ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನೂತನವಾಗಿ ನಿರ್ಮಾಣವಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಉದ್ಘಾಟಿಸುವುದನ್ನು ವಿರೋಧಿಸಿ ದೇಶದಲ್ಲಿ 19 ಪ್ರತಿಪಕ್ಷಗಳು ಬಹಿಷ್ಕರಿಸಿವೆ.
ಭವನವನ್ನು ಪ್ರಧಾನಿ ಉದ್ಘಾಟಿಸುವುದನ್ನು ವಿರೋಧಿಸಿ ಕಾಂಗ್ರೆಸ್ ನೀಡಿದ್ದ ಕರೆಗೆ ಬೆಂಬಲ ವ್ಯಕ್ತವಾಗಿದ್ದು, ದೇಶದಲ್ಲಿ ಒಟ್ಟು 19 ಪಕ್ಷಗಳು ಇದಕ್ಕೆ ಬೆಂಬಲ ಸೂಚಿಸಿವೆ.
ಪ್ರಮುಖವಾಗಿ ಕಾಂಗ್ರೆಸ್, ಆರ್’ಜೆಡಿ, ಡಿಎಂಕೆ, ಡಿಎಂಕೆ, ಶಿವಸೇನೆ (ಉದ್ದವ್ ಠಾಕ್ರೆ ಬಣ) ಟಿಎಂಸಿ, ಸಿಪಿಐ, ಎಎಪಿ ಸೇರಿ ಸುಮಾರು 19 ಪಕ್ಷಗಳು ಬಹಿಷ್ಕಾರವನ್ನು ಬೆಂಬಲಿಸಿವೆ.
Also read: ರೆಬಲ್’ಸ್ಟಾರ್ ಫ್ಯಾನ್ಸ್’ಗೆ ಗುಡ್ ನ್ಯೂಸ್: ಅಂಬಿ ಬರ್ತಡೇಗೆ ಮತ್ತೆ ರಿಲೀಸ್ ಆಗಲಿದೆ `ಅಂತ’
ಈ ಕುರಿತಂತೆ ಆರ್’ಜೆಡಿ ಪಕ್ಷ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ಉದ್ಘಾಟಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಉದ್ಘಾಟಿಸಬೇಕು ಎಂದಿದೆ.
ಶಿವಸೇನೆ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದಲ್ಲಿ ರಾಷ್ಟçಪತಿ ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದು, ಅವರಿಗೆ ಸಂಸತ್ತಿನ ಅಧಿಕಾರವಿದೆ, ಆದರೂ ಸಹ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಯವರನ್ನು ಬಿಟ್ಟು ಸಂಸತ್ ಉದ್ಘಾಟಿಸಲು ನಿರ್ಧರಿಸುವುದು ಸರಿಯಲ್ಲ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post