ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸ್ಕಾರ ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಗುರುಗಳನ್ನು ಗೌರವಿಸುವ ಉದ್ದೇಶದಿಂದ ಸಂಸ್ಕಾರ ಭಾರತಿ ಶಿವಮೊಗ್ಗ (Shivamogga) ವತಿಯಿಂದ ನಟರಾಜ ಪೂಜೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಂಸ್ಕಾರ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಜ್ಞಾನ ಪ್ರಸಾರದಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಹಿರಿಯ ಸಾಧಕರಿಗೆ ಅವರ ಸ್ವಗೃಹದಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ಕಳೆದ 35 ವರ್ಷಗಳಿಂದ ಉಚಿತವಾಗಿ ಸೌಂದರ್ಯ ಲಹರಿ, ಶಿವಾನಂದ ಲಹರಿ ಸೇರಿದಂತೆ ವಿವಿಧ ಸ್ತೋತ್ರಗಳನ್ನು ಕಲಿಸುತ್ತಿರುವ ರಾಜಲಕ್ಷ್ಮಿ ಟೀಚರ್ ಅವರನ್ನು ಗೌರವಿಸಲಾಯಿತು.

ಅದೇ ರೀತಿ, ಮಕ್ಕಳಿಗೆ ಹಲವು ವರ್ಷಗಳಿಂದ ಭಗವದ್ಗೀತೆಯನ್ನು ಅರ್ಥ ಸಹಿತವಾಗಿ ಬೋಧಿಸುತ್ತಿರುವ ಶಕುಂತಲಾ ಎಂ. ಜೋಯಿಸ್ ಅವರಿಗೂ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
Shivamogga : ಜ್ಞಾನ ಹಂಚುವ ಮೂಲಕ ಸಮಾಜಕ್ಕೆ ಮಾದರಿ
ಸಂಸ್ಕೃತಿ, ಧಾರ್ಮಿಕ ಜ್ಞಾನ ಮತ್ತು ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇವರ ಸೇವೆ ಅಪಾರವಾಗಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜ್ಞಾನ ಹಂಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
Also read>> ವಿಮೆ ಹಣಕ್ಕಾಗಿ ಪತ್ನಿಯನ್ನೇ ಕೊಂದು ಅಪಘಾತದ ನಾಟಕ; ಪತಿ ಬಂಧನ
ನಟರಾಜ ಪೂಜೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಗುರುಗಳ ಆಶೀರ್ವಾದ ಪಡೆದು, ಅವರ ಸೇವೆಯನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಸವಿತಾ ಮಾಧವ, ಡಾ. ಕಾಂತರಾಜ, ಡಾ. ರಂಜನಿ ಬಿದರಳ್ಳಿ, ಡಾ. ಸಹನಾ, ಪವಿತ್ರ ಕಾಮತ್ ಹಾಗೂ ಡಾ. ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









