No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Sunday, September 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಶ್ರೀಕೃಷ್ಣನೇ ವಿಶ್ವದ ಮೊದಲ ಪರಿಸರವಾದಿ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಭಿಮತ

ಇತಿಹಾಸ ಮತ್ತು ಪುರಾಣಗಳಲ್ಲಿ ಕೃಷ್ಣನ ಪಾತ್ರ ಚಿಂತನೆ ಕುರಿತ ವಿಚಾರಗೋಷ್ಠಿ

kalpa News by kalpa News
May 6, 2023
in ಮೈಸೂರು
0
ಶ್ರೀಕೃಷ್ಣನೇ ವಿಶ್ವದ ಮೊದಲ ಪರಿಸರವಾದಿ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಮೈಸೂರು |

ಕೃಷ್ಣಾವತಾರ ಕೇವಲ ಧರ್ಮ ಸಂಸ್ಥಾಪನೆಗೆ ಮಾತ್ರವಲ್ಲ, ಪರಿಸರ ಸಂರಕ್ಷಣೆಗೂ ಮಹತ್ವ ನೀಡಿದೆ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ Shri Vidyeshathirtha Swamiji of Bandarakeri Mutt ಹೇಳಿದರು.

ಉಡುಪಿ ಭಂಡಾರಕೇರಿ ಮಠ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಶ್ರೀವೇದವ್ಯಾಸರ ರಾಷ್ಟ್ರೀಯ ಜಯಂತಿ, ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವ ಸಮಾರೋಪದಲ್ಲಿ ` ಇತಿಹಾಸ ಮತ್ತು ಪುರಾಣಗಳಲ್ಲಿ ಕೃಷ್ಣನ ಪಾತ್ರ ಚಿಂತನೆ’ ಕುರಿತ ವಿಚಾರಗೋಷ್ಠಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕೃಷ್ಣ ಅನೇಕ ಬಾಲ ಲೀಲೆಗಳನ್ನು ತೋರಿದ್ದಾನೆ. ದುಷ್ಟರ ಸಂಹಾರವನ್ನೂ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾನೆ. ಚತುರ ಬುದ್ಧಿಮತ್ತೆಯಿಂದ ರಾಜಕೀಯ ತಂತ್ರಗಳನ್ನು ತೋರಿಸಿದ್ದಾನೆ. ಚಾಣಾಕ್ಷತನದಿಂದ ಕುರುಕ್ಷೇತ್ರ ಯುದ್ಧ ನಿರ್ವಹಿಸಿದ್ದಾನೆ. ಇಷ್ಟು ಮಾತ್ರವಲ್ಲ, ಆತನಲ್ಲಿ ವಿಶೇಷವಾದ ಪರಿಸರ ಕಾಳಜಿ ಇರುವುದನ್ನೂ ನಾವು ಗಮನಿಸಬೇಕು. ಇದು ಇಂದಿನ ಅಗತ್ಯವೂ ಹೌದು ಎಂದು ಅವರು ಹೇಳಿದರು.

ಪರಿಸರ ಸಂರಕ್ಷಣೆಯ ಕೂಗು ಇಂದು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ. ಇದು ದ್ವಾಪರ ಯುಗದಲ್ಲೂ ಇತ್ತು.
ಎರಡು ಬಾರಿ ಅರಣ್ಯವು ಕಾಡ್ಗಿಚ್ಚಿನಿಂದ ನಾಶವಾಗುವ ಹಂತದಲ್ಲಿದ್ದಾಗ ಕಾಡ್ಗಿಚ್ಚನ್ನು ಪಾನ ಮಾಡಿ ಅರಣ್ಯ ಸಂರಕ್ಷಣೆಯನ್ನು ಮಾಡಿದ್ದೇನೆ. ಅದೇ ರೀತಿ ವಿಷವೃಕ್ಷದ ರೂಪದಲ್ಲಿರುವ ಅಸುರರನ್ನು ಸಂಹರಿಸುವ ಮೂಲಕ ವಿಷವೃಕ್ಷದ ಗಾಳಿಯಿಂದ ಪರಿಸರವನ್ನು ಕೂಡ ಕಾಪಾಡಿದ್ದೇನೆ.
ಗೋವರ್ಧನ ಪರ್ವತವು ಬೆಂಕಿಯಿAದ ಆವೃತ್ತವಾದಾಗ ನೀರನ್ನು ಚಿಮ್ಮಿಸಿ ಕೃಷ್ಣ ಬೆಟ್ಟವನ್ನು ಸಂರಕ್ಷಿಸಿದ. ಯಮುನಾ ನದಿಯು ಕಾಳಿಂಗನ ವಿಷದಿಂದ ಪೂರಿತವಾದಾಗ ಕಾಳಿಂಗನನ್ನು ಮರ್ದನ ಮಾಡುವ ಮೂಲಕ ಕೃಷ್ಣ ನದಿ ಸಂರಕ್ಷಣೆ ಮಾಡಿದ. ನಾಯಕನಾದವನು ನೆಲ- ಜಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಾರಿದ. ಈ ಮೂಲಕ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿ ಹೇಳಿದ. ನದಿ, ಬೆಟ್ಟ, ಗುಡ್ಡ, ಅರಣ್ಯ, ಗಾಳಿ, ಆಕಾಶ- ಹೀಗೆ ಎಲ್ಲದರ ಪಾವಿತ್ರ್ಯ ಕಾಪಾಡುವ ಮೂಲಕ ಆತ ಜಗತ್ತಿಗೆ ನಿಸರ್ಗ ಪಾಠ ಹೇಳಿದ್ದಾನೆ. ಹಾಗಾಗಿ ಕೃಷ್ಣನೇ ವಿಶ್ವದ ಮೊದಲ ಪರಿಸರವಾದಿ ಎಂದು ಅವರು ಬಣ್ಣಿಸಿದರು.

