ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂದು ಹೆದರಿದ ತಾಯಿಯೊಬ್ಬಳು ತಾನು ಹೆತ್ತ ಮಗಳನ್ನೇ ಹತ್ಯೆ ಮಾಡಿರುವ ಘಟನೆ ನಗರಕ್ಕೆ ಸಮೀಪ ಮತ್ತೋಡಿನಲ್ಲಿ ನಡೆದಿದೆ.
ಇಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಲ್ಲಿನ ನಿವಾಸಿ 37 ವರ್ಷ ಮಹಿಳೆ ಎಂಬಾಕೆ ತನ್ನ ಅಪ್ರಾಪ್ತ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ.
ಲತಾ ತನ್ನ ಸಂಬಂಧಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳೆ ಎನ್ನಲಾಗಿದ್ದು, ಈ ವಿಚಾರ ಮಗಳಿಗೆ ತಿಳಿದಿದೆ. ಎಲ್ಲಿ ತನ್ನ ಕೃತ್ಯ ಬಯಲಾಗುತ್ತದೋ ಎಂಬ ಹೆದರಿಕೆಯಲ್ಲಿ ತನ್ನ ಮಗಳನ್ನೇ ಈಕೆ ಕೊಂದಿದ್ದಾಳೆ ಎಂದು ವರದಿಯಾಗಿದೆ.
Get in Touch With Us info@kalpa.news Whatsapp: 9481252093
Discussion about this post