ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರ್ಮಿಸಿದ ಕೊನೆಯ ಚಿತ್ರ ಫ್ಯಾಮಿಲಿ ಪ್ಯಾಕ್’ ಈಗ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ನಿರ್ಮಾಣವಾದ ಕೊನೆಯ ಚಿತ್ರ ಇದಾಗಿದ್ದು, ಹೆಸರೇ ಹೇಳುವಂತೆ ಇದು ಅಪ್ಪಟ ಕೌಟುಂಬಿಕ ಮನರಂಜನಾ ಕಥಾಹಂದರ ಹೊಂದಿದೆ.
ನಿರ್ದೇಶನದಲ್ಲಿ ಮಾಗಿದ ಶಿವಮೊಗ್ಗದ ಅರ್ಜುನ್ ಕುಮಾರ್
ಫ್ಯಾಮಿಲಿ ಪ್ಯಾಕ್ ಚಿತ್ರವನ್ನು ನಮ್ಮ ಶಿವಮೊಗ್ಗದ ಪ್ರತಿಭೆ ಅರ್ಜುನ್ ಕುಮಾರ್ ಅವರು ನಿರ್ದೇಶನ ಮಾಡಿದ್ದು, ಇವರ ಮೊದಲ ಚಿತ್ರಕ್ಕೆ ಹೋಲಿಸಿದರೆ ಬಹಳಷ್ಟು ಪ್ರಬುದ್ಧತೆಗೆ ಹೊರಳಿದ್ದಾರೆ.
Also Read: ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಅಧಿಕೃತ ಅನುಮೋದನೆ
ತಮ್ಮ ಮೊದಲ ಚಿತ್ರ ಸಂಕಷ್ಟಕರ ಗಣಪತಿ ಚಿತ್ರವನ್ನು ಅರ್ಜುನ್ ಉತ್ತಮವಾಗಿಯೇ ನಿರ್ದೇಶನ ಮಾಡಿದ್ದರೂ, ಬಹಳಷ್ಟು ಕಲಿಯುವುದಿತ್ತು. ಆದರೆ, ಫ್ಯಾಮಿಲಿ ಪ್ಯಾಕ್ ಚಿತ್ರದ ಕಥೆಯ ಆಯ್ಕೆ ಹಾಗೂ ನಿರ್ದೇಶನದಲ್ಲಿ ತಮ್ಮ ಮಾಗಿದ ಶ್ರಮದಿಂದ ಅರ್ಜುನ್ ಕುಮಾರ್ ಗೆದ್ದಿದ್ದು, ಅವರ ಈ ಪ್ರಯೋಗ ಚಿತ್ರರಸಿಕರಿಗೆ ಮುದ ನೀಡುತ್ತದೆ.

ಪುನೀತ್ ಸರ್ ಇರಬೇಕಿತ್ತು: ಅರ್ಜುನ್
ಇನ್ನು, ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಅರ್ಜುನ್ ಕುಮಾರ್, ಅಪ್ಪು ಸರ್ ಅವರ ವಿಷನ್ ಇದ್ದಿದ್ದೇ ಕನ್ನಡ ಚಿತ್ರರಂಗವನ್ನು ಗ್ಲೋಬಲ್ ಫ್ಲಾಟ್’ಫಾರಂಗೆ ತೆಗೆದುಕೊಂಡುಹೋಗಬೇಕು ಎನ್ನುವುದಾಗಿತ್ತು. ಈಗ ಅಮೆಜಾನ್ ಪ್ರೈಂ 240 ದೇಶಗಳಲ್ಲಿ ಇದೆ. ಹೀಗಾಗಿ, ಕನ್ನಡ ಸಿನಿಮಾ ಇಷ್ಟು ದೇಶಗಳಿಗೆ ತಲುಪುತ್ತದೆ ಎನ್ನುವುದು ಸಂತೋಷದ ಸಂಗತಿ. ಅಪ್ಪು ಸರ್ ಅವರ ಕನಸೂ ಸಹ ಅದೇ ಆಗಿತ್ತು ಎಂದಿದ್ದಾರೆ.
