ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ನಾನು ಇರುವವರೆಗೂ ನನ್ನ ಮಗ ಅಭಿಷೇಕ್ ಅಂಬರೀಶ್ Abhishek Ambarish ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ MP Sumalatha ಸ್ಪಷ್ಪಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಷೇಕ್ ಭವಿಷ್ಯ ಏನು ಎಂದು ನಾನು ಸೇರುವ ಪಕ್ಷದ ಮುಖಂಡರ ಮುಂದೆ ಪ್ರಶ್ನೆ ಇಟ್ಟಿಲ್ಲ. ಕಾರಣ ಅಂಬರೀಶ್ ಅವರು ಬದುಕಿನಲ್ಲಿ ನಂಬಿದ್ದ ಸಿದ್ದಾಂತಕ್ಕೆ ತಕ್ಕಂತೆ ನಾವು ಜೀವನ ಮಾಡುತ್ತೇವೆ. ತಾಯಿ ಚಾಮುಂಡೇಶ್ವರಿಯ ಮೇಲಾಣೆ, ಅಭಿಷೇಕ್’ಗೆ ಟಿಕೇಟ್ ಕೊಡಿ ಎಂದು ನಾನು ಯಾರನ್ನೂ ಕೇಳುವುದಿಲ್ಲ. ಮಾತ್ರವಲ್ಲ ನಾನು ಇರುವವರೆಗೂ ಅವನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿತ್ರರಂಗದಲ್ಲೂ ಸಹ ಅವನು ಯಶಸ್ಸು ಪಡೆಯಬೇಕು ಎಂದು ನಾನು ಯಾರನ್ನೂ ಬೇಡಿಲ್ಲ, ಯಾವುದೇ ಲಾಭಿ ಮಾಡಿಲ್ಲ. ರಾಜಕಾರಣದಲ್ಲೂ ಸಹ ಅಷ್ಟೇ. ಅಭಿಷೇಕ್ ಹಣೆ ಬರಹ ಇದ್ದಂತೆ ಆಗುತ್ತದೆ. ಈ ವರ್ಷ ಅವನು ಮದುವೆ ಆಗುತ್ತಿದ್ದಾನೆ. ಅವನ ಮುಂದಿನ ಜೀವನ ಅವನು ನೋಡಿಕೊಳ್ಳುತ್ತಾನೆ. ನಾನು ಅವನ ರಾಜಕಾರಣಕ್ಕಾಗಿ ಅವನಿಗೆ ಟಿಕೇಟ್ ಕೇಳುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್’ಗೆ ಟಕ್ಕರ್ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post