ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೊಂಡಾ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ, ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದ್ದು, ಇನ್ನೂ ಕೆಲವು ರೈಲುಗಳನ್ನು ವಿಳಂಬವಾಗಿ ಸಂಚರಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಇಲಾಖೆ (Indian Railway) ತಿಳಿಸಿದೆ.
ಭಾಗಶಃ ರದ್ದುಗೊಳ್ಳುವ ರೈಲುಗಳು:
ದಿನಾಂಕ 24.07.2026 ರಿಂದ 27.07.2026ರವರೆಗೆ ಸಂಚರಿಸುವ ರೈಲು ಸಂಖ್ಯೆ 56931 ಮಿರಜ್–ಲೊಂಡಾ ಡೈಲಿ ಪ್ಯಾಸೆಂಜರ್ ರೈಲು ಬೆಳಗಾವಿ–ಲೊಂಡಾ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಮುಗಿಸಲಿದೆ.
ದಿನಾಂಕ 25.07.2026 ರಿಂದ 28.07.2026ರವರೆಗೆ ರೈಲು ಸಂಖ್ಯೆ 56932 ಲೊಂಡಾ–ಮಿರಜ್ ಡೈಲಿ ಪ್ಯಾಸೆಂಜರ್ ರೈಲು ಲೊಂಡಾ–ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
Also read: Amrit Bharat Station Scheme | ಈ ರೈಲ್ವೆ ಸ್ಟೇಷನ್’ಗಳ ಸೆಲ್ಫಿ ತೆಗೆದು ಹಂಚಿಕೊಳ್ಳಿ
ದಿನಾಂಕ 25.07.2026 ರಿಂದ 27.07.2026ರವರೆಗೆ ರೈಲು ಸಂಖ್ಯೆ 17333 ಮಿರಜ್–ಕ್ಯಾಸಲ್ ರಾಕ್ ಡೈಲಿ ಎಕ್ಸ್‌ಪ್ರೆಸ್ ರೈಲು ಬೆಳಗಾವಿ–ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಮುಗಿಸಲಿದೆ.
ದಿನಾಂಕ 25.07.2026 ರಿಂದ 27.07.2026ರವರೆಗೆ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮಿರಜ್ ಡೈಲಿ ಎಕ್ಸ್‌ಪ್ರೆಸ್ ರೈಲು ಕ್ಯಾಸಲ್ ರಾಕ್–ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
Indian Railway | ವಿಳಂಬವಾಗಿ ಸಂಚರಿಸುವ ರೈಲುಗಳು:
ದಿನಾಂಕ 22.07.2026ರಂದು ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಹೊರಡುವ ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್–ಎಸ್‌ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ ಸುಮಾರು 40 ನಿಮಿಷಗಳ ವಿಳಂಬಕ್ಕೆ ಒಳಪಡಲಿದೆ.
ದಿನಾಂಕ 26.07.2026 ಮತ್ತು 27.07.2026ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20653 ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ರೈಲು ಕ್ರಮವಾಗಿ 30 ನಿಮಿಷ ಹಾಗೂ 60 ನಿಮಿಷಗಳ ವಿಳಂಬಕ್ಕೆ ಒಳಪಡಲಿದೆ.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Comments 1