ವೇದವ್ಯಾಸರ ಜಯಂತಿ ಮತ್ತು ಪರಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆಯ ಪರ್ವಕಾಲದಲ್ಲಿ ನಾವೆಲ್ಲರೂ ನಮ್ಮ ನಮ್ಮ ಪರಿಧಿಯಲ್ಲಿ ನಿಸರ್ಗ ಸ್ನೇಹಿ ಚಟುವಟಿಕೆಗಳನ್ನು ಮಾಡಬೇಕು. ನಮ್ಮ ಪರಿಸರ ಶುದ್ಧವಾಗಿದ್ದರೆ ದೇಶ ಸ್ವಚ್ಛವಾಗಿರುತ್ತದೆ ಎಂಬುದನ್ನು ಮರೆಯಬಾರದು. ವಿಶೇಷವಾಗಿ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು ಹಿರಿಯರು ಸಂಕಲ್ಪ ಮಾಡಬೇಕು. ಆಗ ಮಾತ್ರ ಪೂಜೆ, ಆರಾಧನೆ, ಜಯಂತಿಗಳಿಗೆ ಪೂರ್ಣ ಅರ್ಥ ಬರುತ್ತದೆ. ಪೂರ್ಣಪ್ರಜ್ಞರಾದ ಶ್ರೀ ಮಧ್ವರ ಸಿದ್ಧಾಂತ ಅನುಸರಣೆ ಮಾಡುವ ಎಲ್ಲರೂ ನಿತ್ಯ ಪರಿಸರ ಕಾಳಜಿ ತೋರುವ ಕಾರ್ಯಕರ್ತರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಮತ್ತು ಹಿರಿಯ ವಿದ್ವಾಂಸ ಡಾ. ನಾಗಸಂಪಿಗೆ ಆನಂದತೀರ್ಥಾಚಾರ್ಯ ಉಪನ್ಯಾಸ ನೀಡಿ, ಭಗವಾನ್ ಶ್ರೀಕೃಷ್ಣ ಭೂಭಾರ ಹರಣ ಮಾಡಿದ್ದಾನೆ. ಇದೇ ಸಂದರ್ಭ ಮರ, ಗಿಡ, ಬಳ್ಳಿಗಳನ್ನೂ ಮಕ್ಕಳಂತೆ ಪ್ರೀತಿಸಿದ್ದಾನೆ. ನಿಸರ್ಗಕ್ಕೆ ಹತ್ತಿರವಾದ ಪಾತ್ರ ಅವನದು. ಹಾಗಾಗಿ ನವಿಲುಗರಿ, ಬಿದಿರಿನ ಕೊಳಲುಗಳೇ ಅವನಿಗೆ ಪ್ರಿಯವಾಗಿದ್ದವು. ಗೋವುಗಳ ಸಂರಕ್ಷಣೆ, ಗೋಪಾಲಕರೊಂದಿಗೆ ಅನನ್ಯ ಪ್ರೀತಿ ಇಟ್ಟುಕೊಂಡ ಆತನ ಜೀವನ ಸಂದೇಶ ಇಂದಿಗೂ ಮಾದರಿ ಎಂದರು. ಇವತ್ತಿನ ಸಂದರ್ಭದಲ್ಲಿ ಅನೇಕರು ಮಕ್ಕಳಿಲ್ಲ ಎಂದು ಕೊರಗುತ್ತಾರೆ. ಒಂದು ಮರ ನೆಡುವುದರಿಂದ ೧೦ ಮಕ್ಕಳನ್ನು ಬೆಳೆಸಿದ ಪುಣ್ಯ ಬರುತ್ತದೆ ಎಂದು ಶಾಸ್ತçಗಳೇ ಸಾರಿವೆ. ಇದನ್ನು ಅರಿತು ನಡೆಯೋಣ ಎಂದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುವಿದ್ಯಾ ಮತ್ತು ಶ್ರೀಲಕ್ಷ್ಮೀ ಯದುನಂದನ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು.

https://kalpa.news/wp-content/uploads/2023/04/Christ-King-PU-College-Video-1.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadamysoreNewsinKannadaNewsKannadaShri Vidyeshathirtha Swamiji of Bandarakeri Muttಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಮೈಸೂರು
Share212Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾಳೆ ಆಯನೂರಿಗೆ ಪ್ರಧಾನಿ ಮೋದಿ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಹೀಗಿದೆ ಪರ್ಯಾಯ ಮಾರ್ಗ

Next Post

ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

kalpa News

kalpa News

Next Post
ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL