No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Saturday, October 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

Shivamogga | ವನವಾಸಿಗಳ ಸಂಕಷ್ಟ ಕುರಿತು ಶಾಸಕ ಶಾಂತರಾಂ ಸಿದ್ಧಿ ಬೇಸರ

kalpa News by kalpa News
July 28, 2026
in ಶಿವಮೊಗ್ಗ
0
plight of forest dwellers | MLA Shantaram Siddi concern
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ |

ಅರಣ್ಯ ಇಲಾಖೆ ವನವಾಸಿಗಳ ಪಾಲಿಗೆ ತೊಡಕಾಗಿದ್ದು, ಅರಣ್ಯ ಕಾಯಿದೆಗಳು ಯಾವಾಗ ಬದಲಾಗುತ್ತವೆಯೋ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತು ಶಾಸಕ ಶಾಂತರಾಂ ಸಿದ್ಧಿ ಬೇಸರ ವ್ಯಕ್ತಪಡಿಸಿದರು.

ನಗರದ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಅನ್ನಪೂರ್ಣೇಶ್ವರಿ ಮುಷ್ಠಿ ಅಕ್ಕಿ ಯೋಜನೆ ಹಾಗೂ ವನವಾಸಿ ಕಲ್ಯಾಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ನೇಹ ಮಿಲನ ಮತ್ತು 17ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅರಣ್ಯ ಕಾನೂನುಗಳನ್ನು ವಿರೋಧಿಸುವುದಿಲ್ಲ. ಆದರೆ ವನವಾಸಿಗಳಿಗೆ ಪೂರಕವಾಗುವಂತೆ ಅವುಗಳಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದರು.
ಅರಣ್ಯ ಕಾಯಿದೆಗಳ ಪರಿಣಾಮವಾಗಿ ವನವಾಸಿಗಳ ಜೀವನ ತೀವ್ರ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ರಸ್ತೆ, ವಿದ್ಯುತ್ ಸಂಪರ್ಕ, ಶಿಕ್ಷಣ ವ್ಯವಸ್ಥೆ ಮುಂತಾದವುಗಳು ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವನವಾಸಿಗಳ ಕಲ್ಯಾಣಕ್ಕಾಗಿ 1952ರಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಲಕ್ಷಾಂತರ ವನವಾಸಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

Also read: ಲೋಂಡಾ ಬಳಿ 2 ರೈಲು ಸಂಚಾರ ವ್ಯತ್ಯಯ | ಕಾರಣವೇನು?

ನಗರದ ಕಾರ್ಯಕರ್ತರು ವನವಾಸಿಗಳ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿದ್ದು, ಅವರ ಸಮಸ್ಯೆಗಳ ಬಗ್ಗೆ ನಗರವಾಸಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭವಾದ ಸಂಸ್ಥೆ ನಂತರ ಸಂಸ್ಕಾರ ಜಾಗೃತಿ, ಆರೋಗ್ಯ, ಕ್ರೀಡೆ ಮತ್ತು ಸ್ವಸಹಾಯ ಸಂಘಗಳ ಸ್ಥಾಪನೆ ಮುಂತಾದ ಕಾರ್ಯಗಳಲ್ಲಿ ತೊಡಗಿದೆ ಎಂದರು.

ವನವಾಸಿ ಕಲ್ಯಾಣ ಸಂಸ್ಥೆಯಡಿ ಹಾಸ್ಟೆಲ್‌ಗಳು ಮತ್ತು ಶಾಲೆಗಳ ಮೂಲಕ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೇಶದಾದ್ಯಂತ 203 ವಿದ್ಯಾರ್ಥಿ ನಿಲಯಗಳು, 10 ದೊಡ್ಡ ಆಸ್ಪತ್ರೆಗಳು ಹಾಗೂ 59 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ವನವಾಸಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿದ್ದು, ಮತಾಂತರವಾದವರು ಸಮುದಾಯದಿಂದ ದೂರವಾಗುವ ಪರಿಸ್ಥಿತಿ ಉಂಟಾಗುತ್ತದೆ. ಮತಾಂತರದಿಂದ ಬಡತನ ನಿವಾರಣೆ ಆಗುವುದಿಲ್ಲ ಎಂಬುದನ್ನು ಜನರು ಅರಿಯಬೇಕು ಎಂದು ಹೇಳಿದರು.

