ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ಸಂಜೆಯಿಂದ ಆರಂಭವಾಗಿ ರಾತ್ರಿ ಸುರಿದ ಭಾರೀ ಮಳೆ ಹಲವು ಕಡೆಗಳಲ್ಲಿ ಅವಾಂತರ ಸೃಷ್ಠಿ ಮಾಡಿದ್ದು, ಇರು ಹಲವು ರೀತಿಯ ಪರಿಣಾಮಗಳನ್ನು ಬೀರಿದೆ.
ಕುಂಸಿ-ಆನಂದಪುರಂ ನಡುವಿನ ರೈಲು ಮಾರ್ಗದ ಜಲ್ಲಿಕಲ್ಲುಗಳು ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಬಹಳಷ್ಟು ತೊಂದರೆ ಉಂಟು ಮಾಡಿದೆ.
ಟ್ರಾಕ್ ಮೆನ್’ಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಹಳಿ ರಿಪೇರಿ ಕಾರ್ಯದ ಹಿನ್ನೆಲೆ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಹೊರಟಿದ್ದ ರೈಲುಗಳು ತಡವಾಗಿ ಸಂಚರಿಸಿವೆ.
ಈ ಭಾಗ ಇಳಿಜಾರು ಪ್ರದೇಶವಾಗಿದ್ದರಿಂದ ಮಳೆ ನೀರು ರಭಸವಾಗಿ ಹರಿದಾಗ ಜೆಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಟ್ರಾಕ್ ಮೆನ್’ಗಳು ಗಸ್ತು ವೇಳೆ ಜೆಲ್ಲಿ ಕೊಚ್ಚಿ ಹೋಗಿರುವುದು ಗೊತ್ತಾಗಿದೆ. ಕೂಡಲೆ ರೈಲು ನಿಲ್ದಾಣಗಳಿಗೆ ವಿಷಯ ತಿಳಿಸಿದ್ದರು.
Also read: ಗಮನಿಸಿ! ಅ.9 ರಂದು ಶಿವಮೊಗ್ಗ ನಗರದ ಈ ಪ್ರದೇಶದಲ್ಲಿ ಕರೆಂಟ್ ಇರುವುದಿಲ್
ರೈಲ್ವೆ ಇಂಜಿನಿಯರಿಂಗ್ ತಂಡ, ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಜೆಲ್ಲಿ ಭರ್ತಿ ಮಾಡಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಟ್ರಾಕ್ ರಿಪೇರಿ ಹಿನ್ನೆಲೆ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಇಂರ್ಟ’ಸಿಟಿ ರೈಲು ಸಾಗರ – ಆನಂದಪುರ ನಿಲ್ದಾಣಗಳ ನಡುವೆ ನಿಲ್ಲಿಸಲಾಗಿತ್ತು. ಸದ್ಯ ಈ ರೈಲು ಸುಮಾರು 2 ಗಂಟೆ ತಡವಾಗಿ ಸಂಚರಿಸುತ್ತಿದೆ. ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಕುವೆಂಪು ಎಕ್ಸ್’ಪ್ರೆಸ್ ರೈಲು ಕೂಡ ವಿಳಂಬವಾಗಿ ಸಂಚರಿಸಿದೆ.
ಇನ್ನು, ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಏಕಾಏಕಿ ಭಾರೀ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳ, ನದಿ, ನಾಲೆಗಳು ತುಂಬಿ ಹರಿದಿವೆ. ಕೆಲವು ಕಡೆಗಳಲ್ಲಿ ನಾಲೆಗಳು ಒಡೆದು ಕೃಷಿ ಭೂಮಿ ಮೇಲೆ ನೀರು ಹರಿದ ಪರಿಣಾಮ ಕೃಷಿ ಜಮೀನಿನಲ್ಲಿ ಮಣ್ಣು ಸರಿದು ಬೆಳೆಗೆ ತೊಂದರೆಯಾಗಿದೆ.
ಶಿವಮೊಗ್ಗ ತಾಲೂಕಿನ ಗೌಡನ ಕೆರೆ ಕೋಡಿ ಉಕ್ಕಿ ಹರಿದ ಪರಿಣಾಮ ಕೆಳಭಾಗದ ನಾಲೆಯ ದಂಡೆ ಮೇಲೆ ನೀರು ಉಕ್ಕಿ ಹರಿದಿದೆ. ಕೆಲವು ಕಡೆಗಳಲ್ಲಿ ನಾಲೆಯ ದಂಡೆಗೂ ಹಾನಿಯಾಗಿದೆ. ಜಮೀನಿಗೆ ತೆರಳಲು ಪರದಾಡುವಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post