ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದೇಶಹಿತ, ರಾಜ್ಯಹಿತ, ಸಮಾಜಹಿತ, ಸಂಸ್ಕøತಿ ಮತ್ತು ಗೋವಿನ ಹಿತ ಕಾಯುವ ಪಕ್ಷವನ್ನು ಶ್ರೀರಾಮಚಂದ್ರಾಪುರ ಮಠದ Shri Ramachandrapura Mutt ಶಿಷ್ಯವರ್ಗ ಬೆಂಬಲಿಸಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ Raghaveshwara shri ಸಾನ್ನಿಧ್ಯದಲ್ಲಿ ನಡೆದ ಶಿಷ್ಯಭಕ್ತರ ಸಭೆಯಲ್ಲಿ ಒಕ್ಕೊರಲ ನಿರ್ಣಯ ಆಂಗೀಕರಿಸಲಾಯಿತು.
ಹವ್ಯಕ ಮಹಾಮಂಡಲ, ಮಂಡಲ, ವಲಯ ಹಾಗೂ ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಗಣ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ಸಂಬಂಧ ಸರ್ವಾನುಮತದ ನಿರ್ಣಯ ಆಂಗೀಕರಿಸಲಾಯಿತು.
ಯಾವುದೇ ಕಾರಣಕ್ಕೆ ಸಮುದಾಯದ ಮತಗಳು ಹರಿದು ಹಂಚಿ ಹೋಗಬಾರದು. ಶ್ರೀಮಠದ ಶಿಷ್ಯಭಕ್ತರು ತಾವು ಮಾತ್ರ ಒಂದು ತತ್ವ ಸಿದ್ಧಾಂತಕ್ಕೆ ಬದ್ಧವಾಗಿರುವುದಲ್ಲದೇ ಸಮಾಜದ ಇತರ ವರ್ಗಗಳಿಗೂ ಮಾರ್ಗದರ್ಶಿ ಪಾತ್ರ ವಹಿಸುವ ಕಾರಣ ಇಡೀ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಅಭಿಪ್ರಾಯಪಟ್ಟರು.
ಜತೆಗೆ ಮುಂದಿನ ದಿನಗಳಲ್ಲಿ ಮಠಕ್ಕೆ ಶ್ರೀರಕ್ಷೆಯಾಗಿ ನಿಲ್ಲುವ ಪಕ್ಷಕ್ಕೇ ನಮ್ಮ ಬೆಂಬಲ ಎಂಬ ಅಂಶವನ್ನು ಮತಯಾಚನೆಗೆ ಬರುವ ಮುಖಂಡರಿಗೆ ಸ್ಪಷ್ಟಪಡಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಎಲ್ಲ ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದೂ ಸಭೆಯಲ್ಲಿ ಸಲಹೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸೇರಿದಂತೆ ಹವ್ಯಕ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಹವ್ಯಕ ಮಹಾಮಂಡಲದಿಂದ ಬರುವ ಸೂಚನೆಗೆ ಅನುಗುಣವಾಗಿ ಎಲ್ಲ ಹವ್ಯಕ ಬಾಂಧವರು ಮತ ಚಲಾಯಿಸಬೇಕು. ರಾಷ್ಟ್ರಹಿತ- ರಾಜ್ಯಹಿತವನ್ನೇ ಪ್ರಮುಖ ಅಂಶವಾಗಿ ಪರಿಗಣಿಸಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
Also read: ಪೆರು ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ: 27 ಕಾರ್ಮಿಕರು ಸಾವು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post