ಚಿತ್ರದ ಕುರಿತಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಸಂದರ್ಭದಲ್ಲಿ ಅಪ್ಪು ಸರ್ ನಮ್ಮೊಂದಿಗೆ ಇಲ್ಲ ಎನ್ನುವುದೇ ಕೊರಗು ಎಂದು ದುಃಖ ವ್ಯಕ್ತಪಡಿಸಿದರು.

ಇನ್ನು, ಈ ಬಗ್ಗೆ ಮಾತನಾಡಿರುವ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್, ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದು ಒಂದು ಆಯಾಮವಾದರೆ, ಒಟಿಟಿಯಲ್ಲಿ ಬಿಡುಗಡೆಯಾಗಿರುವುದು ಸಂತಸದ ಸಂಗತಿ. ಚಿತ್ರದ ಬಗ್ಗೆ ಬರುತ್ತಿರುವ ಅಭಿಪ್ರಾಯ ಹಾಗೂ ಶ್ಲಾಘನೆಗಳು ಸಂತೋಷ ಮೂಡಿಸಿದೆ. ಇತರ ಭಾಷೆಗಳಿಂದಲೂ ರಿವ್ಯೆಗಳು ಬರುತ್ತಿರುವುದು ಸಮಾಧಾನ ನೀಡಿದೆ ಎಂದಿದ್ದಾರೆ.
Also Read: ಮಂತ್ರಿ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪ ಹಾಳು ಮಾಡುತ್ತಿದೆ : ಹೆಚ್‌ಡಿಕೆ
ಪುನೀತ್ ರಾಜಕುಮಾರ್ ಸರ್ ಅವರ ಪ್ರೊಡಕ್ಷನ್ ಎಂಬ ಹಾಗೂ ಅವರಿಗಾಗಿ, ಅವರೊಂದಿಗೆ ಕೆಲಸ ಮಾಡಬಹುದು ಎಂಬ ಕಾರಣಕ್ಕಾಗಿ ಈ ಚಿತ್ರ ಒಪ್ಪಿಕೊಂಡೆ. ನನ್ನ ನಟನೆಯನ್ನು ಅವರ ಮೆಚ್ಚಿಕೊಳ್ಳುವುದು ಮಾತ್ರವಲ್ಲ, ಯಾವ ರೀತಿ ನಟಿಸಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು ಎಂದರು.
ನಾಯಕ ಲಿಖಿತ್ ಶೆಟ್ಟಿ ಮಾತನಾಡಿದ್ದು, ಒಳ್ಳೆಯ ರಿವ್ಯೆ ಬರುತ್ತಿರುವುದು ಸಂತೋಷ ಮೂಡಿಸಿದರು. ಈ ಚಿತ್ರದಲ್ಲಿ ನನ್ನ ಪಾತ್ರ ಜೀವನದಲ್ಲಿ ಯಾವುದೇ ಸಂತೋಷವಿಲ್ಲದ ಪರಿಸ್ಥಿತಿಯಲ್ಲಿ ದೆವ್ವದ ರೂಪದಲ್ಲಿ ವ್ಯಕ್ತಿ(ರಂಗಾಯಣ ರಘು) ಬಂದು ಬದಲಾವಣೆ ಮಾಡುತ್ತಾರೆ. ಆಮೇಲೆ ಅವರೇ ವಿರುದ್ಧವಾಗುವುದು ಯಾಕೆ ಎಂಬುದು ಕಥೆ. ಚಿತ್ರದಲ್ಲಿ ನನ್ನ ಪಾತ್ರ ಎರಡು ಶೇಡ್ ಹೊಂದಿದ್ದು, ಸಿನಿ ರಸಿಕರು ನೋಡಿ ಹರಸಬೇಕು ಎಂದರು.
ಪಾತ್ರವರ್ಗದಲ್ಲಿ ಯಾರೆಲ್ಲಾ ಇದ್ದಾರೆ?
ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಪದ್ಮಜಾ ರಾವ್, ನಾಗಭೂಷಣ್ ಇತರರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post