ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನ ಪುಸ್ತಕ ಹಿಡಿಯಲು ರಾಹುಲ್ ಗಾಂಧಿ #Rahul Gandhi ಹಾಗೂ ಕಾಂಗ್ರೆಸ್‍ನವರಿಗೆ ನೈತಿಕ ಹಕ್ಕಿಲ್ಲ. ರಾಹುಲ್ ಅಜ್ಜಿ ಇಂದಿರಾ ಗಾಂಧಿ #Indira Gandhi ಅತೀ ಹೆಚ್ಚು ಬಾರಿ ಸಂವಿಧಾನವನ್ನು ಸ್ವಾರ್ಥಕ್ಕಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್. ದತ್ತಾತ್ರಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್ ಗಾಂಧಿ ಸಂವಿಧಾನ #Constitution ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿಯವರು ಪ್ರಮಾಣ ವಚನ ಸ್ವೀಕಾರ ಮಾಡುವಾಗ ಪದೇ ಪದೇ ಸಂವಿಧಾನ ಪುಸ್ತಕ ಎತ್ತಿ ತೋರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ತಮ್ಮಿಂದಲೇ ಸಂವಿಧಾನ ಉಳಿಯುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ
ಎಂದರು.
ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ರಾಹುಲ್ ಅಜ್ಜಿ ಇಂದಿರಾಗಾಂಧಿಯವರು 1975 ರ ಜೂನ್ 25 ರಂದು ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗದ ಕತ್ತು ಕೊಯ್ಯುವ ಕೆಲಸ ಮಾಡಲಾಗಿತ್ತು. ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದ್ದರು. ಇಂತಹ ಕಾನೂನು ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು ಎಂದರು.
Also read: ಡಿಸಿಸಿ ಬ್ಯಾಂಕ್‍ನ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ | ತನಿಖೆ ನಡೆಸಿ | ಆಯನೂರು ಮಂಜುನಾಥ್ ಆಗ್ರಹ
ಅಧಿಕಾರ ತಮ್ಮ ಬಳಿಯೇ ಉಳಿಸಿಕೊಳ್ಳಲು ತಮಗೆ ಬೇಕಾದಂತೆ ಸಂವಿಧಾನ ತಿದ್ದುಪಡಿ ತಂದಿದ್ದರು. ಅಂಬೇಡ್ಕರ್ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡಿದ್ದರು. ಅಜ್ಜಿ ಸಂವಿಧಾನ ತಿದ್ದುಪಡಿ ಮಾಡಿರುವುದಕ್ಕೆ ರಾಹುಲ್ ಈಗ ಕ್ಷಮೆ ಕೇಳಬೇಕು. ಈಗ ಅವರಿಗೆ ಅಧಿಕಾರವಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಸರ್ಕಾರದ ಅಧಿಕಾರ ಅವಧಿಯಲ್ಲಿಯೇ ಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದರು.
ಮೋದಿ #Modi ಸಂವಿಧಾನಕ್ಕೆ ಮಾಡಿವ ತಿದ್ದುಪಡಿಗಳು ದೇಶದ ಜನರಿಗೆ ಪೂರಕವಾಗಿವೆ. ಇಂದಿರಾಗಾಂಧಿ ತಿದ್ದುಪಡಿ ಮಾಡಿರುವುದು ಅವರ ಸ್ವಾರ್ಥಕ್ಕಾಗಿ ಆಗಿತ್ತು. ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ತಿದ್ದುಪಡಿಸಿ ಮಾಡಿದ್ದರು. ಇದು ಇಡೀ ಜಗತ್ತಿಗೆ ಗೊತ್ತಿದ್ದರೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಯವರು ಈಗ ಹೋದಲ್ಲೆಲ್ಲಾ ಸಂವಿಧಾನ ಪುಸ್ತಕ ಹಿಡಿದುಕೊಂಡು ಹೋಗುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಿವರಾಜ್, ಹೃಷಿಕೇಶ ಪೈ, ರಮೇಶ್, ಶ್ರೀನಿವಾಸ ರೆಡ್ಡಿ, ಭವಾನಿರಾವ್ ಮೋರೆ, ಹರೀಶ್, ಮೂರ್ತಿ, ಲಿಂಗರಾಜ್, ವಿನ್ಸೆಂಟ್ ರೋಡ್ರಿಗಸ್, ರತ್ನಾಕರ್ ಶೆಣೈ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post