ನವದೆಹಲಿ: ಪಂಜಾಬ್‌ನ ಅಮೃತಸರ ದುರಂತದಲ್ಲಿ ಮೃತರಾದವರಿಗೆ ಹಾಗೂ ಗಾಯಾಳುಗಳಿಗೆ ಯಾವುದೇ ರೀತಿಯ ಪರಿಹಾರ ನೀಡುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಈ ಘಟನೆ ಹಾಗೂ ಬಲಿಯಾದವರು ಇಲಾಖೆಯ ನಿಯಮದಲ್ಲಿರುವ ರೈಲು ಅಪಘಾತದ ಪಟ್ಟಿಯ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ, ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಲಾಖೆ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ರೈಲ್ವೆ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹಾ, ಘಟ ನೆ ಕುರಿತಂತೆ ರೈಲ್ವೆ ಇಲಾಖೆ ಯಾವುದೇ ರೀತಿಯ ತನಿಖೆಯನ್ನೂ ಸಹ ನಡೆಸುವ ಅಗತ್ಯವಿಲ್ಲ. ರೈಲು ನಿಧಾನಗೊಳಿಸಲು ಚಾಲಕರು ಸೂಚನೆ ನೀಡಿದ್ದಾರೆ. ಆ ಪ್ರದೇಶದಲ್ಲಿ ತಿರುವು ಇದೆ. ಹೀಗಾಗಿ, ಚಾಲಕರಿಗೆ ಮುಂದಿನ ಪ್ರದೇಶ ಕಂಡಿಲ್ಲ. ಅಲ್ಲದೇ, ಚಾಲಕರು ಎಲ್ಲ ರೀತಿಯ ನಿಯಮದಂತೆ ಸೂಚನೆಗಳನ್ನೂ ಸಹ ನೀಡಿದ್ದಾರೆ. ರೈಲು ನಿಗದಿತ ವೇಗದಲ್ಲೂ ಸಹ ಚಲಿಸಿದೆ. ಇಷ್ಟಾದ ಮೇಲೆ ತನಿಖೆ ನಡೆಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಘಟನೆಯಲ್ಲಿ ರೈಲ್ವೆ ಅಧಿಕಾರಿಗಳು ಇಲಾಖೆಯನ್ನು ಸಮರ್ಥನೆ ಮಾಡಿಕೊಂಡಿದ್ದು, ಆ ರೈಲಿಗೆ ನಿಗದಿ ಪಡಿಸಿದ ವೇಗದಲ್ಲೇ ರೈಲು ಸಂಚರಿಸಿದೆ. ಅಲ್ಲದೇ ಅಂತಹ ಸಂದರ್ಭದಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ್ದರೂ ಸಹ ಪ್ರಯೋಜನವಾಗುತ್ತಿರಲಿಲ್ಲ. ಎಲ್ಲಕ್ಕೂ ಪ್ರಮುಖವಾಗಿ ಅಪಘಾತ ನಡೆದ ಪ್ರದೇಶದಲ್ಲಿ ಕತ್ತಲು ಇದ್ದುದ್ದರಿಂದ ಮುಂದಿನ ಪ್ರದೇಶ ಚಾಲಕರಿಗೆ ಕಂಡಿಲ್ಲ ಎಂದು ಇಲಾಖೆ ಹೇಳಿದೆ.
ಇದರ ಬೆನ್ನಲ್ಲೇ, ಘಟನೆಯಲ್ಲಿ ಮೃತಪಟ್ಟ 13 ವರ್ಷದ ಬಾಲಕನ ಶವವನ್ನು ಅಮೃತಸರ ಹೆದ್ದಾರಿಯಲ್ಲಿಟ್ಟು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.
#Punjab: Family of 13-year-old boy who died in #AmritsarTrainAccident yesterday, protests with his body at Amritsar-Jalandhar highway, demands compensation pic.twitter.com/PiyiSdakzy
— ANI (@ANI) October 20, 2018
Discussion about this post