ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಬಾಂಗ್ಲಾದೇಶದ ಪ್ರತಿಭಟನೆಯನ್ನು ಅಲ್ಲಿನ ಆಂತರಿಕ ವಿಚಾರ ಎಂದು ಭಾರತ ಕರೆದಿರುವುದು ನನಗೆ ನೋವಾಗಿದ್ದು, ಇದಕ್ಕಾಗಿ ನಾವು ಭಾರತನ್ನು ಕ್ಷಮಿಸುವುದಿಲ್ಲ ಎಂದು ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಮುಹಮ್ಮದ್ ಯೂನಸ್ #Bangaldesh PM Muhammad Yunus ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಹೋದರನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡರೆ, ಅದು ಆಂತರಿಕ ವಿಷಯ ಎಂದು ನಾನು ಹೇಗೆ ಹೇಳಲಿ. ಎಂದಿದ್ದಾರೆ.
Also read: ವಕ್ಫ್ ಬೋರ್ಡ್ ವಿಚಾರದಲ್ಲಿ ಸೂಫಿ ಇಸ್ಲಾಮಿಕ್ ಮಂಡಳಿ ಮಹತ್ವದ ಹೇಳಿಕೆ
ಭಾರತವು ನಮ್ಮನ್ನು ಬೆಂಬಲಿಸಲಿಲ್ಲ. ನಾವು ಕುಟುಂಬದಂತೆ ಭಾವಿಸಲು ಬಯಸುತ್ತೇವೆ, ಯುರೋಪಿಯನ್ ಒಕ್ಕೂಟದಂತೆ ಪರಸ್ಪರರ ಕಂಪನಿಯನ್ನು ಆನಂದಿಸಲು ಬಯಸುತ್ತೇವೆ ಎಂದಿದ್ದಾರೆ.
ನಾವು ನಿಜವಾದ ಕುಟುಂಬ. ಹಾಗಾಗಿ, ಭಾರತವು ಆಂತರಿಕ ವ್ಯವಹಾರಗಳು ಎಂದು ಹೇಳಿದಾಗ ಅದು ನನಗೆ ನೋವುಂಟುಮಾಡಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post