ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶವು ಗಾಂಧೀಜಿಯವರ #Gandhiji ಆದರ್ಶ ಪರಿಕಲ್ಪನೆ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಮಾದರಿಯಾಗುತ್ತದೆ. ಸಮಾಜದ ಒಳಿತಿಗೂ ಇದು ಉತ್ತಮವಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಚರಕೋತ್ಸವ ಸಮಿತಿಯಿಂದ ನಗರದ ಅಲ್ಲಮಪ್ರಭು ಮೈದಾನದ (ಫ್ರೀಡಂ ಪಾರ್ಕ್) ಗಾಂಧಿ ಭವನದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಚರಕದಿಂದ ನೂಲನ್ನು ತೆಗೆಯುವುದರ ಮುಖಾಂತರ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಎಸ್ ಜೆ ಎಂ ಕಾಲೇಜ್ ಆಫ್ ಫಾರ್ಮಸಿ ಯ ಪ್ರಾಚಾರ್ಯ ಡಾ. ಎಚ್ .ಕೆ.ಎಸ್. ಸ್ವಾಮಿ ಮಾತನಾಡಿ, ಖಾದಿ ಮತ್ತು ಕೈಮಗ್ಗ ದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಖಾದಿಯನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
Also read: ಕೂಡ್ಲಿ | ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆ
ವಿಶ್ರಾಂತ ಪ್ರಾಚಾರ್ಯ ಪ್ರೊ. ಚಂದ್ರಶೇಖರ್ ಮಾತನಾಡಿದರು. ಖಾದಿ ಉತ್ಪನ್ನಗಳ ಬಳಕೆ, ಪ್ರಕೃತಿ ಮತ್ತು ಮಾನವನ ಸಂಬಂಧ, ಗಾಂಧೀಜಿಯವರ ಸ್ವಚ್ಛ ಸುಂದರ ಭಾರತದ ಪರಿಕಲ್ಪನೆಯನ್ನು ದೈನಂದಿನ ಜೀವನಕ್ಕೆ ಹೇಗೆ ರೂಡಿಸಿಕೊಳ್ಳುವುದು ಎಂಬ ಬಗ್ಗೆ ಉತ್ತಮವಾದ ಸಂದೇಶವನ್ನು ನೀಡಿದರು.
ಕಂದಾಯ ನಿರೀಕ್ಷಕ ಶಿವಮೂರ್ತಿ, ಕಲ್ಯ ಮಲ್ಲಿಕಾರ್ಜುನ್, ರೇಡಿಯೋ ಶಿವಮೊಗ್ಗ ಎಫ್ ಎಂನ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ, ಆರ್ ಜೆ ಶ್ರೀಧರ್, ಗ್ರಾಮ ಲೆಕ್ಕಾಧಿಕಾರಿಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು, ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು, ಮತ್ತು ಇತರರು ಉಪಸ್ಥಿತರಿದ್ದರು.
ಉಳಿವು ಸಂಸ್ಥೆಯ ಡಾ.ಸೀಮ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜೆಯವರೆಗೂ ಚರಕದಿಂದ ನೂಲು ತೆಗೆಯುವ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನಡೆಯಿತು. ಹಲವಾರು ಜನರು ಭಾಗವಹಿಸಿ, ಸ್ವತಃ ಚರಕದಿಂದ ನೂಲನ್ನು ತೆಗೆದು ಸಾರ್ಥಕ ಭಾವವನ್ನುಹೊಂದಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post