ಕಲ್ಪ ಮೀಡಿಯಾ ಹೌಸ್ | ಯಡಕುಮರಿ/ಮೈಸೂರು |
ಕುಕ್ಕೆ ಸುಬ್ರಹ್ಮಣ್ಯ ಬಳಿಯ ಯಡಕುಮರಿ ಹಾಗೂ ಶ್ರೀವಾಗಿಲು ನಡುವೆ ಭಾರೀ ಮಳೆಯ ಪರಿಣಾಮ ಉಂಟಾಗಿದ್ದ ರೈಲ್ವೆ ಹಳಿಯ ಮಳೆ ಭೂಕುಸಿತದಿಂದಾಗಿ ಸ್ಥಗಿತಗೊಂಡಿದ್ದ ರೈಲು ಸಂಚಾರ ಇಂದು ಮತ್ತೆ ಪುನಾರಂಭಗೊಳಿಸುವಲ್ಲಿ ಭಾರತೀಯ ರೈಲ್ವೆಯ (Indian Railway) ನೈರುತ್ಯ ರೈಲ್ವೇ ಯಶಸ್ವಿಯಾಗಿದೆ.
ಭೂಕುಸಿತ ಉಂಟಾಗಿ ಹಳಿಗಳ ಮೇಲೆ ಬಿದ್ದಿದ್ದ ಗುಡ್ಡದ ಅವಶೇಷಗಳನ್ನು ತೆರವುಗೊಳಿಸಿ, ತಾಂತ್ರಿಕವಾಗಿ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ನೈರುತ್ಯ ರೈಲ್ವೆ ಇಲಾಖೆ ಹಗಲಿರುಳು ಶ್ರಮಿಸಿತ್ತು. ಇದರ ಪರಿಣಾಮವಾಗಿ ಇಂದು ಸಂಜೆಯಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಮತ್ತೆ ಆರಂಭಗೊಂಡಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಮೈಸೂರು ವಿಭಾಗದ ಶ್ರಿವಾಗಿಲು – ಯಡಕುಮಾರಿ ಘಾಟ್ ಪ್ರದೇಶದಲ್ಲಿ ರೈಲು ಸಂಚಾರವನ್ನು ಯಶಸ್ವಿಯಾಗಿ ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.
ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಪರಿಣಾಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ತುರ್ತು ಕಾರ್ಯಾಚರಣೆಗಳ ಮೂಲಕ ಟ್ರ್ಯಾಕ್ ಮೇಲಿನ ಮಣ್ಣು ಹಾಗೂ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ಆಗಸ್ಟ್ 3ರ ಇಂದು ಸಂಜೆ 19:25 ಗಂಟೆಗೆ ಮಾರ್ಗವನ್ನು ಸುರಕ್ಷಿತವಾಗಿ ಸಂಚಾರಕ್ಕೆ ಅನುಕೂಲಕರ ಎಂದು ಪ್ರಮಾಣೀಕರಿಸಲಾಗಿದೆ.
ಪುನರಾರಂಭದ ಭಾಗವಾಗಿ, ರೈಲು ಸಂಖ್ಯೆಯ ಮಂಗಳೂರು – ವಿಜಯಪುರ 17378 ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲಾಗಿ ಗುರುತಿಸಿಕೊಂಡಿದೆ. ಇದು ಕಿಮೀ 73/700–500 ನಡುವಿನ ಭೂಕುಸಿತದಿಂದ ಪ್ರಭಾವಿತ ಪ್ರದೇಶವನ್ನು ಸುರಕ್ಷಿತವಾಗಿ ದಾಟುವ ಮೂಲಕ ಸಂಚಾರ ಪುನರಾರಂಭಕ್ಕೆ ದಾರಿ ಮಾಡಿಕೊಟ್ಟಿದೆ.
Also Read>> ಹೊಳೆಹೊನ್ನೂರು | ಜನ್ಮಕೊಟ್ಟ ತಂದೆಯನ್ನೇ ಕತ್ತುಹಿಸುಕಿ ಕೊಂದ ಪುತ್ರ | ಕಾರಣವೇನು?
Indian Railway – SWR : ಎಚ್ಚರಿಕೆಯ ಹೆಜ್ಜೆ
ಸಂಪರ್ಕವನ್ನು ಪುನಃ ಸ್ಥಾಪಿಸಿದರೂ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಗಂಟೆಗೆ 10 ಕಿಮೀ ವೇಗ ಮಿತಿ ವಿಧಿಸಲಾಗಿದೆ. ರೈಲು ಚಾಲಕರು ಮತ್ತು ಸಿಬ್ಬಂದಿ ಹೆಚ್ಚುವರಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಕೆಲವು ಪ್ರದೇಶಗಳಲ್ಲಿ ಭೂಕುಸಿತದ ಪೂರ್ಣ ಪ್ರಮಾಣದ ಮರುಸ್ಥಾಪನಾ ಕಾರ್ಯಗಳು ಮುಂದುವರಿದಿದ್ದು, ಇದರ ಪರಿಣಾಮವಾಗಿ ರೈಲುಗಳ ಸಮಯದಲ್ಲಿ ಸ್ವಲ್ಪ ಮಟ್ಟಿನ ವಿಳಂಬ ಉಂಟಾಗುವ ಸಾಧ್ಯತೆ ಇದೆ. ರೈಲು ವೇಳಾಪಟ್ಟಿಯನ್ನು ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.
ನೈರುತ್ಯ ರೈಲ್ವೆ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಪ್ರಯಾಣಿಕರ ಆದ್ಯತೆಯನ್ನು ಕಾಪಾಡುವಲ್ಲಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








