ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೊಣಕಾಲು, ಕೀಲು ಹಾಗೂ ಸೊಂಟ ನೋವಿನಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ (Shivamogga) ಶಿವಮೊಗ್ಗದ ಹರಕೆರೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ನ.16ರಂದು ಉಚಿತ ಮೂಳೆ ಸಾಂಧ್ರತೆ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಆಸ್ಪತ್ರೆಯ ಆರ್ಥೋ ಕೇರ್ ವಿಭಾಗವು ವಿಶೇಷ ಉಚಿತ ಮೂಳೆ ಸಾಂಧ್ರತಾ ಪರೀಕ್ಷೆಯನ್ನು ನ.16ರ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆಯಲಿದೆ.
ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ವಯಸ್ಸು ಹೆಚ್ಚಾದಂತೆ ಪುರುಷರು ಮತ್ತು ಮಹಿಳೆಯರಲ್ಲಿ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಋತುಚಕ್ರ ನಿಂತ ನಂತರ (Menopause) ಹಾರ್ಮೋನ್ಗಳ ಬದಲಾವಣೆಯಿಂದ ಮೂಳೆ ಸವೆತದ ಅಪಾಯ ಹೆಚ್ಚಾಗಬಹುದು. ಇದರಿಂದ ಆಸ್ಟಿಯೊಪೊರೋಸಿಸ್ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
Also Read>> ಎಸ್ಎಸ್ಎಲ್ಸಿ ಅನುತ್ತೀರ್ಣರಿಗೆ ಸುವರ್ಣಾವಕಾಶ | ನೇರ ಪರೀಕ್ಷೆಗೆ ಅರ್ಜಿ ಆಹ್ವಾನ
ಮೂಳೆಗಳ ಸಾಂದ್ರತೆ ಕಡಿಮೆಯಾದಾಗ ಮೂಳೆಗಳು ದುರ್ಬಲಗೊಂಡು ಸಣ್ಣ ಪ್ರಮಾಣದ ಪೆಟ್ಟು ಅಥವಾ ಒತ್ತಡಕ್ಕೂ ಮುರಿತ ಉಂಟಾಗುವ ಅಪಾಯವಿರುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲಿಯೇ ಮೂಳೆಗಳ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವುದು ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮೂಳೆಗಳ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಅಗತ್ಯವಿರುವವರಿಗೆ ತಪಾಸಣೆ ಮತ್ತು ವೈದ್ಯಕೀಯ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಉಚಿತ ಶಿಬಿರ ಆಯೋಜಿಸಲಾಗಿದೆ.
Shivamogga : ಯಾರೆಲ್ಲ ಶಿಬಿರದ ಪ್ರಯೋಜನ ಪಡೆಯಬಹುದು?
ಕೆಳಕಂಡ ಸಮಸ್ಯೆಗಳನ್ನು ಎದುರಿಸುತ್ತಿರುವವರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಬಹುದು.
- ದೀರ್ಘಕಾಲದಿಂದ ಮಂಡಿ ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು.
- ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವಾಗ ತೊಂದರೆ ಅನುಭವಿಸುವವರು.
- ವಯಸ್ಸಾದಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತಿರುವ ಪುರುಷರು ಮತ್ತು ಮಹಿಳೆಯರು.
- ಮೂಳೆಗಳ ಬಲ ಮತ್ತು ಕಾರ್ಯಕ್ಷಮತೆ ಕ್ಷೀಣಿಸಿರುವವರು.
- ಋತುಚಕ್ರ ನಿಂತ ನಂತರ ಮೂಳೆ ಸವೆತದ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು.
- ಮೂಳೆಗಳ ಆರೋಗ್ಯದ ಬಗ್ಗೆ ಆತಂಕ ಹೊಂದಿರುವವರು.
ಮೊದಲು ಬಂದ 100 ಜನರಿಗೆ ಆದ್ಯತೆ
ಈ ಶಿಬಿರದಲ್ಲಿ ಉಚಿತ ಬಿಎಂಡಿ ಪರೀಕ್ಷೆ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಪಡೆಯಲು ಅವಕಾಶವಿದ್ದು, ಮೊದಲು ನೋಂದಾಯಿಸಿಕೊಂಡು ಆಗಮಿಸುವ 100 ಜನರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಆಸಕ್ತರು ಮುಂಚಿತವಾಗಿ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಆಸ್ಪತ್ರೆಯು ತಿಳಿಸಿದೆ.
ಶಿಬಿರದ ವಿವರ
- ದಿನಾಂಕ: ನವೆಂಬರ್ 16, 2026, ಸೋಮವಾರ
- ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ
- ಸ್ಥಳ: ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಎನ್ಟಿ ರಸ್ತೆ, ಹರಕೆರೆ, ಶಿವಮೊಗ್ಗ.
- ಸೌಲಭ್ಯ: ಉಚಿತ BMD ಪರೀಕ್ಷೆ ಹಾಗೂ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ.
- ಆದ್ಯತೆ: ಮೊದಲ 100 ಜನರಿಗೆ.
- ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ: 9986759486
ಮಂಡಿ, ಕೀಲು ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು ಹಾಗೂ ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









