ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೆರೆ ಪರಿಹಾರ ನಿಧಿ ಅಡಿ ನಾಲೆಗೆ ತಡೆಗೋಡೆ ನಿರ್ಮಿಸುವಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಅಧ್ಯೆಕ್ಷೆ ಕೆ.ಬಿ ಪವಿತ್ರ ರಾಮಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ.
ಅವರು ಇತ್ತೀಚೆಗೆ ಯಲವಟ್ಟಿ ಗ್ರಾಮದ ರೈತರ ಜಮೀನಿಗೆ ತೆರಳಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ್ದು, ಯಲವಟ್ಟಿ ಗ್ರಾಮದ ಕರ್ಲುಗುಂಡಿ ನಾಲೆ ದಂಡೆಯು ಕಳೆದ ವಾರ ಸುರಿದ ಮಳೆಗೆ ಹಾನಿಗೊಳಗಾಗಿದ್ದು, ಕರ್ಲುಗುಂಡಿ ನಾಲೆಯ ಅಕ್ಕಪಕ್ಕದ ರೈತರು ಜಮೀನಿಗೆ ತೆರಳುವ ರಸ್ತೆ ಹಾಗೂ ನಾಲೆಯು ಸಂಪೂರ್ಣ ದುರಸ್ಥಿ ಹೊಂದಿದ್ದು, ಈ ನಾಲೆಗೆ ಸುಮಾರು 200 ಮೀ ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ತಿಳಿಸಿದರು.

ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದರು.
Also read: ಹಿಜಾಬ್ ವಿವಾದ ಆರು ವಿದ್ಯಾರ್ಥಿನಿಯರು ಸಸ್ಪೆಂಡ್ : 12 ವಿದ್ಯಾರ್ಥಿನಿಯರು ಮನೆಗೆ ವಾಪಸ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















