ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಿರುವ ವಿಶ್ವದ ಉದ್ದದ ಸುರಂಗ ಮಾರ್ಗ ‘ಅಟಲ್ ಸುರಂಗ ಹೆದ್ದಾರಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ.
ಇಂದು ಮುಂಜಾನೆ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಗಡಿಭಾಗದ ಮೂಲ ಸೌಕರ್ಯಕ್ಕೆ ಅಟಲ್ ಸುರಂಗ ಹೊಸ ಶಕ್ತಿಯನ್ನು ನೀಡಲಿದೆ. ವಿಶ್ವದರ್ಜೆಯ ಗುಣಮಟ್ಟದ ಗಡಿ ಸಂಪರ್ಕಕ್ಕೆ ಇದು ಉತ್ತಮ ಉದಾಹರಣೆ. ಗಡಿಭಾಗದ ಮೂಲಸೌಕರ್ಯಗಳನ್ನು ಹೆಚ್ಚಿಸಲು ದೀರ್ಘಕಾಲದಿಂದ ಬೇಡಿಕೆಯಿತ್ತು, ಆದರೆ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ, ಮಧ್ಯದಲ್ಲಿಯೇ ಕೆಲಸ ನಿಂತುಹೋಗುತ್ತಿತ್ತು, ಇದೀಗ ಅಟಲ್ ಸುರಂಗ ಹೆದ್ದಾರಿ ಸಾಕಾರಗೊಂಡಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
PM @narendramodi travels from South Portal of #AtalTunnelRohtang to North Portal pic.twitter.com/7fRROelMbH
— DD News (@DDNewslive) October 3, 2020
ಗಡಿಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಇದರ ಪ್ರಯೋಜನ ನಮ್ಮ ಸೇನೆಯ ಯೋಧರಿಗೆ ಮತ್ತು ಸಾಮಾನ್ಯ ಜನತೆಗೆ ಕೂಡ ಸಿಗಲಿದೆ. ದೇಶದ ಭದ್ರತೆಗಿಂತ ಮುಖ್ಯವಾದ ವಿಷಯ ಬೇರೊಂದಿಲ್ಲ. ಆದರೆ ಒಂದು ಸಮಯದಲ್ಲಿ ನಮ್ಮ ದೇಶದ ಭದ್ರತೆ ಹಿತಾಸಕ್ತಿ ವಿಷಯದಲ್ಲಿ ರಾಜಿ ಮಾಡಿಕೊಂಡದ್ದನ್ನು ನಾವು ನೋಡಿದ್ದೇವೆ ಎಂದರು.
ಎಲ್ಲಿಂದ ಎಲ್ಲೆಗೆ ಸಂಪರ್ಕಿಸುತ್ತದೆ?
ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ 46 ಕಿಲೋ ಮೀಟರ್ ದೂರದ 5 ಗಂಟೆಗಳ ಪ್ರಯಾಣ ಕಡಿತವಾಗಲಿದೆ. ಸಮುದ್ರ ಮಟ್ಟದಿಂದ 3000 ಮೀಟರ್ ಅಂದರೆ 10,000 ಅಡಿಗಳ ಎತ್ತರಲ್ಲಿದೆ ಈ ಸುರಂಗ ಮಾರ್ಗ.
ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗ ಮಾರ್ಗ ಇದಾಗಿದ್ದು, ಪ್ರತಿ 60 ಮೀಟರ್’ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸುರಂಗದ ಒಳಮಾರ್ಗದ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ಸುರಂಗ ಮಾರ್ಗ ಕೊರೆಯಲಾಗಿದೆ. ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋ ಮೀಟರ್.ಗಳಷ್ಟು ದೂರವನ್ನು ಕಡಿಮೆಗೊಳಿಸಿದೆ. ಅಲ್ಲದೇ ನಾಲ್ಕು ಗಂಟೆಗಳ ಅವಧಿ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post