ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಂಸ ಜ್ಯೋತಿ ಸಂಸ್ಥೆ ಬಡವರ ಪಾಲಿನ ಆಶಾಕಿರಣ ಎಂದು ಚಲನಚಿತ್ರ ನಟ, ನೃತ್ಯಪಟು ಶ್ರೀಧರ್ #Actor Shridhar ಅಭಿಪ್ರಾಯಪಟ್ಟರು.
ಕನ್ನಡ ನಾಡ ಹಬ್ಬದ ಪ್ರಯುಕ್ತ ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆಯ ಕ್ಯಾನ್ಸರ್ #Cancer ರೋಗಿಗಳಿಗೆ ಬೆಳಗಿನ ಉಪಹಾರ, ಹಣ್ಣು ಹಂಪಲುಗಳು ಸಿಹಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 49 ವರ್ಷಗಳಿಂದ ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹಂಸ ಜ್ಯೋತಿಯು 25 ವರ್ಷಗಳಿಂದ ಕಿಡ್ವಾಯ್ ಆಸ್ಪತ್ರೆಯ ರೋಗಿಗಳಿಗೆ ಸಿಹಿ ತಿನಿಸು, ಹಣ್ಣುಗಳು ಮುಂತಾದ ವಸ್ತುಗಳನ್ನು ವಿತರಿಸುತ್ತ ಬಂದಿದ್ದು, ನಿಜ ಅರ್ಥದಲ್ಲಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
Also read: ಅಂತರ ಕಾಲೇಜು ಚೆಸ್ ಪಂದ್ಯಾವಳಿ | ಶೃಂಗೇರಿಯ ಜೆಸಿಬಿಎಂ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನ
ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ ಸಂಗಮೇಶ್ ಉಪಾಸೆ, ಸೆಂಟ್ ಫ್ರಾನ್ಸಿಸ್ ಪದವಿ ಕಾಲೇಜಿನ ಪ್ರಾಂಶುಪಾಲ ಆರ್. ಎನ್. ಸುಬ್ಬರಾವ್, ಉದ್ಯಮಿ ಎಸ್. ಟಿ. ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನ ಎಂಡಿ ಕೆ. ಬಾಲಾಜಿಬಾಬು, ಮೈಕ್ರೋಟೆಕ್ ಟ್ರೆಂಡಿಂಗ್ ಮಷೀನ್ಸ್ ನ ಎಂಡಿ ಕೆ. ಶ್ರೀನಿವಾಸಲು ರೆಡ್ಡಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್ ಜಗದೀಶ್, ಯುವ ನಾಯಕ ಮತ್ತು ನಾಯಕಿ ಚೇತನ್ ಹಾಗೂ ಪಲ್ಲವಿ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಮಾರು 150 ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಹಣ್ಣು ತಿಂಡಿ ತಿನಿಸುಗಳೊಂದಿಗೆ ಒಣ ಹಣ್ಣುಗಳು ಮತ್ತು ಬಿಸ್ಕೆಟ್ ಪ್ಯಾಕ್‌ಗಳನ್ನು ವಿತರಿಸಲಾಯಿತು ಎಂದು ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಮುರಳಿಧರ ಮತ್ತು ಹಿರಿಯ ಟ್ರಸ್ಟಿ ಎಂ. ಆರ್. ನಾಗರಾಜ ನಾಯ್ಡು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post