ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ರಾಂತಿಗೆ ಎಂದು ವ್ಯಕ್ತಿಯೊಬ್ಬ ನಗರ ವ್ಯಾಪ್ತಿಯಲ್ಲಿ ತುಂಗಾ ನದಿಯ ಬಂಡೆಯ ಮೇಲೆ ಮಲಗಿದ್ದು, ಏಕಾಏಕಿ ನದಿಯಲ್ಲಿ ನೀರು ಹೆಚ್ಚಾಗಿ, ಅಲ್ಲಿಯೇ ಸಿಲುಕಿದ್ದ ಆತನನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ನಿನ್ನೆ ಗೋಪಾಲ್(35) ಎಂಬಾತ ತುಂಗಾ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಮಲಗಿದ್ದ. ಮೊಣಕಾಲಿನಷ್ಟು ಉದ್ದ ನದಿ ನೀರು ಇದ್ದ ಕಾರಣ ಆತನಿಗೆ ಹೋಗುವಾಗ ಯಾವುದೇ ತೊಂದರೆಯಾಗಲಿಲ್ಲ. ಆದರೆ, ಸಂಜೆ ನಂತರ ಸುರಿದ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಕಲ್ಲು ಬಂಡೆಯ ತುದಿ ಹೊರತು ಪಡಿಸಿ ಉಳಿದಕಡೆಯೆಲ್ಲಾ ನೀರು ಆವರಿಸಿಕೊಂಡಿದೆ. ಬೆಳಿಗ್ಗೆ ಎಚ್ಚರಗೊಂಡಾಗ ಆತನಿಗೆ ಹೊಳೆ ದಾಟಿ ಬರಲು ಆಗದೆ ದಂಡೆಯ ಮೇಲೆ ಆತಂಕದಿಂದ ಕುಳಿತಿದ್ದಾನೆ.
ನೀರಿನ ಹರಿವು ಜಾಸ್ತಿ ಆದ ಕಾರಣ ದಡಕ್ಕೆ ಬಾರಲು ಸಾಧ್ಯವಾಗಿರುವುದಿಲ್ಲ. ಚಂದ್ರಶೇಖರಪ್ಪ ಎನ್ನುವವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
Also read: ಗಮನಿಸಿ! ಅ.9 ರಂದು ಶಿವಮೊಗ್ಗ ನಗರದ ಈ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ
ಬೆಳಗ್ಗೆ 6 ಗಂಟೆ ವೇಳೆಗೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಕಲ್ಲು ಬಂಡೆಯ ಕಾರಣದಿಂದ ಕೊಂಚ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಆದರೆ, ನಿರಂತರವಾಗಿ ಕಾರ್ಯಾಚರಣೆ ನಡೆಸಿ, ವ್ಯಕ್ತಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post