ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಸ್ತಿತ್ವಕ್ಕೆ ಬಂದ ನಲವತ್ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಮಹಿಳೆಯರನ್ನ ಆಯ್ಕೆ ಮಾಡಿರುವುದು ತುಂಬಾ ಸಂತೋಷದ ಮತ್ತು ಸಂಭ್ರಮದ ವಿಷಯವಾಗಿದೆ ಎಂದು ಹಿರಿಯ ಪತ್ರಕರ್ತರಾದ ನಾಗಮಣಿ ಎಸ್ ರಾವ್ ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ #Karnataka Media Academy ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ನಡೆದ ಸುಳ್ಳು ಸುದ್ದಿ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮುಂಬರುವ ಸರ್ಕಾರಗಳು ಕೂಡ ಇದೇ ಮೇಲ್ಪಂತ್ತಿಯನ್ನು ಅನುಸರಿಸಿ ಮೂರು ನಾಲ್ಕು ವರುಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಹಿಳೆಗೆ ಅವಕಾಶವನ್ನ ಕಲ್ಪಿಸಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದರು.
Also read: ಕೊಪ್ಪಳ: ವರ್ಕಿಂಗ್ ಅಟ್ ಹೈಟ್ ಮತ್ತು ಕಂಪೈನ್ಡ್ ಸ್ಪೇಸ್ ವಿಚಾರಸಂಕಿರಣ ಸಂಪನ್ನ
ಕಾರ್ಯಕಾರಿ ಸಮಿತಿಯಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ ನಾಗಮಣಿ ಅವರು, ಮಹಿಳೆಗೆ ಅವಕಾಶ ಕಲ್ಪಿಸಿದ ಮುಖ್ಯ ಮಂತ್ರಿಗಳಿಗೆ ವಂದನೆಗಳು ಮತ್ತು ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷೆ ಸ್ಥಾನವನ್ನು ಅಲಂಕರಿಸಿದ ಆಯಿಷಾ ಖಾನಂ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post