ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದೆಡೆ ಸಚಿವ ಕೆ.ಎಸ್. ಈಶ್ವರಪ್ಪ #Minister Eshwarappa ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿದ್ದರೆ, ಯಾವುದೇ ಚರ್ಚೆ ಹಾಗೂ ಆಕ್ಷೇಪಣೆ ಇಲ್ಲದೆ ಕರ್ನಾಟಕ ಸಚಿವರ ವೇತನ ಹಾಗೂ ಭತ್ಯೆ (ತಿದ್ದುಪಡಿ) ಮಸೂದೆ ೨೦೨೦ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.
ಯಾರಿಗಿಲ್ಲ ವೇತನ ಹೆಚ್ಚಳ:
ಈ ಮಸೂದೆ ಅಂಗೀಕಾರದಿಂದ ವಿಧಾನಸಭೆ, ವಿಧಾನಪರಿಷತ್ ಸದಸ್ಯರುಗಳು ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಸಭಾಪತಿ, ಉಪಸಭಾಪತಿ ಹಾಗೂ ಇವರುಗಳ ನಿವೃತ್ತಿ ವೇತನವೂ ಸಹ ಹೆಚ್ಚಾಗುವ ಜೊತೆಯಲ್ಲಿ ಮನೆ ಬಾಡಿಗೆ, ಪ್ರಯಾಣ ವೆಚ್ಚ ಹಾಗೂ ಇತರ ಭತ್ಯೆಗಳೂ ಸಹ ಏರಿಕೆಯಾಗಲಿದೆ.
Also read: ಹರ್ಷ ಹತ್ಯೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಭದ್ರಾವತಿ ವಿಹಿಂಪ ಮನವಿ
ಯಾರಿಗೆ ಎಷ್ಟು ಸಂಬಳ?
ಮುಖ್ಯಮಂತ್ರಿ – 50 ರಿಂದ 75ಸಾವಿರ ರೂ.ಗೆ ಏರಿಕೆ
ಸಂಪುಟ ದರ್ಜೆ ಸಚಿವರು – 40 ರಿಂದ 60 ಸಾವಿರ ರೂ.ಗೆ ಏರಿಕೆ
ಮುಖ್ಯಮಂತ್ರಿ ಮತ್ತು ಮಂತ್ರಿಗಳ ಆತಿಥ್ಯ ಭತ್ಯೆ _ ವಾರ್ಷಿಕ 3 ರಿಂದ 4.5ಲಕ್ಷಕ್ಕೆ ಏರಿಕೆ
ಸಚಿವರ ಮನೆ ಬಾಡಿಗೆ ಭತ್ಯೆ 80 ರಿಂದ 1.20ಲಕ್ಷ ರೂ.ಗೆ ಏರಿಕೆ
ಸಚಿವರ ಮನೆ ನಿರ್ವಹಣೆ ಭತ್ಯೆ – 20 ರಿಂದ 30ಸಾವಿರ ರೂ.ಗೆ ಏರಿಕೆ
ಸಿಎಂ ಹಾಗೂ ಸಚಿವರ ವಾಹನ ಭತ್ಯೆ 2 ಸಾವಿರ ಲೀ. ಪೆಟ್ರೋಲ್‌ಗೆ ಏರಿಕೆ
ವಿಧಾನಸಭಾಧ್ಯಕ್ಷರು, ಉಪಾಧ್ಯಕ್ಷರ ವೇತನ 50 ರಿಂದ 75ಸಾವಿರ ರೂ.ಗೆ ಏರಿಕೆ
ಆತಿಥ್ಯ ಭತ್ಯೆ ವಾರ್ಷಿಕ 3 ರಿಂದ 4ಲಕ್ಷ ರೂ.ಗೆ ಏರಿಕೆ
ಪ್ರಯಾಣ ಭತ್ಯೆ ಕಿಮೀಗೆ 30ರಿಂದ 40ರೂ.ಗೆ ಏರಿಕೆ
ದಿನಭತ್ಯೆ 2ರಿಂದ 3ಸಾವಿರ ರೂ.ಗೆ ಏರಿಕೆ
Also read: ಖ್ಯಾತ ರೇಡಿಯೋ ಜಾಕಿ ರಚನಾ ವಿಧಿವಶ
ಸಭಾಪತಿ, ಸಭಾಧ್ಯಕ್ಷರ ಮನೆ ಬಾಡಿಗೆ ಭತ್ಯೆ 80ರಿಂದ 1.6ಲಕ್ಷ ರೂ.ಗೆ ಏರಿಕೆ
ಪ್ರತಿಪಕ್ಷ ನಾಯಕರ ವೇತನ 40ರಿಂದ 60ಸಾವಿರ ರೂ.ಗೆ ಏರಿಕೆ
ಪ್ರತಿಪಕ್ಷ ನಾಯಕರ ಆತಿಥ್ಯ ಭತ್ಯೆ 2.5ಲಕ್ಷ ರೂ.ಗೆ ಏರಿಕೆ
ವಾಹನ ಭತ್ಯೆ 2ಸಾವಿರ ಲೀ. ಪೆಟ್ರೋಲ್‌ಗೆ ಏರಿಕೆ
ಮುಖ್ಯ ಸಚೇತಕರ ವೇತನ 50ಸಾವಿರ ರೂ.ಗೆ ಏರಿಕೆ
ಶಾಸಕರ ಸಂಬಳ 40ಸಾವಿರ ರೂ.ಗೆ ಏರಿಕೆ
ಶಾಸಕರ ನಿವೃತ್ತಿ ವೇತನ 50ಸಾವಿರ ರೂ.ಗೆ ಏರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post