ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಅದ್ದೂರಿ ದಸರಾ ಅಂಗವಾಗಿ ಮಹಿಳಾ ದಸರದ ಸಾಂಸ್ಕೃತಿಕ – ಕಲಾ ಸ್ಪರ್ಧೆಗಳಿಗೆ ಇಂದು ಡಿವಿಎಸ್ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ರಂಗೋಲಿ, ಹಸೆ, ಮೆಹಂದಿ, ಬ್ಯೂಟಿಷನ್, ಜಾನಪದ ಗೀತೆಗಳು, ಅಂತಾಕ್ಷರಿ ಹೀಗೆ ಹಲವಾರು ಕಲಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಗರದ ಮಹಿಳೆಯರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿವಿಎಸ್ ಸಂಸ್ಥೆಯ ರಿಜಿಸ್ಟರ್ ಹರೀಶ್, ಅಧ್ಯಕ್ಷತೆಯನ್ನು ಮಹಿಳಾದ ದಸರಾ ಸಮಿತಿಯ ಅಧ್ಯಕ್ಷರಾದ ರೇಖಾ ರಂಗನಾಥ್ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಅ.ಮ.ಪ್ರಕಾಶ್, ಸಂಗೀತ ನಾಗರಾಜ್, ಸುರೇಖಾ ಮುರಳಿಧರ್, ಮಂಜುಳಾ ಶಿವಣ್ಣ, ಅನ್ನಪೂರ್ಣ (ಅನಿತಾ) ಹಾಗೂ ಮಹಿಳಾ ದಸರಾ ಸಮಿತಿಯ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post