ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿ.ವೈ.ರಾಘವೇಂದ್ರ #B Y Raghavendra ಅವರು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಹೇಳಿದರು.
ಅವರು ಇಂದು ಫೇಸಿಟ್‍ನ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ವೃತ್ತಿಪರರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಒಂದೆರೆಡು ವ್ಯತ್ಯಾಸ ಆಗಬಹುದು. ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡಿದ್ದೇನೆ. ಇದೇ ತರಹದ ವಾತಾವರಣ ಇದೆ ಎಂದರು.

Also read: ವಿಐಎಸ್’ಎಲ್ ಕಾರ್ಖಾನೆ ಪುನಾರಂಭಕ್ಕೆ ಕ್ರಮ | ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮಹತ್ವದ ಹೇಳಿಕೆ
ಕ್ಲಸ್ಟರ್ ಪ್ರಭಾರಿ ಭಾನುಪ್ರಕಾಶ್ ಮಾತನಾಡಿ, 47 ರಲ್ಲಿ ಕಾಂಗ್ರೆಸ್ ಈಗಿನ ಕಾಂಗ್ರೆಸ್ ಆಗಿರಲಿಲ್ಲ. ಬೂಟು, ಲಾಠಿ ಏಟು ತಿಂದು ಸ್ವಾತಂತ್ರ್ಯ ಬಂದಿತು. 51 ರಲ್ಲಿ ಕಾಂಗ್ರೆಸ್ ಆಡಳಿತ ಆರಂಭ. ಆಗ ಪಕ್ಷ ಇರಲಿಲ್ಲ. ಈಗ ಹಸ್ತದ ಗುರುತಿನ ಕಾಂಗ್ರೆಸ್ ಅಲ್ಲ. ಸ್ವಾತಂತ್ರ್ಯ ಹೋರಾಟದ ಪ್ರತಿನಿಧಿ ಆಗಿತ್ತು. ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಆದರೆ ಮಾಡಲಿಲ್ಲ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post