ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀಮನ್ಮಧ್ವಾಚಾರ್ಯರ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಲಾಗಿದ್ದ ಶೋಭಾಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಶ್ರೀಮಧ್ವಾಚಾರ್ಯರ ಮೂಲಮಹಾ ಸಂಸ್ಥಾನವಾದ ಶ್ರೀ ಮಾಧವತೀರ್ಥರ ಪರಂಪರೆಯ ತಂಬಿಹಳ್ಳಿ ಮಠದ ಶ್ರೀಶ್ರೀವಿಧ್ಯಾಸಾಗರ ಮಾಧವತೀರ್ಥ ಶ್ರೀಪಾದಂಗಳವರು, ಮತ್ತು ಕಿರಿಯ ಪೀಠಾಧಿಪತಿಗಳಾದ ಶ್ರೀಶ್ರೀ ವಿಧ್ಯಾ ವಲ್ಲಭ ಮಾಧವ ತೀರ್ಥ ಶ್ರೀಪಾದಂಗಳವರು ಶೋಭಾ ಯಾತ್ರೆಗೆ ಮಂಗಳಾರತಿ ಮಾಡುವ ಮುಖಾಂತರ ಚಾಲನೆ ಕೊಟ್ಟು, ಶೋಭಾ ಯಾತ್ರೆಯಲ್ಲಿ ಬಾಗವಹಿಸಿ ಭಕ್ತರನ್ನು ಆರ್ಶೀವದಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಧ್ವಾಚಾರ್ಯರ ಜೀವನ ಮತ್ತು ಉಪದೇಶದ ಕುರಿತು ಹಿರಿಯ ವಿದ್ವಾಂಸರಾದ ಡಾ.ಎಸ್.ಆರ್. ರಾಘವೇಂದ್ರ, ಹರಿದಾಸ ಸಾಹಿತ್ಯ ಮತ್ತು ಮಧ್ವಾಚಾರ್ಯರ ಕುರಿತು ಪ್ರಾಧ್ಯಾಪಕಿ ಡಾ.ವಾಣಿಶ್ರೀ ಗಿರೀಶ್, ಮಾಧ್ವರ ಕೊಡುಗೆಗಳು ಕುರಿತು ಸಂಸ್ಕೃತಿ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿದರು.
Also read: ಭಾರತವನ್ನು ಒಗ್ಗೂಡಿಸುವುದೇ ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶ: ರಾಹುಲ್ ಗಾಂಧಿ
ವಿಎಂಡಬ್ಲ್ಯೂ ಸಂಸ್ಥಾಪಕ ಅಧ್ಯಕ್ಷ ವೆಂಕೋಬ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ನಿವಾಸ ಜೋಷಿ ಅಧ್ಯಕ್ಷರು ಬೆಂಗಳೂರು ನಗರ ವಿಶ್ವ ಮಧ್ವಮತ ವೆಲ್ಫೇರ ಅಸೋಸಿಯೇಷನ್, ಚಾಮರಾಜಪೇಟೆ ಶ್ರೀಮನ್ ಮದ್ವ ಸಂಘದ ಅಧ್ಯಕ್ಷ ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.











Discussion about this post