ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಗ್ರೀನ್ ಝೋನ್ ಆಗಿರುವ ಜಿಲ್ಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್’ಗಳನ್ನು ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೂ ತೆರೆಯಲು ಅನುಮತಿ ನೀಡಲಾಗಿದೆ.
ಈ ಕುರಿತಂತೆ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್ ಮಾಹಿತಿ ನೀಡಿದ್ದು, ಕೆಲವೊಂದು ಷರತ್ತುಗಳಿಗೆ ಒಳಪಟ್ಟು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆದಿಡಲು ಜಿಲ್ಲಾಡಳಿತವು ಅನುಮತಿ ನೀಡಿದೆ ಎಂದಿದ್ದಾರೆ.
ಷರತ್ತುಗಳು:
1. ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು.
2. ಸಿಬ್ಬಂದಿಗಳು, ಮ್ಯಾನೇಜರ್ ಮತ್ತು ಮಾಲೀಕರೂ ಸಹಾ ಸ್ಯಾನಿಟೈಸರ್, ಕೈಗವಸು ಮತ್ತು ಮಾಸ್ಕ್’ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
3. ಮಾಸ್ಕ್ ಇಲ್ಲದ ಗಿರಾಕಿಗಳಿಗೆ ತೈಲ ಸರಬರಾಜು ಮಾಡಕೂಡದು. ಸಾಧ್ಯವಾದರೆ ಒಂದೆರಡು ದಿನ ಮಾಸ್ಕ್ ಇಲ್ಲದ ಗಿರಾಕಿಗಳಿಗೆ ಉಚಿತವಾಗಿ ಮಾಸ್ಕ್ ಕೊಡಬಹುದು.
4. ಹೊರಜಿಲ್ಲೆಗಳಿಂದ ಬರುವ ವಾಹನಗಳ ಬಗ್ಗೆ ವಿಷೇಶವಾಗಿ ಟ್ರಕ್ಕುಗಳು ಮತ್ತು ಸರಕು ಸಾಗಾಣಿಕೆ ವಾಹನಗಳ ಬಗ್ಗೆ ವಿಷೇಶ ಗಮನವಹಿಸಿ ಅವುಗಳ ಸಿಬ್ಬಂದಿಗಳನ್ನು ದೂರದಲ್ಲಿಟ್ಟು ತೈಲ ಸರಬರಾಜು ಮಾಡಬೇಕು.
ಮೇಲಿನ ಷರತ್ತುಗಳನ್ನು ಪಾಲಿಸುವಲ್ಲಿ ಲೋಪವಾದರೆ ಮುಂದಿನ ಪರಿಣಾಮಗಳಿಗೆ ಅಥವಾ ಸರ್ಕಾರದ ಕಾನೂನು ಕ್ರಮಗಳಿಗೆ ಬಂಕ್ ಮಾಲೀಕರೇ ಹೊಣೆಗಾರರಾಗುತ್ತಾರೆ.
Get in Touch With Us info@kalpa.news Whatsapp: 9481252093
Discussion about this post