ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗಾಂಧಿಬಜಾರಿನ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪವಾಡವೊಂದು ಜರುಗಿದೆ.
ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ದೀಪೋತ್ಸವದ ನಂತರ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿ.ಎಸ್. ಅರುಣ್ ಅವರು ಹಾರುದೀಪವೊಂದನ್ನು (Flying Lantern) ಹಾರಿಬಿಟ್ಟರು. ಕೆಲವು ಕ್ಷಣ ನಿಂತಲ್ಲಿಯೇ ನಿಂತ ಆ ಹಾರುದೀಪವು ನಂತರ ಗಾಳಿಯ ವಿರುದ್ದ ದಿಕ್ಕಿಗೆ ಚಲಿಸಿ ದೇಗುಲದ ಗೋಪುರದ ಬಳಿ ಬಂದು ವಾಸವಿ ಮಾತೆಯ ಬೃಹತ್ ಪ್ರತಿಮೆಯ ಅಡಿಯಿಂದ ಮುಡಿವರೆಗೆ ಆರತಿ ಬೆಳಗುವಂತೆ ಸಾಗಿ ಕ್ಷಣಾರ್ಧದಲ್ಲಿ ಗಾಳಿ ಬೀಸುವ ದಿಕ್ಕಿಗೆ ಹಾರಿ ಪವಾಡ ಸದೃಶ ಸನ್ನಿವೇಶ ಸೃಷ್ಟಿಸಿ ನೆರೆದಿದ್ದ ಭಕ್ತ ಸಮೂಹಕ್ಕೆ ಅಚ್ಚರಿಯುಂಟು ಮಾಡಿತು. ಕೊನೆಯಲ್ಲಿ ಹಾರುದೀಪವನ್ನು ಗಮನಿಸುತ್ತಿದ್ದ ಜನರ ನೋಟವನ್ನು ಗಮನಿಸಿದರೆ ಅದು ಸಾಗಿದ ದಿಕ್ಕು ತಿಳಿಯುತ್ತದೆ.
ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಎಡಬಿಡದೇ ರಾಜ್ಯದಾದ್ಯಂತ ಸಂಚರಿಸಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಜಾತಿ ಪ್ರಮಾಣಪತ್ರ ಪಡೆಯಲು ಇದ್ದ ಅಡ್ಡಿ ನಿವಾರಣೆ, ನಿರುದ್ಯೋಗ ನಿವಾರಣೆಗಾಗಿ ‘ಅರಿವು’ ಸಾಲ ಯೋಜನೆ, ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗಾಗಿ ಉಚಿತ ಲ್ಯಾಪ್ ಟಾಪ್ ಹಾಗೂ ‘ವಿದ್ಯಾರ್ಥಿ ಮಿತ್ರ’ ಶೈಕ್ಷಣಿಕ ಸಾಲದಂತಹ ಅತೀ ಅಗತ್ಯ ಯೋಜನೆಗಳ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಲಾಭವನ್ನು ತಲುಪಿಸಿ ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರಿಂದ ಪ್ರಶಂಸೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವ ಡಿ.ಎಸ್. ಅರುಣ್, ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿ ವ್ಯಾಪ್ತಿ ಮೀರಿ ಗುರಿ ಸಾಧನೆಯ ಮೈಲಿಗಲ್ಲು ಸ್ಥಾಪಿಸಿದ ವೇಗವನ್ನು ಗುರುತಿಸಿ, ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಅನುದಾನದ ಭರವಸೆಯನ್ನು ಪಡೆದಿರುವ ಅರುಣ್ ರವರ ಪ್ರತಿಫಲಾಪೇಕ್ಷೆಯಿಲ್ಲದ ನಿಷ್ಕಲ್ಮಷ ಸೇವೆಯ ಭಾಗವಾಗಿ ತಾಯಿ ವಾಸವಿಯ ಆಶೀರ್ವಾದವೇ ಈ ಪವಾಡ ಸನ್ನಿವೇಶ ಎಂಬ ನಂಬಿಕೆ ನೆರೆದ ಭಕ್ತ ಸಮೂಹದ್ದಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post