ಕಲ್ಪ ಮೀಡಿಯಾ ಹೌಸ್ | ಮಥುರಾ |
ಉತ್ತರ ಪ್ರದೇಶ ಮಥುರಾದಲ್ಲಿ ಪೇಜಾವರ ಮಠದ ವತಿಯಿಂದ ಶ್ರೀ ಗೋವಿಂದ ಧಾಮವನ್ನು ನಿರ್ಮಿಸಲು, ಶಿಲಾನ್ಯಾಸ ನೆರವೇರಿಸಲಾಗಿದೆ.
ಮಥುರಾ ಸಮೀಪದ ಬರ್ಸಾನಾದಲ್ಲಿ ನಿರ್ಮಾಣವಾಗಲಿರುವ ಗೋವಿಂದ ಧಾಮಕ್ಕೆ ಶ್ರೀಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.
ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಪ್ರೇರಣೆಯಿಂದ ಆ ಪ್ರದೇಶದಲ್ಲಿ ಶ್ರೀ ಮಧ್ವಾಚಾರ್ಯರ ಸಂದೇಶ ಪ್ರಸಾರಕಾರ್ಯದಲ್ಲಿ ನಿರತರಾಗಿರುವ ತಿಜಾರಾದ ಪ್ರೇಮಪೀಠದ ಆಚಾರ್ಯ ಶ್ರೀ ಲಲಿತ್ ಮೋಹನ್ ಅವರ ನೇತೃತ್ವದಲ್ಲಿ ಈ ನೂತನ ಆಶ್ರಮವು ನಿರ್ಮಾಣಗೊಳ್ಳಲಿದೆ.
Also read: ಸತತವಾಗಿ 4ನೆಯ ಬಾರಿ `ಎ’ ಗ್ರೇಡ್ ಉಳಿಸಿಕೊಂಡ ಕರ್ನಾಟಕ ವಿಶ್ವವಿದ್ಯಾಲಯ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















