No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Friday, October 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ತಾಯಿಯಂತೆ ಪ್ರಕೃತಿಯೂ ಹಿತವಲ್ಲದ ಆಹಾರವನ್ನು ದೂರವಿಡುತ್ತದೆ: ರಾಘವೇಶ್ವರ ಶ್ರೀ

kalpa News by kalpa News
September 5, 2026
in ಉತ್ತರ ಕನ್ನಡ
0
Gokarna nature-like-a-mother-rejects-unhealthy-food
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ಅಡುಗೇ ಮನೆಯಲ್ಲಿ ಕಾಣದಂತೆ ಅಡಗಿಸಿಡುವಂತೆ, ಪ್ರಕೃತಿಯು ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ಆದಷ್ಟು ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾದರೆ, ಪ್ರಿಯ ಆಹಾರವನ್ನು ಮರಣೀಯ ಎನ್ನಬಹುದಾಗಿದೆ. ಹಾಗಾಗಿ ಪ್ರಿಯ ಹಾಗೂ ಹಿತ ಆಹಾರಗಳ ವ್ಯತ್ಯಾಸವನ್ನು ಗಮನಿಸಿ ಸ್ವೀಕರಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

ಔಷಧದ ಅಂಗಡಿಯಲ್ಲಿ ಅನೇಕ ಔಷಧಗಳಿರುತ್ತವೆ. ಆದರೆ ಎಲ್ಲವೂ ನಾವು ಸೇವಿಸಲು ಇರುವುದಲ್ಲ. ಹಾಗೆಯೇ ಸೃಷ್ಟಿಯಲ್ಲಿ ಅನೇಕ ಬಗೆಯ ಆಹಾರವಿದೆ. ಆದರೆ ಎಲ್ಲವೂ ನಮಗೆ ಸೂಕ್ತವಲ್ಲ. ನಮಗೆ ಸೂಕ್ತವಾದ ಆಹಾರವನ್ನು ಆಯುರ್ವೇದದಲ್ಲಿ ಹಿತಾಹಾರ ಎನ್ನಲಾಗಿದ್ದು, ಪ್ರಕೃತಿ ನಮಗಾಗಿ ಕೊಟ್ಟಿರುವುದನ್ನು ನಿಹಿತ ಎಂದರೆ, ಶಾಸ್ತ್ರಗಳು ಸೂಚಿಸಿರುವುದನ್ನು ವಿಹಿತ ಎಂದು ಕರೆಯಲಾಗಿದೆ ಎಂದು ಹಿತ – ಅಹಿತ ಆಹಾರಗಳ ಕುರಿತಾಗಿ ವಿವರಿಸಿದರು.Kumadvathi College Shikariura

ಸಿಕ್ಕಿದ್ದನ್ನು ಸಿಕ್ಕಂತೆ ತಿನ್ನುವುದು ಮನುಷ್ಯನ ಸ್ವಭಾವವಲ್ಲ. ಸೂಕ್ತವಾದ ಬೇರೆಬೇರೆ ಪದಾರ್ಥಗಳನ್ನು ಸೇರಿಸಿ, ಪದಾರ್ಥಗಳಲ್ಲಿನ ದೋಷಗಳನ್ನು ತೆಗೆದು, ಹಿತವಾದ ಪಾಕವನ್ನು ಮಾಡಿ ಸೇವಿಸುವುದು ಮನುಷ್ಯನ ಪ್ರವೃತ್ತಿಯಾಗಿದೆ. ಪ್ರಕೃತಿಯನ್ನು ಮಾರ್ಪಡಿಸಿಕೊಳ್ಳುವ ವಿಶೇಷ ಅವಕಾಶವನ್ನು ನಮಗೆ ದೇವರು ಕೊಟ್ಟಿದ್ದಾನೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

Also read>> ಫುಕೇಟ್-ದೆಹಲಿ ವಿಮಾನ ಘಟನೆ ಬಳಿಕ ಎಲ್ಲಾ ಪೈಲಟ್‌ಗಳಿಗೆ 100% ಡ್ರಗ್, ವೈದ್ಯಕೀಯ ತಪಾಸಣೆ

Gokarna : ಆಯುರ್ವೇದವು ಶ್ರೇಷ್ಠ ಪಥ್ಯ

ಕೆಲವು ಪದಾರ್ಥಗಳನ್ನು ಆಯುರ್ವೇದವು ಶ್ರೇಷ್ಠ ಪಥ್ಯಗಳಲ್ಲಿ ಶ್ರೇಷ್ಠ ಎಂದು ಸೂಚಿಸಿದೆ. ಆದರೆ ಹಾಗೆ ಸೂಚಿಸಿದ ಹಲವಾರು ಪದಾರ್ಥಗಳು ಇಂದು ಕಲಿಯ ಪ್ರಭಾವಕ್ಕೆ ಒಳಗಾಗಿ ಸೇವಿಸಲು ಯೋಗ್ಯವೇ? ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಉದಾಹರಣೆಗೆ ಹಾಲು, ದ್ರಾಕ್ಷಿ ಹಣ್ಣು, ಸಕ್ಕರೆ ಇತ್ಯಾದಿಗಳು ಹೆಚ್ಚಿನವು ಕಲುಷಿತವಾಗಿವೆ. ಕಲುಷಿತವಾಗದೇ ಇರುವುದನ್ನು ಪರಿಶ್ರಮದಿಂದ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.PES Shivamogga

ಪ್ರಾಚೀನ ಆಯುರ್ವೇದ, ಯೋಗಶಾಸ್ತ್ರ ಸೂಚಿಸಿದಂತೆ ಆಹಾರದ ವಿಚಾರದಲ್ಲಿ ಸರಿತಪ್ಪುಗಳನ್ನು ಸಮಾಜದ ಮುಂದೆ ತೆರೆದಿಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಹಲವರು ಆಸಕ್ತಿಯಿಂದ ಪ್ರತಿದಿನವೂ ಪ್ರವಚನವನ್ನು ಕೇಳುತ್ತಿದ್ದರೆ, ಕೆಲವರು ಆಚರಣೆಗೆ ತಂದುಕೊಳ್ಳುತ್ತಿದ್ದಾರೆ. ನಮ್ಮ ಬಗ್ಗೆ ಕೆಲವರು ಹಗುರವಾದ ಮಾತುಗಳನ್ನು ಆಡಿಕೊಳ್ಳಬಹುದು. ಆದರೆ ಸರಿದಾರಿಯನ್ನು ತೋರಿಸಬೇಕಾದ ಕರ್ತವ್ಯವನ್ನು ನಾವು ಮಾಡುತ್ತಿದ್ದೇವೆ ಎಂದು ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯ ಅಗತ್ಯತೆಯ ಕುರಿತಾಗಿ ಹೇಳಿದರು.

ನಿವೃತ್ತ ಪೋಲಿಸ್ ಅಧಿಕಾರಿಗಳು ಹಾಗೂ ಶ್ರೀಮಠದ ಮಾಜಿ ಸಿ.ಇ.ಓ ಕೆ.ಜಿ. ಭಟ್, ಈಶ್ವರೀ ಬೇರ್ಕಡವು, ವಾದಿರಾಜ ಸಾಮಗ, ಮಂಜುನಾಥ ಭಟ್, ಚಂಪಕಾ ಭಟ್, ಸ್ವಾತಿ ಭಾಗ್ವತ್, ವೇಣು ನವಿಲಗೋಣ, ಸದಾನಂದ ಹೆಬ್ಬಾರ್, ದಿನಪ್ರಧಾನರಾಗಿ ರಾಧಾಕೃಷ್ಣ ಬಂದಗದ್ದೆ ದಂಪತಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalpa News Advertising DisclaimerKalahamsa Infotech private limited

Tags: GokarnaMothernatureRaghaveshwara shriShri Ramachandrapura MuttUnhealthy FoodUttara Kannadaಅನ್ನಬ್ರಹ್ಮ ಚಾತುರ್ಮಾಸ್ಯಗೋಕರ್ಣ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಫುಕೇಟ್-ದೆಹಲಿ ವಿಮಾನ ಘಟನೆ ಬಳಿಕ ಎಲ್ಲಾ ಪೈಲಟ್‌ಗಳಿಗೆ 100% ಡ್ರಗ್, ವೈದ್ಯಕೀಯ ತಪಾಸಣೆ

Next Post

ಶಿಕ್ಷಕರಿಗೆ ಸರ್ಪ್ರೈಸ್‌ ಕೊಟ್ಟ ಸಚಿವ ಮಧು ಬಂಗಾರಪ್ಪ: ಸರ್ಕಾರಿ ಶಾಲೆಗಳಿಗೆ ದಿಢೀರ್‌ ಭೇಟಿ

kalpa News

kalpa News

Next Post
madhu-bangarappa-surprise-visit-government school

ಶಿಕ್ಷಕರಿಗೆ ಸರ್ಪ್ರೈಸ್‌ ಕೊಟ್ಟ ಸಚಿವ ಮಧು ಬಂಗಾರಪ್ಪ: ಸರ್ಕಾರಿ ಶಾಲೆಗಳಿಗೆ ದಿಢೀರ್‌ ಭೇಟಿ

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL