ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಂದು ಶಿವಮೊಗ್ಗದ ಹರ್ಷ, ಇಂದು ಬೆಳ್ಳಾರೆಯ ಪ್ರವೀಣ್. ಈಗಲಾದರೂ ಹಿಂದೂ ಸಮಾಜ ಹಾಗೂ ಸರ್ಕಾರದ ಮಟ್ಟದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ MP Tejaswi Surya ಹೇಳಿದ್ದಾರೆ.
ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರುವಿನ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿರುವ ಅವರು, ತಮ್ಮ ಆಕ್ರೋಶವನ್ನು ಅಕ್ಷರದ ರೂಪದಲ್ಲಿ ಹೊರ ಹಾಕಿದ್ದಾರೆ.

ಅತ್ಯಂತ ದುಖಃ, ಬೇಸರ ಹಾಗೂ ನೋವಿನಿಂದ ಇದನ್ನು ಬರೆಯುತ್ತಿದ್ದೇನೆ.
ಬಿಜೆಪಿ ಯುವ ಮೋರ್ಚಾದ ನನ್ನ ಸಹೋದರ ಪ್ರವೀಣ್ ನೆಟ್ಟಾರು ರವರ ಬರ್ಬರ ಹತ್ಯೆಯನ್ನು ಖಂಡಿಸಿ, ಅವರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರ ಜೊತೆ ಈಗಷ್ಟೇ ಮಾತನಾಡಿ ಸಾಂತ್ವನ ತಿಳಿಸಿದ್ದೇನೆ. ದೇಶದ ಸಮಸ್ತ ಬಿಜೆಪಿ ಕಾರ್ಯಕರ್ತರ ಕುಟುಂಬ, ಪ್ರವೀಣ್ ರವರ ಕುಟುಂಬದ ಜೊತೆ ನಿಲ್ಲಲಿದೆ. ಹರ್ಷ & ಪ್ರವೀಣ್ ನೆಟ್ಟಾರು ರವರ ಪ್ರಕರಣವನ್ನು U.A.P.A ಕಾಯ್ದೆಯ ವ್ಯಾಪ್ತಿಯಡಿಯಲ್ಲಿ ತಂದು ಸಮಗ್ರ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಯವರಲ್ಲಿ ಕೋರುತ್ತೇನೆ.
ಕಳೆದ 2 ದಿನಗಳಿಂದ ನಾನು ತಿರಂಗಾ ಯಾತ್ರೆಯ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಇರುವುದರಿಂದ ಶ್ರೀನಗರದ ಲಾಲ್ ಚೌಕ್ ನಿಂದ ಕಾರ್ಗಿಲ್ ವರೆಗೆ ಐತಿಹಾಸಿಕ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದೆ. 1952 ರ ನಂತರ ಶ್ರೀನಗರದ ಲಾಲ್ ಚೌಕ್ ನಲ್ಲಿ ಯಾವುದೇ ರಾಜಕೀಯ ಪಕ್ಷದ ವತಿಯಿಂದ ಕಾರ್ಯಕ್ರಮಗಳು ನಡೆದಿರುವುದಿಲ್ಲ. ಬಿಜೆಪಿ ಯುವಮೋರ್ಚಾ ವತಿಯಿಂದ ದೇಶದ ವಿವಿಧ ಭಾಗಗಳ ಹುತಾತ್ಮ ಸೈನಿಕರ ಮನೆಯ ಅಂಗಳದ ಮಣ್ಣನ್ನು ಕಲಷದಲ್ಲಿ ಹೊತ್ತು ತಂದು ಕಾರ್ಗಿಲ್ ಯುದ್ಧ ಸ್ಮಾರಕದ ಪರಿಸರದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದೆ.

ಮಾನ್ಯ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಪೊಲೀಸ್ ಇಲಾಖೆ ಇಂತಹ ಹತ್ಯೆಗಳನ್ನು ಕೇವಲ ಧಾರ್ಮಿಕ ಕಾರಣದ ಹತ್ಯೆ ಎಂಬುದಾಗಿ ಪರಿಗಣಿಸದೇ, ಇದರ ಹಿಂದಿರುವ ವ್ಯವಸ್ಥಿತ ಜಾಲ, ಸಂಚನ್ನು ಬಯಲಿಗೆಳೆಯುವ ಮೂಲಕ ಇದರ ಹಿಂದಿರುವ ವ್ಯವಸ್ಥಿತ ಜಾಲ,ಪ್ರಮುಖ ಸಂಘಟನೆ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಬಿತ್ತುವ ಪ್ರಮುಖ ವ್ಯಕ್ತಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಮನವಿ ಸಲ್ಲಿಸುತ್ತೇನೆ.ಬಿಜೆಪಿ ಯುವ ಮೋರ್ಚಾದ ಸಮಸ್ತ ಕಾರ್ಯಕರ್ತರು ಪ್ರವೀಣ್ ಕುಟುಂಬದೊಂದಿಗೆ ಇರಲಿದ್ದು, ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲಾಗುವುದು.
ಶಿವಮೊಗ್ಗದ ಹರ್ಷ ಭೀಕರ ಹತ್ಯೆಯಾದಾಗಲೂ ಕೂಡ ನಾನು ಮಾನ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದನ್ನು ಈಗಲೂ ಪುನರುಚ್ಚರಿಸಲು ಬಯಸುತ್ತೇನೆ.

- ಪ್ರವೀಣ ನೆಟ್ಟಾರು & ಹರ್ಷ ರವರನ್ನು ಕೊಲೆಗೈದಿರುವ ರೀತಿ ಹಾಗೂ ಕರ್ನಾಟಕದಲ್ಲಿ ಧಾರ್ಮಿಕ ಕಾರಣಗಳಿಗಾಗಿ ನಡೆದಿರುವ ಹಿಂದೂ ಕಾರ್ಯಕರ್ತರ ಸರಣಿಹತ್ಯೆಗಳು, ಕೆಲವು ಮತಾಂಧ ಇಸ್ಲಾಮಿಕ್ ಸಂಘಟನೆಗಳ ಪೂರ್ವನಿಯೋಜಿತ ಸಂಘಟಿತ ಅಪರಾಧ (ಷಡ್ಯಂತ್ರ)ದ ಭಾಗವಾಗಿವೆ. ಇವುಗಳನ್ನು ಕೇವಲ ಸಾಮಾನ್ಯ ಹತ್ಯೆಗಳೆಂದು ಪರಿಗಣಿಸದೇ, ಭಯೋತ್ಪಾದನೆಯ ಪ್ರಕರಣಗಳೆಂದು ಪರಿಗಣಿಸಬೇಕು. ಸಾಮಾನ್ಯ ಹತ್ಯೆ ಎಂಬ ತೀರ್ಮಾನಕ್ಕೆ ಬಂದಲ್ಲಿ, ತನಿಖೆ ಹಾದಿ ತಪ್ಪುವ ಮತ್ತು ನೈಜ ಅಪರಾಧಿಗಳನ್ನು ತಪ್ಪಿತಸ್ಥರೆಂದು ಬಿಂಬಿಸಲು ಅಸಾಧ್ಯವಾಗುವ ಸಂಭವವಿದೆ.ಹರ್ಷ ರವರ ಪ್ರಕರಣವನ್ನು UAPA ಅಡಿ ಸಮಗ್ರ ತನಿಖೆಗೆ ಒಳಪಡಿಸಬೇಕು.
- ಕರ್ನಾಟಕಕ್ಕೆ ವಿಶೇಷವಾಗಿ ಭಯೋತ್ಪಾದನಾ ನಿಗ್ರಹ ದಳದ ಅವಶ್ಯಕೆತೆ ಇದ್ದು,ಇದಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳು, ಭಯೋತ್ಪಾದನೆಯ ಸಂಬಂಧಿತ ತನಿಖೆಗೆ ಅಗತ್ಯ ಸಿಬ್ಬಂದಿ ಹಾಗೂ ಎನ್.ಐ. ಎ ನ ಸಹಯೋಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲ ವಿಶೇಷ ದಳದ ಅಗತ್ಯತೆ ಇದೆ. ಪ್ರಸ್ತುತ ಪೊಲೀಸ್ ಪಡೆಗೆ ಇರುವ ಮಿತಿಯಲ್ಲಿ ಭಯೋತ್ಪಾದನಾ ಪ್ರಕರಣಗಳನ್ನು ನಿಭಾಯಿಸುವ ಮೂಲಭೂತ ಸೌಕರ್ಯಗಳು, ಸಂಪನ್ಮೂಲಗಳ ಕೊರತೆ ಇರುವುದರಿಂದ ಇಂತಹ ಪ್ರಕರಣಗಳಿಗೆ ವಿಶೇಷ ಪಡೆ ರಚಿಸಿ, ಮುಂಬರುವ ಬಜೆಟ್ ನಲ್ಲಿ ಇದಕ್ಕೆ ಸೂಕ್ತ ಅನುದಾನ ಒದಗಿಸಿ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ನಾನು ಒತ್ತಾಯಿಸುತ್ತೇನೆ.
- ಕರ್ನಾಟಕ ಸರ್ಕಾರವು ಕೋಕಾ ಕಾಯ್ದೆ ಗೆ ತಿದ್ದುಪಡಿಯನ್ನು ತಂದು ಸಂಘಟಿತ ಅಪರಾಧಗಳ ಅಡಿಯಲ್ಲಿ, ದೇಶದ್ರೋಹಿ ಚಟುವಟಿಕೆಗಳು, ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಭಾಗಿಯಾಗಿರುವ ಮತಾಂಧ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವದನ್ನು ಮುಖ್ಯ ಆದ್ಯತೆಯನ್ನಾಗಿ ಪರಿಗಣಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಮಾಡಬೇಕು.
- ಕರ್ನಾಟಕ ಸರ್ಕಾರವು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿರುವ, ಕಾನೂನು ವಿರೋಧಿ ಕಾರ್ಯಗಳಲ್ಲಿ ಪಾಲ್ಗೊಂಡು ಸಂಘಟಿತವಾಗಿ ಹಿಂದೂ ವಿರೋಧೀ ಕಾರ್ಯಗಳಲ್ಲಿ ನಿರತರಾಗಿರುವ ಸಂಘಟನೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಸೂಕ್ತ ದಾಖಲೆಗಳ ಸಮಗ್ರ ವರದಿ ಸಲ್ಲಿಸಿ,ಸಮಾಜ ಘಾತಕ ಶಕ್ತಿಗಳ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು.
- ಈ 4 ಅಂಶಗಳನ್ನು ಪರಿಗಣಿಸಿ, ಸಮಸ್ಯೆಗೆ ಆಮೂಲಾಗ್ರ ತರದಿದ್ದರೆ, ಪ್ರತೀ ಸಲ ಯಾವುದಾದರು ಒಬ್ಬ ವ್ಯಕ್ತಿಯ ಹತ್ಯೆಯಾದಾಗ ಖಂಡನೆ, ಉಗ್ರಶಿಕ್ಷೆಯ ಮಾತುಗಳನ್ನಾಡಿ 3 ದಿನಗಳ ನಂತರ ಯಥಾಸ್ಥಿತಿ ಹಾಗೂ ಮತ್ತೊಂದು ಬಲಿಯಾದಾಗ ಮತ್ತೆ ಇಂತಹ ಹೇಳಿಕೆಗಳನ್ನು ಪುನರುಚ್ಚರಿಸುವ ಬದಲು, ಸಮಸ್ಯೆಯ ಮೂಲಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾದ ಅಗತ್ಯತೆಯನ್ನು ನಾನು ಸರ್ಕಾರಕ್ಕೆ ಒತ್ತಾಯಪಡಿಸುತ್ತೇನೆ.
ಇಂತಹ ಪ್ರತೀ ಘಟನೆಯ ನಂತರವಾದರೂ ಸಮಸ್ತ ಹಿಂದೂ ಸಮಾಜ ಎಚ್ಚೆತ್ತುಕೊಂಡು ಬದಲಾವಣೆಗೊಳ್ಳುವುದರೊಂದಿಗೆ ಹಾಗೂ ಅದೇ ರೀತಿ ಸರ್ಕಾರದ ಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರುವುದು ಕೂಡ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅವಶ್ಯಕ ಎನ್ನುವುದನ್ನು ನಾನು ಸರ್ಕಾರಕ್ಕೆ ಒತ್ತಾಯಪಡಿಸುತ್ತೇನೆ. ಈಗಲಾದರೂ ಸಮಸ್ತ ಹಿಂದೂ ಸಮಾಜ ಹಾಗೂ ಸರ್ಕಾರದ ಮಟ್ಟದಲ್ಲಿ ಎಚ್ಚೆತ್ತುಕೊಳ್ಳಲೇಬೇಕಾದ ಅಗತ್ಯತೆ ಇದೆ.
ಪ್ರವೀಣ್ ನೆಟ್ಟಾರು ರವರ ಆತ್ಮಕ್ಕೆ ಸದ್ಗತಿ ಕೋರುತ್ತ, ಅವರ ಕುಟುಂಬದ ಜೊತೆ ಸಮಸ್ತ ಹಿಂದೂ ಸಮಾಜ ಇದೆ ಎಂಬುದನ್ನು ನಾವೆಲ್ಲರೂ ಪ್ರಚುರಪಡಿಸುವ ಅಗತ್ಯತೆ ಇದೆ.










Discussion about this post