ಕಲ್ಪ ಮೀಡಿಯಾ ಹೌಸ್ | ಜಾರ್ಖಂಡ್ |
ಪ್ರಧಾನಿ ನರೇಂದ್ರ ಮೋದಿ #NarendraModi ಅವರು ಪ್ರಯಾಣಿಸಲು ಕುಳಿತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ #TechnicalIssue ಎದುರಾದ ಕಾರಣ ಅವರ ಪ್ರಯಾಣದಲ್ಲಿ ವಿಳಂಬವಾಗಿರುವ ಘಟನೆ ಜಾರ್ಖಂಡ್’ನಲ್ಲಿ ನಡೆದಿದೆ.
ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿಯವರು ದಿಯೋಗರ್’ಗೆ ಭೇಟಿ ನೀಡಿದ್ದರು. ಚುನಾವಣಾ ಭಾಷಣ ಮುಗಿಸಿ ಅಲ್ಲಿನ ವಿಮಾನ ನಿಲ್ದಾಣಕ್ಕೆ ತೆರಳಿ, ವಿಮಾನ ಹತ್ತಿ ಕುಳಿತಿದ್ದರು. ಆದರೆ, ಆ ವೇಳೆಗೆ ಅದೇ ವಿಮಾನದಲ್ಲಿ #Aircraft ತಾಂತ್ರಿಕ ದೋಷ ಎದುರಾಗಿದೆ.
ತತಕ್ಷಣವೇ ಪ್ರಧಾನಿಯವರನ್ನು ವಿಮಾನದಿಂದ ಇಳಿಸಿ, ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.
ಸದ್ಯ ಪ್ರಧಾನಿಯವರು, ದಿಯೋರ್ ಏರ್ ಪೋರ್ಟ್’ನಲ್ಲಿಯೇ ಇದ್ದು, ಪ್ರಧಾನಿ ಮೋದಿ ನವದೆಹಲಿಗೆ ತೆರಳುವುದು ಕೆಲಕಾಲ ತಡವಾಗಲಿದೆ ಎಂದು ವರದಿಯಾಗಿದೆ.
Also Read: ಸಾಗರ | ನಿಯಂತ್ರಣ ತಪ್ಪಿ ಪಲ್ಟಿಯಾಗಿ ದೇವಾಲಯದ ಕಾಂಪೌಂಡ್’ಗೆ ಡಿಕ್ಕಿಯಾದ ಕ್ಯಾಂಟರ
ದಿಯೋಗರ್’ನಿಂದ ನವದೆಹಲಿಗೆ ವಾಪಾಸ್ ತೆರಳುವ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ದಿಯೋಗರ್ ಏರ್ ಪೋರ್ಟ್’ನಲ್ಲಿಯೇ ಸಮಸ್ಯೆಯ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಅವರು ದೆಹಲಿಗೆ ತೆರಳುವುದು ವಿಳಂಬವಾಗಲಿದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿಯವರು ಚುನಾವಣಾ ಕಣದಲ್ಲಿರುವ ರಾಜ್ಯದಲ್ಲಿ ತಮ್ಮ ಪ್ರಚಾರ ಸಭೆ ಮುಗಿಸಿ ದೆಹಲಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದ ನಂತರ ಈ ಘಟನೆ ನಡೆದಿದೆ.
ಸುರಕ್ಷತಾ ಕ್ರಮವಾಗಿ, ತಾಂತ್ರಿಕ ತಂಡಗಳು ಸಮಸ್ಯೆಯನ್ನು ಗುರುತಿಸಲು ಮತ್ತು ಪರಿಹರಿಸಲು ಕೆಲಸ ಮಾಡುವಾಗ ವಿಮಾನವನ್ನು ನೆಲಕ್ಕೆ ಇಳಿಸಲಾಗಿದೆ. ತಜ್ಞರು ವಿಮಾನದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post