No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Monday, September 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕಲಬುರಗಿ

ಗ್ರಾಮೀಣ ಪತ್ರಿಕೆ ಹಾಗೂ ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ ಘೋಷಣೆ

36ನೇ ಕಾರ್ಯನಿರತ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ

kalpa News by kalpa News
January 4, 2022
in ಕಲಬುರಗಿ
0
ಗ್ರಾಮೀಣ ಪತ್ರಿಕೆ ಹಾಗೂ ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ ಘೋಷಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಕಲಬುರ್ಗಿ |

ಗ್ರಾಮೀಣ ಪತ್ರಿಕೆಗಳು ಹಾಗೂ ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದ್ದು, ಸಧ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಇಲ್ಲಿನ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಇಂದು ಆಯೋಜನೆಗೊಂಡ 36ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಕವಲು ದಾರಿಯಲ್ಲಿದ್ದು, ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಪತ್ರಿಕೆಗಳ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಕೇಂದ್ರ ವಿತ್ತ ಸಚಿವರೊಂದಿಗೆ ಮಾತನಾಡಿ, ಮುದ್ರಣ ಕಾಗದದ ಮೇಲಿನ ತೆರಿಗೆ ವಿನಾಯ್ತಿ ಕುರಿತು ಚರ್ಚೆನಡೆಸಲಾಗುವುದು ಎಂದ ಅವರು, ಜೊತೆಗೆ ಶೀಘ್ರವೇ ಜಾಹಿರಾತು ನೀತಿ ಅನುಷ್ಟಾನ, ಪತ್ರಕರ್ತರ ಹಿತಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿನ ಪತ್ರಕರ್ತರ ಸಂಕಷ್ಟ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಈಗಾಗಲೇ ಕೆಲವು ಭಾಗಗಳಲ್ಲಿ ಬಸ್ ಪಾಸ್, ಆರೋಗ್ಯ ಕಾರ್ಡುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು. ಈ ಬಗ್ಗೆ ಮುಂದಿನ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗುವುದು. ಈ ಕುರಿತು ಕ್ರಿಯಾಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಆಯುಕ್ತರಿಗೆ ಸೂಚಿಸಿದರು.

ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳು ಉಳಿಯಬೇಕು. ಇದು ಜನ ಸಂಸ್ಕೃತಿಯ ಜೀವಾಳ. ಈ ಸಂಸ್ಕೃತಿಯನ್ನು ಉಳಿಸಬೇಕಾದ್ದು ಸಮಷ್ಟಿ ಜವಾಬ್ದಾರಿ. ಈ ಬಗ್ಗೆ ಯಾವುದೇ ರಾಜಿ ಇಲ್ಲ ಎಂದ ಅವರು, ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ನಡೆದುಕೊಂಡ ರೀತಿ ಅವಿಸ್ಮರಣೀಯ. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದು ಮರೆಯುವಂತಿಲ್ಲ. ಕೋವಿಡ್ ಕಾರಣದಿಂದ ಮೃತರಾದ ಎಲ್ಲ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು.

ರಾಜಕಾರಣಿ, ಪತ್ರಕರ್ತರು ಪರಸ್ಪರ ಜೊತೆಗೂಡಿ ಕೆಲಸ ಮಾಡಬೇಕಿದೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾಗದು. ಸಮಾಜದ ಒಳಿತಿನ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ. ಒಂದು ಗೂಡುವಿಕೆ, ಸಂಘಟನೆಗಳ ಬಲವರ್ಧನೆಗೆ ರಾಜಕೀಯ ಮಾಡೋಣ. ಆದರೆ, ಸ್ವಾರ್ಥಕ್ಕೆ-ರಾಜಕೀಯಕ್ಕೆ ಸಂಘಟನೆಗಳನ್ನು ಒಳಸಿಕೊಂಡು ವಿಘಟನೆ ಮಾಡುವುದು ಬೇಡ.
ಬಸವರಾಜ ಬೊಮ್ಮಾಯಿ

