ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೇ-19ರಿಂದ ಪುನರಾರಂಭವಾಗಿದ್ದು, ಜನದಟ್ಟಣೆಗನುಗುಣವಾಗಿ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ.
ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಪ್ರಯಾಣದ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಹಗಲು ವೇಳೆಯಲ್ಲಿ ಬೆಳಗ್ಗೆ 7.00 ರಿಂದ ಆರಂಭಿಸಿ ಸಂಜೆ 7.00 ಗಂಟೆಯೊಳಗೆ ನಿಗಧಿತ ಸ್ಥಳ ತಲುಪುವಂತೆ ಸಮಯವನ್ನು ನಿಯೋಜಿಸಲಾಗಿದೆ.
ಬಸ್‌ಗಳು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣದ ಅವಧಿ 7 ಗಂಟೆಗಳಾಗಿದ್ದು, ಬೆಳಗ್ಗೆ 7.00ರಿಂದ 12.00 ಗಂಟೆಯವರೆಗೆ ನಿರ್ಗಮಿಸುತ್ತವೆ. ಮೈಸೂರಿಗೆ ಪ್ರಯಾಣದ ಅವಧಿ 6 ಗಂಟೆಗಳಾಗಿದ್ದು, ಬೆಳಗ್ಗೆ 7.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಿರ್ಗಮಿಸುತ್ತವೆ. ಅರಸೀಕರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿಕಾರಿಪುರ ಮತ್ತು ಸೊರಬ ಕಡೆಗೆ 2.15 ಗಂಟೆ ಪ್ರಯಾಣದ ಅವಧಿಯಾಗಿದ್ದು, ಸಂಜೆ 4.30ಯವರೆಗೆ ನಿರ್ಗಮಿಸುತ್ತವೆ. ಹರಿಹರ, ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರಗಳಿಗೆ ಪ್ರಯಾಣದ ಅವಧಿ 1.30 ಗಂಟೆಗಳಾಗಿದ್ದು, ಸಂಜೆ 5.30ವರೆಗೆ ನಿರ್ಗಮಿಸುತ್ತವೆ. ಹುಬ್ಬಳ್ಳಿಗೆ ಪ್ರಯಾಣದ ಅವಧಿ 4.30 ಗಂಟೆಗಳಾಗಿದ್ದು, ಸಂಜೆ 2.30ಯವರೆಗೆ ನಿರ್ಗಮಿಸುತ್ತವೆ.
ಕಂಟೈನ್‌ಮೆಂಟ್ ಝೋನ್‌ಗಳಿಗೆ ಯಾವುದೇ ಬಸ್‌ಗಳಿರುವುದಿಲ್ಲ. ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದು ಬಸ್ಸಿನಲ್ಲಿ ಗರಿಷ್ಠ 30 ಜನ ಪ್ರಯಾಣಕರಿಗೆ ಮಾತ್ರ ಅವಕಾಶ. ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುವುದು. ಅಂತರಾಜ್ಯ ಸಾರಿಗೆ ಹಾಗೂ ಹವಾನಿಯಂತ್ರಿತ ಬಸ್ ಇರುವುದಿಲ್ಲ. ಭಾನುವಾರಗಳಂದು ಬಸ್ ಇರುವುದಿಲ್ಲ. ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು.
www.ksrtc.in ವೆಬ್‌ಸೈಟ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಆದಷ್ಟು ಕಡಿಮೆ ಲಗೇಜ್, ಗುರುತಿನ ಚೀಟಿ ತರುವುದು. ಮಾರ್ಗಮಧ್ಯೆ ಯಾವುದೇ ನಿಲುಗಡೆಯಿರುವುದಿಲ್ಲ. ಪ್ರಯಾಣಿಕರ ಹಿತದೃಷ್ಠಿಯಿಂದ ಈ ಎಲ್ಲಾ ಮಾರ್ಗಸೂಚಿಗಳು ಕಡ್ಡಾಯವಾಗಿದ್ದು, ಪ್ರಯಾಣಿಕರು ಸಿಬ್ಬಂದಿಗಳೊಡನೆ ಸಹಕರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post