ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿಯ ಯೋಜನೆಯಾದ ‘ಜಲಜೀವನ್ ಮಿಷನ್’ ಈ ಯೋಜನೆಯಡಿ ಕುಡಿಯುವ ನೀರನ್ನೂ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ವಿರೋಧಿಸಿ ಪ್ರತಿಭಟನೆ ನಡೆಸಿತು.
ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸರ್ಕಾರದ ಈ ಯೋಜನೆ ಉತ್ತಮವಾಗಿದ್ದರೂ ಕೊಳಾಯಿಗಳಿಗೆ ಮೀಟರ್ ಅಳವಡಿಸುವ ಮೂಲಕ ನೀರನ್ನೂ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗೀಕರಣ ಹಾಸುಹೊಕ್ಕಾಗಿರುವಂತೆ ನೀರಿನ ಪೂರೈಕೆಯನ್ನೂ ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಕೂಡಲೇ ಗ್ರಾಮೀಣ ಪ್ರದೇಶದ ಜನರಿಗೆ ನೀರು ಒದಗಿಸುವ ಜಲಜೀವನ್ ಮಿಷನ್‌ನ ಕೊಳಾಯಿ ಸಂಪರ್ಕಗಳಿಗೆ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ಈಗ ಜಾರಿಯಲ್ಲಿರುವಂತೆ ಕನಿಷ್ಠ ನೀರಿನ ಕಂದಾಯ ಮಾತ್ರ ವಸೂಲು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮನು, ಎಸ್ ಸಿ ಘಟಕದ ಅಧ್ಯಕ್ಷರಾದ ಪಲ್ಲವಿ ,ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರಾದ ಮುಜೀಬ್ , ಅಕ್ಬರ್ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ , ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಹೊಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನ ಮಲ್ಲೇಶ್, ಭರತ್, ಯುವ ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರಲೆ ಮಂಜು, ಅಬ್ದುಲ್ಲಾ, ಶಿವು ಮಲವಗೊಪ್ಪ, ಸದ್ದಾಮ್ , ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ , ಗಿರೀಶ್ ಉತ್ತರ ಬ್ಲಾಕ್, ಗ್ರಾಮಾಂತರ ಬ್ಲಾಕ್ ಯುವ ಕಾಂಗ್ರೆಸ್ ನ ಸಂದೀಪ , ನಾಗೇಂದ್ರ, ಚಂದ್ರು, ವಿಜಯ್, ರವಿ ಕಟ್ಟಿಕೆರೆ, ಆಕಾಶ್, ಚಂದ್ರೋಜಿ ರಾವ್, ಡಿ. ಕೆ. ಅರುಣ್, ಅನಿಲ್ ಕುಮಾರ್, ಅನಿಲ್ , ಪ್ರತಾಪ್ , ಮುಬಾಸಿರ್, ವಿಕ್ರಂ, ಕಿರಣ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post