಲ್ಪಟ್ಟ ಕೆಪಿಟಿಸಿಎಲ್ ಎಂಡಿ, ಜಂಗಲ್ ಲಾಡ್ಜ್‌ ಎಂಡಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಅರಣ್ಯ ಇಲಾಖೆ ಮುಖ್ಯಸ್ಥರು ಸ್ಥಳೀಯ ಅಧಿಕಾರಿಗಳು, ಎಂಎಡಿಬಿ ಅಧ್ಯಕ್ಷ ಶ್ರೀ ಗುರುಮೂರ್ತಿ, ಕಾರ್ಯಪಡೆ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಪ್ರಸನ್ನ ಕೆರೆಕೈ ಅವರನ್ನೊಳಗೊಂಡ ಸಭೆಯಲ್ಲಿ ಕನಸುಗಾರ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರು ಕಾರ್ಯಾನುಷ್ಠಾನಕ್ಕೆ ಬೇಕಾದ ಸಿದ್ದತೆ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಸುಮಾರು 3 ಗಂಟೆ ನಡೆದ ಸಭೆ ಹಾಗೂ ಕೆಲಸದ ಅಗತ್ಯವಿರುವ ಸ್ಥಳಗಳಿಗೆ ಭೇಟಿ ಕೂಡಾ ನೀಡಲಾಯಿತು.

ಜಿಲ್ಲೆ-ರಾಜ್ಯ-ರಾಷ್ಟ್ರಕ್ಕೆ ಮಾದರಿಯಾಗುವುದಕ್ಕಿಂತ ಇದೊಂದು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಬೇಕು. ವರ್ಷ ಪೂರ್ತಿ ವಿಶ್ವದಾದ್ಯಂತ ಪ್ರವಾಸಿಗರು ಮೆಚ್ಚಿ ಬರಬೇಕು, ಸ್ಥಳೀಯರಿಗೆ ಉದ್ಯೋಗದಾಯಿನಿಯಾಗಬೇಕು, ಮಲೆನಾಡಿನ ಸೊಬಗು ಉಳಿಸಿಕೊಂಡು, ಭವಿಷ್ಯದ ಯೋಜನೆಗಳಿಗೂ ತಳಪಾಯವಾಗುವ ದೃಷ್ಠಿಯಲ್ಲಿ ಜೋಗ ಅಭಿವೃದ್ಧಿಯಾಗಬೇಕು.


ಇಲ್ಲಿನ ಹಸಿರು-ನೆಲ-ಜಲ ತಾಣಗಳ ರಮಣೀಯತೆ ಉಳಿಸಿಕೊಂಡು ಆಕರ್ಷಣೀಯವಾಗಿಸಬೇಕು. ಅದಕ್ಕಾಗಿ ಕೆಲಸ ಪ್ರಾರಂಭಕ್ಕಿಂತ ಮೊದಲು ಸಾಧಕ-ಭಾದಕ ಚರ್ಚಿಸಲು ಈ ಸಭೆ ಕರೆದಿದ್ದೇನೆ. 2020ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಅರ್ಧ ಭಾಗ ಕೆಲಸ ಮುಗಿಯಬೇಕು. ನಮ್ಮ ಜಿಲ್ಲೆಯ ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಜಲಧಾರೆ ಹರಿಸುತ್ತಿರುವ ಶರಾವತಿ ತೀರ ಪ್ರೇಕ್ಷಣೀಯ ಸ್ಥಳವಾಗಿ ವಿಶ್ವವಿಖ್ಯಾತಿ ಪಡೆಯಲು ಬೇಕಾದ ಅಂಶಗಳನ್ನು ದೂರದೃಷ್ಠಿಯಿಂದ ನಾವು ಕಾರ್ಯರೂಪಕ್ಕೆ ತರಬೇಕೆಂದು ಸಂಸದ ಶ್ರೀ ಬಿ.ವೈ. ರಾಘವೇಂದ್ರ ತಮ್ಮ ಪ್ರಸ್ತಾವನೆ ಭಾಷಣದಲ್ಲಿ ಸಭೆಗೆ ಮನವರಿಕೆ ಮಾಡಿದರು.