ಮತಾಂತರಗೊಂಡವರನ್ನು ಎಸ್ಸಿ, ಎಸ್ಟಿ ಪಟ್ಟಿಯಿಂದ ಹೊರಗಿಡುವ ಹೋರಾಟದ ಪರಿಣಾಮವಾಗಿ ಕಾನೂನು ಬದಲಾವಣೆಗಳಾಗಿವೆ. ಇದರಿಂದ ಈಗ ಮತಾಂತರಕ್ಕೆ ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ದೇಶದಾದ್ಯಂತ 17 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ 22 ಸಾವಿರಕ್ಕೂ ಹೆಚ್ಚು ಯೋಜನೆಗಳು ನಡೆಯುತ್ತಿದ್ದು, ಅವುಗಳಲ್ಲಿ ಮುಷ್ಠಿ ಅಕ್ಕಿ ಯೋಜನೆಯೂ ಒಂದು ಎಂದು ತಿಳಿಸಿದರು.
JNNCE Shivamoggaರಾಷ್ಟ್ರ ವಿರೋಧಿ ಶಕ್ತಿಗಳು ವನವಾಸಿಗಳ ಬಳಿ ತಲುಪುವ ಮೊದಲು ನಗರವಾಸಿಗಳು ಅವರ ಬಳಿ ಹೋಗಿ, ಅವರ ಜೀವನವನ್ನು ಅರಿತುಕೊಳ್ಳಬೇಕು. ವನವಾಸಿಗಳ ಜೊತೆ ನೇರ ಸಂಪರ್ಕ ಬೆಳೆಸಿದರೆ ಅವರ ಸಮಸ್ಯೆಗಳು ಸ್ಪಷ್ಟವಾಗಿ ತಿಳಿಯುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಷ್ಠಿ ಅಕ್ಕಿ ಯೋಜನೆಯ ರುಕ್ಮಿಣಿ ನಾಯಕ್, ವನವಾಸಿ ಮಕ್ಕಳಿಗೆ ಆಹಾರ ಕೊರತೆ ಉಂಟಾಗದಂತೆ ಮುಷ್ಠಿ ಅಕ್ಕಿ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಸುಮಾ ಮೂರ್ತಿ ವಹಿಸಿದ್ದರು. ವನವಾಸಿ ಕಲ್ಯಾಣದ ಕ್ಷೇತ್ರೀಯ ನಗರೀಯ ಕಾರ್ಯ ಪ್ರಮುಖ್ ಗೋಪಾಲ್ ಕೇಸರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  Kalpa News Advertising DisclaimerKalahamsa Infotech private limited    

Tags: Kannada NewsKannada News LiveKannada News Online ShivamoggaKannada WebsiteKannadaNewsWebsiteLatestNewsKannadaLocalNewsMalnadNewsMLA Shantharam SiddhiMushti Akki AbhiyanaNews in KannadaNews KannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share199Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

Indian Railway | ಲೋಂಡಾ ಬಳಿ 2 ರೈಲು ಸಂಚಾರ ವ್ಯತ್ಯಯ | ಕಾರಣವೇನು?

Next Post

Shivamogga | ಭೀಕರ ಕಾರು ಅಪಘಾತ: ದಾವಣಗೆರೆ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವು

kalpa News

kalpa News

Next Post
Car Accident Near Shivamogga Davanagere Man Dies on the Spot

Shivamogga | ಭೀಕರ ಕಾರು ಅಪಘಾತ: ದಾವಣಗೆರೆ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವು

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL