No Result
View All Result
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ
English Articles

Tragic Accident in Gujarat | Head-on Collision Between Two MSRTC Buses | 7 Burnt Alive

by ಕಲ್ಪ ನ್ಯೂಸ್
June 3, 2026
0

Kalpa Media House  |  Surat   | At least seven people were killed and over 35 others injured in a horrific...

Read moreDetails
ಸಿಂಗಾಪುರ ವಿರುದ್ಧ 25-0 ಅಂತರದ ಜಯದೊಂದಿಗೆ ಭಾರತದ U18 ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ

India U18 Women Storm into Semifinals with 25–0 Win Over Singapore

June 3, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
  • Advertise With Us
  • Grievances
  • About Us
  • Contact Us
Wednesday, June 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ: ನಿದಿಗೆ ಬೋಟಿಂಗ್ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ

ಷರತ್ತು ಉಲ್ಲಂಘಿಸಿ ಕೆರೆಯ ನಡುವೆ ಅವೈಜ್ಞಾನಿಕ ಏರಿ ನಿರ್ಮಾಣ? ಜಮೀನು, ತೋಟ, ರಾಷ್ಟ್ರೀಯ ಹೆದ್ದಾರಿಗೂ ಧಕ್ಕೆಯ ಆತಂಕ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 11, 2020
in ಶಿವಮೊಗ್ಗ, ಭದ್ರಾವತಿ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭದ್ರಾವತಿ: ನಿದಿಗೆ ಕೆರೆಯಲ್ಲಿ ದೋಣಿ ವಿಹಾರ ನಡೆಸುತ್ತಿರುವ ಚುಂಚಾದ್ರಿ ಮೀನು ಅಭಿವೃದ್ಧಿ ಮತ್ತು ಜಲಕ್ರೀಡೆ ಸಂಸ್ಥೆ, ಸರ್ಕಾರದ ಆದೇಶ ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ತನ್ನ ಖಾಸಗೀ ಸ್ವತ್ತಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಅಕ್ಕಪಕ್ಕದ ಜಮೀನು ಹಾಗೂ ತೋಟಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಿಲ್ಟ್ರಿಕ್ಯಾಂಪ್ ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ಕಿಡಿ ಕಾರಿದ ರೈತರು, ಭದ್ರಾ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ನಿದಿಗೆ ಕೆರೆಯಲ್ಲಿ ಚುಂಚಾದ್ರಿ ಸಂಸ್ಥೆಯವರು ಸರಕಾರದೊಂದಿಗೆ ಮಾಡಿಕೊಂಡಿರುವ ಕರಾರನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಕೆರೆಯಲ್ಲಿನ ಹೂಳು ತೆಗೆದು ರಸ್ತೆ ಇಲ್ಲದಂತೆ ಅಕ್ರಮವೆಸಗಿ ಜಮೀನುಗಳ ಕಡೆ ಸುಮಾರು 15 ಅಡಿ ಎತ್ತರದ ರಸ್ತೆ ನಿರ್ಮಿಸಿದ್ದಾರೆ. ಇದರಿಂದಾಗಿ ಜಮೀನುಗಳಿಂದ ನೀರು ಕೆರೆಗೆ ಸರಾಗವಾಗಿ ಹರಿದು ಹೋಗದೇ ತೋಟ, ಬತ್ತದ ಫಸಲು ನಾಶವಾಗುತ್ತಿದೆ. ಹೂಳಿನ ಏರಿಗಳನ್ನು ತೆಗೆಯುವಂತೆ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದರೂ ಚುಂಚಾದ್ರಿ ಸಂಸ್ಥೆ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯ ಅಂಗಳದಲ್ಲಿ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ನಡು ನೀರಿನಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಇದರಿಂದ ಸುತ್ತಮುತ್ತಲಿನ ಜಮೀನುಗಳಿಗಿಂತಲೂ ಎತ್ತರ ಇರುವ ಕಾರಣ ಜಮೀನು ನೀರು ಹರಿದು ಹೋಗದೇ ಮುಳುಗಡೆಯಾಗುತ್ತಿದೆ. ಇನ್ನು, ದೋಣಿ ವಿಹಾರದ ಸಲಕರಣೆಗಳನ್ನು ಓಡಿಸಲು ಜಿಲ್ಲಾ ಪಂಚಾಯತ್ ಅಥವಾ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದು ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.

ರೈತರ ಬೇಡಿಕೆಗಳೇನು?

  • ನಮ್ಮ ಜಮೀನುಗಳ ಪಕ್ಕದಲ್ಲಿ ಹಾಕಲಾಗಿರುವ ಹೂಳನ್ನು ತೆರವುಗೊಳಿಸಬೇಕು, ಸರಕಾರಿ ಆದೇಶದ ಷರತ್ತುಗಳನ್ನು ಉಲ್ಲಂಘಿಸಿ ಅನುಮೋದಿಸಿರುವ ನಕ್ಷೆಯನ್ನು ರದ್ದುಗೊಳಿಸಬೇಕು
  • ಕೆರೆಯ ಅಂಗಳದಲ್ಲಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಿ, ದೋಣಿ ವಿಹಾರ ನಿಲ್ಲಿಸಬೇಕು
  • ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಕುರಿತು ಸಂಬಂಧಿತ ಪ್ರಾಧಿಕಾರದಿಂದ ಮಂಜೂರಾತಿ/ಅನುಮತಿ ಪಡೆಯುವುದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು, ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಈ ಹಿಂದಿನ ಕಾರ್ಯಪಾಲಕ ಅಭಿಯಂತರರಿಗೆ ನೀಡಿದ ಮನವಿಗೆ ಸ್ಪಂದಿಸಿ ಚುಂಚಾದ್ರಿ ಸಂಸ್ಥೆಗೆ ದಿನಾಂಕ 23-11-2018 ರಲ್ಲಿ ಪತ್ರ ಬರೆದು ಕರಾರಿನ ಷರತ್ತುಗಳಂತೆ ಕೂಡಲೇ ಕೆರೆಯ ಅಂಗಳದಲ್ಲಿ ಹಾಕಿರುವ ಹೂಳಿನ ಏರಿಗಳನ್ನು ತೆಗೆಯಲು ಸೂಚಿಸಿದ್ದರು ಸಹ ಚುಂಚಾದ್ರಿ ಸಂಸ್ಥೆಯವರು ಕಾನೂನನ್ನು ಉಲ್ಲಂಘಿಸಿರುವುದಲ್ಲದೆ ಪತ್ರಕ್ಕೆ ಯಾವುದೇ ಮಾನ್ಯತೆ ನೀಡಿರುವುದಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರೀಯ ಹೆದ್ದಾರಿ 206ಕ್ಕೂ ಧಕ್ಕೆ!?
ಕೆರೆಯ ಪೂರ್ವ ಪಶ್ಚಿಮವಾಗಿ ಯಾವುದೇ ಕೋಡಿ ಹಾಗೂ ವೈಜ್ಞಾನಿಕವಲ್ಲದ ಏರಿ ನಿರ್ಮಿಸಲಾಗಿದೆ. ಇದು ದಕ್ಷಿಣ ಭಾಗದಲ್ಲಿ ಮತ್ತೊಂದು ಕೆರೆಯಾಗಿ ಮಾರ್ಪಟ್ಟು ಮಳೆಗಾಲದಲ್ಲಿ ಹಾಲಿ ಕೆರೆಗಿಂತಲೂ ಹೆಚ್ಚಿನ ಮಟ್ಟಕ್ಕೆ ಏರುತ್ತದೆ. ಒಂದು ವೇಳೆ ಕೆರೆ ತುಂಬಿದಾಗ ಏರಿ ಒಡೆದಲ್ಲಿ ಸುತ್ತಮುತ್ತಲಿನ ಜಮೀನು ಹಾಗೂ ತೋಟಗಳಿಗೆ ಮಾತ್ರವಲ್ಲ ಅಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೂ ಸಹ ಧಕ್ಕೆಯಾಗುವುದು ನಿಶ್ಚಿತ. ಕರಾರಿನ ಷರತ್ತುಗಳನ್ನು ಪರಿಗಣಿಸಿದೇ, ವೈಜ್ಞಾನಿಕವಾಗಿ ಯಾವುದೇ ಪರಿಶೀಲನೆ ನಡೆಸದೇ ಕೆರೆಯ ಅಂಗಳವನ್ನು ಖಾಸಗೀ ಸ್ವತ್ತು ಎಂಬಂತೆ ಕಾರ್ಯಪಾಲಕ ಅಭಿಯಂತರರು ನಕ್ಷೆಗೆ ಅನುಮೋದನೆ ನೀಡಿರುವುದು ಅನ್ಯಾಯ ಹಾಗೂ ಕಾನೂನಿನ ಉಲ್ಲಂಘನೆ ಎಂದು ಸ್ಥಳೀಯ ನೊಂದ ರೈತ ಗಿರಿಯಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಅಳಲು ತೋಡಿಕೊಂಡರು.
-ನೊಂದ ರೈತರು

ನಿದಿಗೆ ದೊಡ್ಡಕೆರೆ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಮಲ್ಲೇಶಪ್ಪ, ಕೆಂಚಪ್ಪ, ಸತ್ಯನಾರಾಯಣ, ಅಂದಾನಪ್ಪ, ಚಂದ್ರಪ್ಪ, ಮಣಿ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Get in Touch With Us info@kalpa.news Whatsapp: 9481252093

Tags: BhadravathiBoatingChunchadri Fish Development and Water Sportsfarmers-protestKannada News WebsiteMalnad NewsNH 206Nidige LakeShivamoggaಕೆರೆಚುಂಚಾದ್ರಿ ಮೀನು ಅಭಿವೃದ್ಧಿ ಮತ್ತು ಜಲಕ್ರೀಡೆ ಸಂಸ್ಥೆದೋಣಿ ವಿಹಾರನಿದಿಗೆ ಕೆರೆಭದ್ರಾವತಿಶಿವಮೊಗ್ಗ
Share196Tweet123Send
Previous Post

ಭದ್ರಾವತಿ ಲಕ್ಷ್ಮೀ ನರಸಿಂಹ ದೇಗುಲ ಅಭಿವೃದ್ಧಿಗೆ ಸಂಸದರಿಂದ ಬರೋಬ್ಬರಿ 3.5 ಕೋಟಿ ರೂ. ಅನುದಾನ

Next Post

ನಿಗದಿತ ಅವಧಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ: ಡಿಸಿ ಶಿವಕುಮಾರ್ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಿಗದಿತ ಅವಧಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ: ಡಿಸಿ ಶಿವಕುಮಾರ್ ಸೂಚನೆ

ನಿಗದಿತ ಅವಧಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ: ಡಿಸಿ ಶಿವಕುಮಾರ್ ಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ

June 3, 2026
ವಿದ್ಯಾರ್ಥಿಗಳ ಸಾಧನೆ ವಿದ್ಯಾಸಂಸ್ಥೆಯ ಮೌಲ್ಯ ಹೆಚ್ಚಿಸುತ್ತದೆ: ನಾರಾಯಣ ರಾವ್ ಅಭಿಪ್ರಾಯ

ವಿದ್ಯಾರ್ಥಿಗಳ ಸಾಧನೆ ವಿದ್ಯಾಸಂಸ್ಥೆಯ ಮೌಲ್ಯ ಹೆಚ್ಚಿಸುತ್ತದೆ: ನಾರಾಯಣ ರಾವ್ ಅಭಿಪ್ರಾಯ

June 3, 2026
ಮೋದಿ ಅವಧಿಯಲ್ಲಿ RBI ನಿಜಕ್ಕೂ ಚಿನ್ನ ಮಾರಿದೆಯೇ? ಇಲ್ಲಿದೆ PIB ಫ್ಯಾಕ್ಟ್ ಚೆಕ್ ವರದಿ

ಮೋದಿ ಅವಧಿಯಲ್ಲಿ RBI ನಿಜಕ್ಕೂ ಚಿನ್ನ ಮಾರಿದೆಯೇ? ಇಲ್ಲಿದೆ PIB ಫ್ಯಾಕ್ಟ್ ಚೆಕ್ ವರದಿ

June 3, 2026
ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ – ಆವೃತ್ತಿ ಎರಡು ಪುಸ್ತಕ ಬಿಡುಗಡೆ

ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ

June 3, 2026
ದೇವೇಗೌಡರ ಕಾಲು ಮುಟ್ಟಿ ಆರ್ಶೀವಾದ ಪಡೆದ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ ನಿವಾಸಕ್ಕೂ ಭೇಟಿ

ದೇವೇಗೌಡರ ಕಾಲು ಮುಟ್ಟಿ ಆರ್ಶೀವಾದ ಪಡೆದ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ ನಿವಾಸಕ್ಕೂ ಭೇಟಿ

June 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL