ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಕೋಮುಗಲಭೆ #Communal Violence ನಡೆದ ನಾಗಮಂಗಲದಲ್ಲಿಯೂ ಸಹ ಈದ್ ಮಿಲಾದ್ ಆಚರಣೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕೋಮುಗಲಭೆ ನಡೆದ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಎಚ್ಚೆತ್ತುಕೊಂಡಿದ್ದು, ಈದ್ ಮಿಲಾದ್ #Eid-Milad ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
Also read: HSRP ಪ್ಲೇಟ್ ಗಡುವು ಅಂತ್ಯ | ಇಷ್ಟು ದಿನ ಮಾತ್ರ ದಂಡ ವಿಧಿಸಲ್ಲ | ಆಮೇಲೆ ಫೈನ್ ಫಿಕ್ಸ್
ಮಂಡ್ಯ ಎಸ್’ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ನಾಗಮಂಗಲದಲ್ಲೇ ಮೊಕ್ಕಾಂ ಹೂಡಿದ್ದು, ಯಾವುದೇ ರೀತಿಯಲ್ಲೂ ಪರಿಸ್ಥಿತಿ ಹದಗೆಡದೇ ಇರದಂತೆ ಜಾಗ್ರತೆ ವಹಿಸಿದ್ದಾರೆ.
ಕಳೆದ ವಾರ ಗಲಭೆ ನಡೆದ ದರ್ಗಾ, ಮಸೀದಿ ಬಳಿಯಲ್ಲಿ ಹೆÀಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಅಲ್ಲದೇ, ಈದ್ಗಾ ಮೈದಾನದ ಸುತ್ತಲೂ ಹೆಚ್ಚಿನ ಭದ್ರತೆ ಹಾಕಲಾಗಿದೆ.
ಹೇಗಿದೆ ಭದ್ರತೆ?
ಇಬ್ಬರು ಎಸ್’ಪಿ, ಇಬ್ಬರು ಎಎಸ್’ಪಿ, 4 ಡಿವೈಎಸ್ಪಿ, 20ಕ್ಕೂ ಹೆಚ್ಚು ಇನ್ಸ್’ಪೆಕ್ಟರ್, 20ಕ್ಕೂ ಹೆಚ್ಚು ಪಿಎಸ್’ಐ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ತಲಾ 7 ಡಿಎಆರ್, ಕೆಎಸ್’ಆರ್’ಪಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post