ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುಷಃ ಸ್ಮಾರ್ಟ್ ಸಿಟಿ ಯೋಜನೆಯ ಅಸಮರ್ಪಕ ಕಾಮಗಾರಿಯ ಪರಿಣಾಮ ಎಂದೇ ಹೇಳಬಹುದಾದ ಘಟನೆ ಇಂದು ನಗರದಲ್ಲಿ ನಡೆದಿದೆ.
ಹೌದು… ಕೋಟೆ ಏರಿಯಾ ಹಾಗೂ ಹೊಸಮನೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕರೆಂಟ್ ಶಾಕ್’ನಿಂದ ಜನರ ಭಯ ಪಟ್ಟಿದ್ದಾರೆ.
ಪ್ರಕರಣ-1: ಹೊಸಮನೆ ಬಡಾವಣೆ
ಹೊಸಮನೆಯಲ್ಲಿ ವಿದ್ಯುತ್ ಕೇಬಲ್ ಸಂಪರ್ಕ ನೀಡಲಾಗುತ್ತಿದ್ದು, ಫೀಡರ್ ಬಾಕ್ಸ್’ನಿಂದ ಸಂಪರ್ಕ ಕಲ್ಪಿಸಿರುವ ಕೆಲವು ಮನೆಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದ್ದು, ಜನರ ಭಯಭೀತರಾಗಿದ್ದರು.
ಈ ಭಾಗದಲ್ಲಿ ಭಾಗ್ಯಮ್ಮ ಎಂಬ ಮಹಿಳೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ವರದಿಯಾಗಿದೆ.
ಪ್ರಕರಣ-2: ಕೇಬಲ್ ಬ್ಲಾಸ್
ಇನ್ನು, ಹೊಸಮನೆಯ ಚಾನೆಲ್ ಬಲಭಾಗದ ಎರಡನೆಯ ತಿರುವಿನಲ್ಲಿ ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೋಟೆ ಆಂಜನೇಯ ದೇವಾಲಯದ ಬಳಿಯ ಶಿವಪ್ಪ ನಾಯಕ ಅರಮನೆಗೆ ಹೋಗುವ ಮುಂಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಗ್ರಿಲ್’ನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದೆ. ಹೀಗಾಗಿ, ಸ್ಥಳೀಯರು ಟೆಸ್ಟರ್ ಹಿಡಿದು ನೋಡಿದಾಗ ಕರೆಂಟ್ ಹರಿಯುತ್ತಿರುವುದು ತಿಳಿದುಬಂದಿದೆ.
ಈ ಕುರಿತಾಗಿನ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು, ಘಟನೆ ವಿಚಾರಗಳು ತಿಳಿದಾಕ್ಷಣ, ಸ್ಮಾರ್ಟ್ ಸಿಟಿ ಎಲೆಕ್ಟಿçಕ್ ತಂಡ ಹಾಗೂ ಮೆಸ್ಕಾಂ ಎಈಈ ಮಹಾದೇವಯ್ಯ ಅವರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















Discussion about this post