ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಗೊಂದಿ ಅಣೆಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು ಕಂಡ ಹೃದಯ ವಿದ್ರಾವಕ ಘಟನೆ ಶನಿವಾರ ಗೊಂದಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಗಾಡಿಕೊಪ್ಪ ಹಾಗೂ ಕೊಮ್ಮನಾಳ್ ಗ್ರಾಮದ ಕಿರಣ್ ಹಾಗೂ ಶಶಾಂಕ್ (19) ಎಂಬುವರೇ ಸಾವು ಕಂಡ ನತದೃಷ್ಟ ವಿದ್ಯಾರ್ಥಿಗಳಾಗಿದ್ದಾರೆ.
ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಗೊಂದಿ ಗ್ರಾಮದಲ್ಲಿರುವ ನೈಸರ್ಗಿಕ ಸೊಬಗು ಸವಿಯಲು ಬಂದಿದ್ದಾರೆ. ಒಟ್ಟು 5 ವಿದ್ಯಾರ್ಥಿಗಳಲ್ಲಿ ಕಿರಣ್ ಹಾಗೂ ಶಶಾಂಕ್ ಭದ್ರಾನದಿಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ. ಇಬ್ಬರಿಗೂ ಈಜಲು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.
ಅಣೆಕಟ್ಟಿನ ಬುಡದಲ್ಲಿ ನೀರಿನ ಸೆಳೆತ ಹಾಗೂ ಆಳ ಗಮನಿಸದ ವಿದ್ಯಾರ್ಥಿಗಳು ಒಬ್ಬರ ಹಿಂದೆ ಒಬ್ಬರು ಸ್ನೇಹಿತರ ಕಣ್ಣೇದುರಿಗೆ ನೀರು ಪಾಲಾಗಿದ್ದಾರೆ. ಈ ಘಟನೆ ನಡೆದ ತಕ್ಷಣ ಅಲ್ಲಿನ ಗ್ರಾಮಸ್ಥರು ಉಳಿದವರ ನೆರವಿಗೆ ಧಾವಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post