ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಾಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಾಚಾರ್ಯರಾದ ಶಿವನಂಜಪ್ಪನವರು ಧ್ವಜಾರೋಹಣ ನೆರವೇರಿಸಿ ಭಾರತದ ಸ್ವಾತಂತ್ರ್ಯ ವಿರುದ್ಧ ನಿರಂತರ ಹೋರಾಟ ಮಾಡಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ ಸ್ವಾತಂತ್ರ ಪಡೆದ ನಾವು ಸದೃಢ ಭಾರತವನ್ನು ನಿರ್ಮಿಸುವಲ್ಲಿ ಸರ್ವರೂ ಸೇರಿ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬನೆಯ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.
ಇತಿಹಾಸ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ, ತ್ಯಾಗ ಬಲಿದಾನದಿಂದ ಭಾರತದ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿ ಭಾರತವು ಇಂದು ಸರ್ವ ಕ್ಷೇತ್ರದಲ್ಲೂ ವಿಕಾಸವನ್ನು ಹೊಂದಿದೆ. ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಭಾರತೀಯರು ಮುಂದಿನ 2047 ವಿಕಸಿತ ಭಾರತವನ್ನು ಸೃಷ್ಟಿ ಮಾಡೋಣ. ಜಗತ್ತಿಗೆ ಮಾದರಿಯಾದ ರಾಷ್ಟ್ರವನ್ನಾಗಿ ರೂಪಿಸುವ ಎಲ್ಲಾ ಶಕ್ತಿ, ಸಂಪತ್ತು, ಮಾನವ ಕೌಶಲ್ಯ, ಸದೃಢ ವ್ಯವಸ್ಥೆ, ಉತ್ತಮ ಸಂವಿಧಾನ, ಎಲ್ಲವೂ ಭಾರತದಲ್ಲಿದ್ದು ಅಭಿವೃದ್ಧಿಯ ಪಥದತ್ತ ಸಾಗೋಣ. ಮುಂದಿನ ಭವಿಷ್ಯ ಪ್ರತಿ ಗ್ರಾಮಗಳಿಗೂ ವಿಮಾನ ಮತ್ತು ಹೆಲಿಕ್ಯಾಪ್ಟರ್ ಗಳ ಪ್ರಯಾಣ ಆಗಬೇಕು. ಅಷ್ಟರಮಟ್ಟಿಗೆ ಅಭಿವೃದ್ದಿಯನ್ನು ಸಾಧಿಸೋಣ ಎಂದು ತಿಳಿಸಿದರು.
Also read>> ಕೊಡಚಾದ್ರಿಯಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಪ್ರವಾಸಿಗ: ಜೀಪ್ ಚಾಲಕರ ಸಮಯಪ್ರಜ್ಞೆಯಿಂದ ಪಾರು
ಕಳೆದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶೀಲಾ ನಾಗಲಾಂಬಿಕ, ರಕ್ಷಿತ್ ರವರನ್ನು ಅಮಚವಾಡಿ ಎಪಿಆರ್ ಸಂಸ್ಥೆಯ ರಾಜೇಂದ್ರ ಅವರು ನೀಡುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನು, ಸಂಜನಾ, ಪ್ರೇರಣ, ಭವಾನಿ, ಚೈತ್ರ, ಶೀಲಾ, ಸಂಜು, ಗಜೇಂದ್ರ, ಮದನಕುಮಾರ, ಶೀಲಾ ಮುಂತಾದವರು ಸ್ವಾತಂತ್ರೋತ್ಸವದ ಬಗ್ಗೆ ಮಾತನಾಡಿ ಗಮನ ಸೆಳೆದರು.
ಉಪನ್ಯಾಸಕರಾದ ಶಿವರಾಂ, ಬಸವಣ್ಣ, ರಮೇಶ್, ಸುರೇಶ್, ಪವಿತ್ರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







