ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಾಲಿನ ದರವನ್ನು ಏರಿಕೆ ಮಾಡಲು ಹಾಲು ಒಕ್ಕೂಟಗಳೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹಾಲು ಹಾಗೂ ಮೊಸರು ಸೇರಿ ನಂದಿನ ಉತ್ಪನ್ನಗಳ Nandini Products ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಸಚಿವ ವೆಂಕಟೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಷ್ಟ ಸರಿದೂಗಿಸಲು ದರ ಪರಿಷ್ಕರಣೆ ಮಾಡುವಂತೆ ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಈಗ ಸದ್ಯ ದರ ಏರಿಕೆ ಮಾಡುವ ಚಿಂತನೆಯಿಲ್ಲ ಎಂದಿದ್ದಾರೆ.
ಆದರೆ, ಇನ್ನೊಂದು ಹೇಳಿಕೆಯಲ್ಲಿ ಕರ್ನಾಟಕ ಹಾಗೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ದರ ಕಡಿಮೆಯಿದೆ ಎಂಬ ಅಂಕಿ ಅಂಶವನ್ನು ನೀಡಿದ್ದಾರೆ. ಹಾಲಿನ ದರವನ್ನು ಏರಿಕೆ ಮಾಡುವಂತೆ ರೈತರೂ ಸಹ ಒತ್ತಾಯ ಮಾಡುತ್ತಿದ್ದಾರೆ ಎಂದು ಸೂಕ್ಷö್ಮವಾಗಿ ಹೇಳುವ ಮೂಲಕ ದರ ಏರಿಕೆಯ ಸುಳಿವನ್ನೂ ಸಹ ನೀಡಿದ್ದಾರೆ.
Also read: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ | ನಟ ದರ್ಶನ್’ಗೆ ನೊಟೀಸ್ ಜಾರಿ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