ಇದರಲ್ಲಿ ಕೇವಲ ಅಭಿವೃದ್ಧಿ ಮಾತ್ರ ಪರಿಗಣಿಸದೇ ಸಂಸದರು ದೂರದೃಷ್ಠಿ ಆಲೋಚನೆ, ಪರಿಸರ ಸ್ನೇಹಿ ವಿಚಾರಗಳು, ಎಲ್ಲ ಮಾದರಿಯ ಪ್ರವಾಸಿ ತಾಣ ಮಾಡುವ ಕಲ್ಪನೆ ಹಾಗೂ ಪ್ರವಾಸಿಗರ ಅನುಕೂಲ ಕಲ್ಪಿಸುವ ಹುಮ್ಮಸ್ಸು ಕಂಡಿದ್ದು ವಿಶೇಷ.

ಜಂಗಲ್ ಲಾಡ್ಜ್‌ ಎಂಡಿ ಶರ್ಮಾ ಅವರು ಮಾತನಾಡಿ, ತಲಕಳಲೆ ಡ್ಯಾಂ ಹಿನ್ನೀರಿನಲ್ಲಿ ಜಲಸಾಹಸ, ದೋಣಿ ವಿಹಾರ ಎಲ್ಲ ಮಾಡಬಹುದು. ಹತ್ತಿರದ ಹಿನ್ನೀರಿನ ಜಾಗಕ್ಕೆ ಅರ್ಧ ದಿನದ ಜಲಕ್ರೀಡೆಗೆ-ವಿಹಾರಕ್ಕೆ ಅನುಕೂಲ ಮಾಡಲು ಸೂಚಿಸಿದರು. ಅಗತ್ಯವಿದ್ದರೆ ಅರಣ್ಯ ಇಲಾಖೆ ಸಹಾಯ ಪಡೆಯಬಹುದೆಂದರು. ಪಕ್ಕದಲ್ಲಿ ಇರುವ ಮೇಲ್ದಂಡೆಯನ್ನು ವಿಶೇಷ ಮಕ್ಕಳ ಪಾರ್ಕ್ ಮಾಡಲು ಅನುಮತಿಯಿತ್ತರು.

ಕೆಪಿಟಿಸಿಎಲ್ ಎಂಡಿ ಶ್ರೀ ಪೊನ್ನುರಾಜ್ ಮಾತನಾಡಿ, ತಮ್ಮ ಇಲಾಖೆ ಸರ್ವ ಋತುವಿನಲ್ಲೂ ಜಲಪಾತ ಮಾಡಲು ನೀರು ಬಿಡುತ್ತೇನೆಂದೂ, ಅಗತ್ಯವಿರುವ ಸೇತುವೆ, ಸುರಂಗ ನಿರ್ಮಾಣ ಮಾಡಲು ಸೂಚಿಸಿದರು. ಲಿಂಗನಮಕ್ಕಿಯಿಂದ ನೇರ ಜಲಪಾತಕ್ಕೆ ಸರ್ವಕಾಲದಲ್ಲೂ ಬಿಟ್ಟು ಜಲಪಾತದಲ್ಲಿ ನೀರು ಹರಿಯುವಂತೆ(ಶನಿವಾರ-ಭಾನುವಾರ) ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಜಲವಿಹಾರಕ್ಕೆ ಹಲವು ತಾಣಗಳನ್ನು ಜೋಡಿಸುವಂತೆ ಸಲಹೆ ನೀಡಿದರು.
1 ದಿನ-2 ದಿನದ ಪ್ರವಾಸದ ಏರ್ಪಾಡು ಮಾಡಲು, ಎಬಿ ಸೈಟ್’ನಿಂದ ಕೆಪಿಸಿ ಹತೋಟಿಯಲ್ಲಿರುವ ಜಾಗಗಳಿಗೆ ಅವರ ವಾಹನದಲ್ಲೇ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಶ್ರೀ ರಮೇಶ್ ಮಾತನಾಡಿ, ಆಕರ್ಷಣೆ ಮಾಡಿ, ಜನ ಲಭ್ಯವಾಗುವಂತೆ, ತಂಗಲು ವ್ಯವಸ್ಥೆ, ಊಟೋಪಚಾರ, ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಲು ಇಲಾಖೆ ಸಿದ್ದವಿದೆ. ಕೂಡಲೇ ಅಗತ್ಯವಿರುವ ಯೋಜನಾ ಅಂಗೀಕಾರ ಪಡೆಯುತ್ತೇವೆ ಎಂದರು.

ಜಲಪಾತದ ಕೆಳಗಿಳಿದು ನೀರು ಮುಟ್ಟಿ ಆಹ್ಲಾದಿಸಲು ಲಿಫ್ಟ್‌ ವ್ಯವಸ್ಥೆ, ವಯಸ್ಸಾದವರು ಹಾಗೂ ವಿಕಲಾಂಗರುಗಳಿಗೆ ವಿಶೇಷ ವಾಹನ ಅನುಕೂಲ ಕಲ್ಪಿಸಿದರೆ ಜೋಗ ಗುಂಡಿ ನೋಡುವ ಕನಸು ನನಸಾಗುತ್ತದೆ ಎಂದರು.

ಅದಲ್ಲದೇ, ವಿವಿಧ ಇಲಾಖೆಯ ಸಹಭಾಗಿತ್ವ ಇರುವುದರಿಂದ ಸಮನ್ವಯತೆ ಸಂಕಲ್ಪ ಸಿದ್ದಿ ಸಾಧಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಶ್ರೀ ಶಿವಕುಮಾರ್ ಮಾತನಾಡಿ, ಇಲ್ಲಿ ನೀರಿನ ಫೌಂಟೇನ್, ಆಂಪಿಥಿಯೇಟರ್, ವೀಕ್ಷಣಾ ಗೋಪುರ, ರೋಪ್ ವೇ, ಜಲಸಾಹಸ ತಾಣ, ವಸತಿಗೃಹ ನಿರ್ಮಾಣ, ಹೊಟೇಲ್, ಕರಕುಶಲ ವಸ್ತು ಮಾರಾಟ, ವಿವಿಧ ಮಾರಾಟ ಮಳಿಗೆ, ಸ್ವಚ್ಛ ಸುಂದರ ಊಟೋಪಚಾರ ಸಿಗುವಂತೆ ಯೋಜನೆ ಸಿದ್ದವಾಗಿದೆ. ಮೇಲ್ಬಾಗದಲ್ಲಿರುವ 15 ಗುಂಟೆ ಜಾಗದಲ್ಲಿ ನಿಸರ್ಗ ಚಿಕಿತ್ಸಾಲಯ, ಔಷಧಿವನ ನಿರ್ಮಾಣ ಮಾಡಲು ಯೋಜಿಸಬೇಕು ಎಂದರು.

ಎಂಎಡಿಬಿ ಅಧ್ಯಕ್ಷ ಶ್ರೀ ಗುರುಮೂರ್ತಿ ಮಾತನಾಡಿ, ಜೋಗ ಸುತ್ತ ಇರುವ ಹಿನ್ನೀರಿನಲ್ಲಿರುವ ಕೆಪಿಸಿಗೆ ಸೇರಿದ ಜಾಗ ಎಷ್ಟಿದೆ ಎಂದು ಸರ್ವೆ ನಡೆಸಿ, ಹತ್ತಿರದ ಹಳ್ಳಿಗಳಿಗೆ ಸೌಲಭ್ಯ ಕಲ್ಪಿಸುವ ಸಾಧ್ಯತೆಯನ್ನು ಅಂದಾಜು ಮಾಡಲು ಶ್ರೀ ಪೊನ್ನುರಾಜ್ ಅವರಲ್ಲಿ ಮನವಿ ಮಾಡಿದರು.
ಸುತ್ತಲಿನ ಹಳ್ಳಿಗಳಿಗೆ ಅಭಿವೃದ್ಧಿ ಕಲ್ಪಿಸಿದರೆ ಅವರೂ ಸ್ಥಳೀಯ ಪ್ರವಾಸಿ ಪ್ರೇರಕರಾಗುತ್ತಾರೆ ಎಂದರು.

ಮಾನ್ಯ ಸಂಸದರು ಕೊನೆಯಲ್ಲಿ ಜೋಗ ವಿಶ್ವವಿಖ್ಯಾತ ಮಾಡಲು ಶ್ರಮಿಸೋಣ, ನೆಲ-ಜಲ-ಪ್ರಾಕೃತಿಕ ಸೌಂದರ್ಯವನ್ನು ಚೆನ್ನಾಗಿಟ್ಟುಕೊಂಡು ಆಕರ್ಷಣೀಯ ಮಾಡೋಣ. ಈ ಹಂತದಲ್ಲಿ 120 ಕೋಟಿ ಸಿಕ್ಕಿದೆ. ಕಾಲಾನುಕ್ರಮದಲ್ಲಿ ಇನ್ನೂ ಹೆಚ್ಚಿಗೆ ಸೌಲಭ್ಯ ಕಲ್ಪಿಸಬಹುದು. ಕೇವಲ ಉತ್ಸಾಹವಿದ್ದರೆ ಸಾಲದು, ಸಮನ್ವಯತೆ, ಬದ್ದತೆ, ಕಾಲಮಿತಿ, ದೂರದೃಷ್ಠಿಯಿಂದ ಕೆಲಸ ಮಾಡಿ ಸಾಧಿಸೋಣ ಎಂದರು.

ಗಮನಾರ್ಹ ಅಂಶವೆಂದರೆ ಹಿನ್ನೀರಿನ ಅರಣ್ಯದಲ್ಲಿ ಶಿವಪ್ಪನಾಯಕನ ಕಾಲದ ಮ್ಯೂಸಿಯಂ ಇದೆ. ಅದನ್ನು ಅಭಿವೃದ್ಧಿಪಡಿಸಿ ಚರಿತ್ರಾರ್ಹ ಮಾಡಲು ಶ್ರೀ ಪೊನ್ನುರಾಜ್ ಸೂಚಿಸಿದ್ದನ್ನು ಸಭೆ ಒಪ್ಪಿ, ಇದೇ ಯೋಜನೆಯಲ್ಲಿ ಅದರ ವೆಚ್ಚವನ್ನು ಭರಿಸಲು ಸಂಸದರು ಸೂಚಿಸಿದರು.

ಯೋಜನಾ ತಜ್ಞ ಶ್ರೀ ರಂಗನಾಥ್, ಮುಖ್ಯಮಂತ್ರಿಗಳ ಕಚೇರಿಯ ಶ್ರೀ ಸುರೇಶ್, ಶ್ರೀ ರಾಜಪ್ಪ ಮತ್ತಿತರ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಸಲಹೆ ನೀಡಿದರು.

ಕೊನೆಯಲ್ಲಿ ನನಗನಿಸುದಿಷ್ಟು
ಅಂದು ಕಾಡ ನಡುವೆ ಬೀಳುತ್ತಿರುವ ಜಲಪಾತ ನೋಡಿ ಅಭಿವೃದ್ಧಿಯ ಕಡೆ ಚಿಂತಿಸಿ ವಿದ್ಯುತ್ ಉತ್ಪಾದನೆ ಮಾಡಿದರು. ನಂತರ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇತ್ತೀಚಿನ ವರ್ಷದಲ್ಲಿ ಸೌಲಭ್ಯ ವಂಚಿತವಾಗಿ ಹಾಳುಬಿದ್ದಿತ್ತು. 60 ವರ್ಷಗಳ ನಂತರ ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಜೋಗ ಜಲಪಾತ ನಳನಳಿಸುವಂತೆ ಮಾಡುವ ಕನಸು ಕಂಡರು. ಇದೀಗ ಸಂಸದ ಬಿವೈಆರ್, ಹರತಾಳು ಹಾಲಪ್ಪ ಸೇರಿ ಜೋಗ ಜಲಪಾತದ ವೈಭವ ಮರುಕಳಿಸುವಂತೆ ಮಾಡಲು ಹಗಲಿರುಳು ಶ್ರಮಿಸಿ, ಕಾರ್ಯಾನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಕೇವಲ 3 ತಿಂಗಳಲ್ಲಿ ಪಟ್ಟು ಬಿಡದೇ ಯೋಜನಾ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮಾನ್ಯ ಮುಖ್ಯಮಂತ್ರಿಗಳನ್ನು ಈಗಷ್ಟೇ ಅಲ್ಲದೇ ಭವಿಷ್ಯದ ಪೀಳಿಗೆಯೂ ನೆನಪಿಸಿಕೊಳ್ಳುತ್ತದೆ.


Get In Touch With Us info@kalpa.news Whatsapp: 9481252093

Tags: B S YediyurappaJog FallsKannada News WebsiteLakshmi Narayana KashiLatest News KannadaLocal NewsMalnad NewsMP B Y Raghavendraಜೋಗ ಜಲಪಾತಬಿ.ಎಸ್. ಯಡಿಯೂರಪ್ಪಬಿ.ವೈ. ರಾಘವೇಂದ್ರಮಲೆನಾಡು ಸುದ್ಧಿಲಕ್ಷ್ಮೀ ನಾರಾಯಣ ಕಾಶಿಶಿವಮೊಗ್ಗ ನ್ಯೂಸ್
Share200Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಿತೃ ಪಕ್ಷ: ಅಮಾವಾಸ್ಯೆಯಂದು ಪಿಂಡದಾನದ ವೈಜ್ಞಾನಿಕ ಹಿನ್ನೆಲೆಯೇನು?

Next Post

ಪಿತೃ ಪಕ್ಷ: ಪಿತೃಗಳಿಗೆ ತಿಲ ತರ್ಪಣವೇಕೆ? ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪಿತೃ ಪಕ್ಷ: ಪಿತೃಗಳಿಗೆ ತಿಲ ತರ್ಪಣವೇಕೆ? ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ?

ಪಿತೃ ಪಕ್ಷ: ಪಿತೃಗಳಿಗೆ ತಿಲ ತರ್ಪಣವೇಕೆ? ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
`ಬೂತ್ ವಾಸ್ತವ್ಯ’ | ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ನಿವಾಸದಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ

`ಬೂತ್ ವಾಸ್ತವ್ಯ’ | ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ನಿವಾಸದಲ್ಲಿ ಶಾಸಕ ಚನ್ನಬಸಪ್ಪ ವಾಸ್ತವ್ಯ

June 16, 2026
ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

ಐಎಲ್‍ಐಎಫ್ ಅಧ್ಯಕ್ಷರಾಗಿ ವಿಶ್ವಾಸ್ ಯಲಬುರ್ಗಿ, ಉಪಾಧ್ಯಕ್ಷರಾಗಿ ಹೊಯ್ಸಳ ಆಯ್ಕೆ

June 16, 2026
ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಒತ್ತಾಯಿಸಿ ಜೂ.20ರಂದು ಪ್ರತಿಭಟನೆ

ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಒತ್ತಾಯಿಸಿ ಜೂ.20ರಂದು ಪ್ರತಿಭಟನೆ

June 16, 2026
Shivamogga Mahanagara Palike

ಮಹಾನಗರ ಪಾಲಿಕೆ ಆಯುಕ್ತರ ಜೊತೆ ನಾಳೆ ಮುಖಾಮುಖಿ

June 16, 2026
Blood Donation Camp Successfully Organised at Mysuru Division

ಸಮಾಜದ ಒಳಿತಿಗಾಗಿ ರಕ್ತದಾನ ಅತ್ಯವಶ್ಯ: ಮುದಿತ್ ಮಿತ್ತಲ್ 

June 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL