ಶಿವಮೊಗ್ಗ: ಕಲಿಯುಗ ಕಾಮಧೇನು ಎಂದೇ ಭಕ್ತರಿಂದ ಪೂಜಿಸಲ್ಪಡುವ ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವರ್ಧಂತಿ ಉತ್ಸವ ಇಂದು ದುರ್ಗಿಗುಡಿ ಮಠದಲ್ಲಿ ಅದ್ದೂರಿಯಾಗಿ ನಡೆಯಿತು.
ರಾಯರ ವರ್ಧಂತಿ(ಜನ್ಮದಿನ) ನಿಮಿತ್ತ ಶ್ರೀಮಠದಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದವು. ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಅವರು ಮತ್ತು ಹಿರಿಯ ಟ್ರಸ್ಟಿ ನಾಗರಾಜರಾಯರ ನೇತೃತ್ವದಲ್ಲಿ ಶ್ರೀರಾಯರಿಗೆ ರಜತ ರಥೋತ್ಸವ ನಡೆಯಿತು.
ಹಿರಿಯ ಸಮಾಜ ಸೇವಕ ರಾಮಸ್ವಾಮಿ, ಭೀಮಾ ಜೋಯಿಸ್, ರಾಮಚಂದ್ರ ಹಾಜರಿದ್ದರು. ಮಹಿಳಾ ಭಜನಾ ಮಂಡಳಿಯವರಿಂದ ಸುಶ್ರಾವ್ಯವಾಗಿ ಹರಿಕೀರ್ತನೆ, ಭಜನೆ ನಡೆಯಿತು.
ಮಂತ್ರಾಲಯ ಗುರುಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ ಜನ್ಮದಿನ ಇಂದು ವಿಶ್ವದಾದ್ಯಂತ ನಡೆಯುತ್ತಿದೆ. ಪೂರ್ವಾಶ್ರಮದಲ್ಲಿ ವೆಂಕಟನಾಥರಾಗಿ ನಾಮಧೇಯ ಹೊಂದಿದ್ದು ನಂತರ ಶ್ರೀಸುಧೀಂದ್ರ ತೀರ್ಥರಿಂದ ದೀಕ್ಷೆ ಪಡೆದು ಗುರು ಪರಂಪರೆಯನ್ನು ಮುಂದುವರೆಸಿದರು.
(ವರದಿ: ಡಾ.ಸುಧೀಂದ್ರ)
Discussion about this post