ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರಸ್ತುತ ಕೊರೋನಾ ವಿರುದ್ಧ ಲಸಿಕಾ ಅಭಿಯಾನ ಭರದಿಂದ ಸಾಗಿದ್ದು, ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಎರಡನೆಯ ಹಂತದ ಲಸಿಕೆ ನೀಡುವ ಕಾರ್ಯ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಲಸಿಕೆ ನೀಡುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರೆಯಿತು. ಲಸಿಕೆಗಾಗಿ ಆಗಮಿಸಿದ ಹಿರಿಯರಿಗೆ ಸೂಕ್ತ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ತೀರ ದೈಹಿಕವಾಗಿ ದುರ್ಬಲರಾದರಿಗೆ ಆದ್ಯತೆ ಮೇರೆ ಕರೆಯಲಾಗುತ್ತಿತ್ತು. ಓರ್ವ ವೃದ್ದ ಮಹಿಳೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಪಾದಕ್ಕೆ ಶಕ್ತಿ ಸಾಲದೇ ಕುಸಿದು ಕುಳಿತರು. ತಕ್ಷಣ ಇಲಾಖೆ ಸಿಬ್ಬಂದಿ ಗಾಲಿ ಕುರ್ಚಿ ಒದಗಿಸಿದರು. ಸಮಾಧಾನದಿಂದ ಮಾತಾಡುತ್ತಿದ್ದ ಸಿಬ್ಬಂದಿಗಳ ನಡವಳಿಕೆ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ಮೊದಲಿಗೆ ಆಫ್ ಲೈನ್ ನೋಂದಣಿ ಹತ್ತು ಮಂದಿ ಜೊತೆಗೆ ಆನ್‌ಲೈನ್ ನೋಂದಣಿ ಮಾಡಿಸಿದ ಹತ್ತು ಮಂದಿಯನ್ನ ಪ್ರಕಟಣೆ ಮೂಲಕ ಕರೆಯಲಾಗುತ್ತಿತ್ತು. ಎಲ್ಲವನ್ನೂ ಅತ್ಯಂತ ಹಿತವಾಗಿ ವ್ಯವಸ್ಥೆಗೊಳಿಸಿದ ಜಿಲ್ಲಾ ನರ್ಸಿಂಗ್ ತರಬೇತಿ ಕೇಂದ್ರದ ಅಧಿಕಾರಿ, ಸಿಬ್ಬಂದಿ ವರ್ಗ ಅಭಿನಂದನಾರ್ಹರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