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಪತ್ರಿಕೋದ್ಯಮ ಸೇರಿದಂತೆ ಇಡೀ ವ್ಯವಸ್ಥೆಯನ್ನು ಆವರಿಸಿದೆ. ಆದರೆ, ಅಂತಃಕರಣ ಮರೆಯಾಗುತ್ತಿದೆ. ಪತ್ರಕರ್ತರ ಅಂತಃಕರಣದಿಂದ ಕಾರ್ಯೋನ್ಮುಖರಾದಾಗ ಸಮಾಜದಲ್ಲಿ ನಿಜಕ್ಕೂ ಬದಲಾವಣೆ ತರಲು ಸಾಧ್ಯ ಎಂದ ಅವರು, ಪತ್ರಿಕಾ ರಂಗದ ಮೌಲ್ಯಗಳನ್ನು ಉಳಿಸಿ ಬೆಳಸುವುದರ ಜೊತೆಗೆ, ಸಮಾಜಕ್ಕೂ ಮಾದರಿಯಾಗಿ ಬೆಳೆಯಬೇಕಿದೆ. ಪತ್ರಕರ್ತರಲ್ಲಿ ಅತ್ಮವಿಶ್ವಾಸ ಮೂಡಿಸಿ, ಮೌಲ್ಯಗಳ ಪುನರುತ್ಥಾನಕ್ಕೆ ಸರ್ಕಾರ ಬದ್ಧ ಎಂದರು.

ಪೂಜ್ಯ ಡಾ. ಶರಣಬಸಪ್ಪ ಅಪ್ಪರವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಛಾಯಚಿತ್ರ ಪ್ರದರ್ಶನವನ್ನು ಸಚಿವ ಮುರುಗೇಶ್ ನಿರಾಣಿ, ವಸ್ತು ಪ್ರದರ್ಶನವನ್ನು ಶಾಸಕ ಡಾ. ಅಜಯ್ ಸಿಂಗ್ ಧರಮ್ ಸಿಂಗ್, ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಸಂಸದ ಡಾ. ಉಮೇಶ್ ಜಾದವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹೊರತರಲಾದ ಮೂರು ಪುಸ್ತಕಗಳು, ಹಾಗೂ ಕ್ಯಾಲೆಂಡರ್‌ನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು.
ವೇದಿಕೆಯಲ್ಲಿ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ್, ಸುಭಾಷ್ ಗುತ್ತೆದಾರ್, ಬಿ. ಜಿ. ಪಾಟೀಲ್, ಶಶೀಲ್ ಬಿ. ನಮೋಶಿ, ಡಾ. ಅವಿನಾಶ್ ಜಾದವ್, ಬಸವರಾಜ ಮತ್ತಿಮಡು, ತಾರಾ ಅನೂರಾಧ ಇನ್ನಿತರರು ಉಪಸ್ಥಿತರಿದ್ದರು.

ಮಾಲತೇಶ್ ಬಡಿಗೇರ್ ತಂಡದವರಿಂದ ಪ್ರಾರ್ಥನೆ, ನಾಡಗೀತ, ವಿಜಯಕರ್ನಾಟ ಪತ್ರಿಕೆಯ ಸಂಪಾದಕ ಹರಿಪ್ರಕಾಶ್ ಕೋಣೆಮನೆರಿಂದ ಮೊದಲ ಮಾತು, ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚೆನ್ನೇಗೌಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: CM Basavaraj BommaiJounalistKalaburagiKannada NewsKannada News LiveKannada News OnlineKannada News WebsiteKannada WebsiteKSWJALatest News KannadaNews in KannadaNews KannadaState Newsಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕಲಬುರ್ಗಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಾವಿತ್ರಿಫುಲೆ ಜನ್ಮದಿನ ಆಚರಣೆ

Next Post

ಗಮನಿಸಿ! ಜ.6ರಂದು ಹರಿಗೆ, ಮಲವಗೊಪ್ಪ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ

kalpa News

kalpa News

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಜ.6ರಂದು ಹರಿಗೆ, ಮಲವಗೊಪ್ಪ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL