No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Friday, August 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನವರಾತ್ರಿ ಉತ್ಸವ | ಅಮೋಘ ನೃತ್ಯ – ಸಂಗೀತ ಪ್ರದರ್ಶನ

kalpa News by kalpa News
October 1, 2025
in ಬೆಂಗಳೂರು ನಗರ
0
ನವರಾತ್ರಿ ಉತ್ಸವ | ಅಮೋಘ ನೃತ್ಯ – ಸಂಗೀತ ಪ್ರದರ್ಶನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಬೆಂಗಳೂರಿನ ಎಲ್ಲೆಡೆ ಸತತವಾಗಿ ನಡೆಯುತ್ತಿರುವ ನವರಾತ್ರಿಯ #Navarathri ಆಚರಣೆ ಕಣ್ಮನಗಳಿಗೆ ಹಬ್ಬವಾಗಿದೆ. ನವರಾತ್ರಿಯು, ಆಧ್ಯಾತ್ಮಿಕ ಬೆಳವಣೆಗೆ,  ಸಾಂಸ್ಕೃತಿಕ ಐಕ್ಯತೆಯನ್ನು ಜನಮನಗಳಲ್ಲಿ ಮೂಡಿಸುವ ವಿಶೇಷ  ಆಚರಣೆ.  ಯಾವುದೇ ಹೊಸ ವಿದ್ಯೆಯನ್ನು ಕಲಿಯಲು ತೊಡಗುವುದಕ್ಕೆ ಈ ಒಂಬತ್ತೂ ದಿನಗಳೂ ಬಹಳ ಪ್ರಶಸ್ತ  ಎಂದು ಹಿಂದಿನಿಂದಲೂ ಇರುವ  ಕ್ರಮ ಹಾಗೂ ನಂಬಿಕೆ.

ನವಶಕ್ತಿಯರ ಪೂಜೆ, ಒಂಭತ್ತು ದಿನಗಳೂ ಪಟ್ಟದ ಬೊಂಬೆಗಳಾದ   ರಾಜ-ರಾಣಿ ಬೊಂಬೆಗಳನ್ನು ಅಲಂಕರಿಸಿ ಇಟ್ಟು, ಹಲವು ರೀತಿಯ ಬೊಂಬೆಗಳನ್ನು  ಮೆಟ್ಟಲುಗಳಲ್ಲಿ ಜೋಡಿಸುವ ಸಂಪ್ರದಾಯ,  ರಾಮನು ರಾವಣನ ಮೇಲೆ ವಿಜಯ ಸಾಧಿಸಿದ ದಿನ ವಿಜಯದಶಮಿಯಂಬ  ನಂಬಿಕೆ,  ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಈ ಉತ್ಸವದಲ್ಲಿ ನಾನಾ ರೀತಿಯಲ್ಲಿ ಜನ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ನಮ್ಮ  ಸಂಸ್ಕೃತಿಯ ಬುನಾದಿಯೇ ಲಲಿತಕಲೆಗಳು. ಇದರಲ್ಲಿಯೂ  ಮುಖ್ಯವಾಗಿ ಸಂಗೀತ,  ನೃತ್ಯ ಮುಂತಾದ ಪ್ರದರ್ಶನ ಕಲೆಗಳು. ಇವುಗಳನ್ನು  ಪೋಷಿಸಿ ಬಳೆಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಸಮಾಜ  ದೃಷ್ಟಿಯಿಂದ ಹಿತಕರವಾದ ಬೆಳವಣಿಗೆ.

ಬೆಂಗಳೂರಿನ ನಟನತರಂಗಿಣಿ ಸಂಸ್ಥೆ ಅನೇಕ ಸಂಗೀತ,  ನೃತ್ಯ  ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ  ನೀಡಲು ವೇದಿಕೆಯನ್ನು ಕಲ್ಪಿಸ ತೊಡಗಿದೆ. ನವರಾತ್ರಿಯ ಒಂಬತ್ತು ದಿನಗಳೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವರಾತ್ರಿಯ ಮೊದಲ ಮೂರು ದಿನಗಳೂ ಉತ್ತಮ ಸಂಗೀತ ಪ್ರದರ್ಶನಗಳು ನಡೆದವು.
ನಾಲ್ಕನೆಯ ದಿನದಂದು ಅಂಜನಾಪುರದ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿಯ ದೇವಾಲಯಲ್ಲಿ ಭರತನಾಟ್ಯ ಪ್ರದರ್ಶನ ಜರುಗಿತು.   ಶ್ರೀ ವೆಂಕಟೇಶ್ವರ  ಸ್ವಾಮಿಯು ವರಾಹಾವತಾರಿಯಾಗಿ ಕಂಗೊಳಿಸುತ್ತಿರಲು  ನಟನತರಂಗಿಣಿಯ ವಿದ್ಯಾರ್ಥಿನಿ ಕು.ಜಿ.ವಿ.ಶ್ರೀಲಾಸ್ಯ,  ತನ್ನ ಲಾಸ್ಯ-ತಾಂಡವಯುತ ಭರತನಾಟ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಜನಮನವನ್ನು ಸೆಳೆದರು. ವೈ.ಜಿ.ಶ್ರೀಲತ ನಿಕ್ಷಿತ್ ಅವರ  ಶಿಷ್ಯಳಾದ ಕು.ಶ್ರೀಲಾಸ್ಯ ಭರತನಾಟ್ಯ ವಿದ್ವತ್ ಪೂರ್ವವನ್ನು ಮುಗಿಸಿ ಅಂತಿಮ ಹಂತದ ತಯಾರಿಯಲ್ಲಿ ಇರುವರು.  ಎರಡನೇ ವರ್ಷದ  ನ್ಯೂರೋಸೈನ್ಸ್  ಡಿಗ್ರಿ ವ್ಯಾಸಂಗ  ಮಾಡುತ್ತ ನೃತ್ಯ ಕಲಿಕೆಯನ್ನೂ ಸತತವಾಗಿ ಮುಂದುವರಿಸುತ್ತಿದ್ದಾರೆ.

ಯಾವುದೇ ಭರತನಾಟ್ಯ ಪ್ರದರ್ಶನದ  ಮೊದಲ ವಿನಿಕೆ  ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ,  ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ,   ಹೀಗೆ  ನರ್ತನವನ್ನು ಪ್ರಾರಂಭಿಸಿದ  ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟಸುಬ್ಬಯ್ಯ ಅವರ ಶ್ರೀವಿಘ್ನರಾಜಂ ಭಜೇ ಕೃತಿಯ ಮೂಲಕ  ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.
ದೇವಿಯನ್ನು ಕುರಿತ, ವಿದ್ವಾನ್  ಜಿ.ಗುರುಮೂರ್ತಿ ಅವರ  “ಓಂಕಾರ ಬಿಂದು” ,  ದೇವಿಯ ಓಂಕಾರ ರೂಪವನ್ನು ತೋರಿದರೆ, ಶ್ರೀಪುರಂದರದಾಸರ “ಹನುಮಂತದೇವ ನಮೋ”, ಹನುಮಂತನ ರಾಮ ಭಕ್ತಿ , ಕಾರ್ಯಪರತೆಯ ಹಾಸ್ಯ ಬೆರೆತ ನಿರೂಪಣೆ.  ಜಗತ್ತಿಗೇ ಒಡೆಯನಾದ ಶ್ರೀ ಕೃಷ್ಣನನ್ನು ಬಾಲನೆಂದು ವಾತ್ಸಲ್ಯದಿಂದ ಕೊಂಡಾಡುವ ಯಶೋದೆಯ ನಿರ್ಮಲ ಭಕ್ತಿಯನ್ನು ಸಾರುವ  ಪ್ರಸಿದ್ಧ  ದೇವರನಾಮ , ಶ್ರೀ ಪುರಂದರದಾಸರ “ಜಗದೋದ್ಧಾರನ”,   ಈಶ್ವರನ ತಾಂಡವ  ಹಾಗೂ ನವರಸಗಳ ಸೊಗಸಾದ ನೃತ್ಯ “ಆನಂದ ತಾಂಡವೇಶ್ವರನ “(ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ವಿರಚಿತ). ಶ್ರೀ ತ್ಯಾಗರಾಜರ “ಸೀತಾಕಲ್ಯಾಣ” ದೊಂದಿಗೆ ಕಾರ್ಯಕ್ರಮ  ಮುಕ್ತಾಯಗೊಂಡಿತು. ಉತ್ತಮ ಸಂಗೀತದ ಮುದ್ರಿಕೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.

ಐದನೆಯ ದಿನದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಕು.ಚೈತನ್ಯ. ಒಳ್ಳೆಯ ಕಂಠಸಿರಿ. ಶ್ರೀರಾಗದ ವರ್ಣದಿಂದ ಪ್ರಾರಂಭಿಸಿ,  ಅಪರೂಪದ ಛಾಯಾತರಂಗಿಣೆ,  ಮುಖ್ಯ ಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಜನೆ, ನಾಮಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀಕೃಷ್ಣ ಅವರ ಕದನಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: #NavarathriBangaloreKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaನವರಾತ್ರಿಬೆಂಗಳೂರು
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಹಾನವಮಿ | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಂಭ್ರಮದ ಆಯುಧಪೂಜೆ

Next Post

ಅ.2ರಂದು ಗಾಂಧಿ ಬಸಪ್ಪ ಕುಟುಂಬದಿಂದ ಗಾಂಧೀಜಯಂತಿ ಕಾರ್ಯಕ್ರಮ

kalpa News

kalpa News

Next Post
ಡಿ.19ರಂದು ಮಹಾತ್ಮ ಗಾಂಧೀಜಿ ಮತ್ತು ಶಿಕ್ಷಣ ಕುರಿತು ವಿಶೇಷ ಉಪನ್ಯಾಸ

ಅ.2ರಂದು ಗಾಂಧಿ ಬಸಪ್ಪ ಕುಟುಂಬದಿಂದ ಗಾಂಧೀಜಯಂತಿ ಕಾರ್ಯಕ್ರಮ

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL