ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಯುವ ಮುಖಂಡ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗ ನಿರ್ಧರಿಸಿದೆ ಎಂದು ಪಾಲಿಕೆ ಸದಸ್ಯ ಇ.ವಿಶ್ವಾಸ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ನಗರದ ಮಂಜುನಾಥ ಬಡಾವಣೆ, ರಾಜೀವ್‌ಗಾಂಧಿ ಬಡಾವಣೆ, ಗುಂಡಪ್ಪಶೆಡ್, ಅಂಬೇಡ್ಕರ್‌ನಗರ, ಬೆಂಕಿನಗರ, ನ್ಯೂಮಂಡ್ಲಿ, ಶಾಂತಿನಗರದ ಅವಶ್ಯಕತೆ ಇರುವ ನಿವಾಸಿಗಳಿಗೆ ಸುಮಾರು 2500 ಸೊಳ್ಳೆ ಪರದೆ ವಿತರಿಸಲಾಗುವುದು ಎಂದರು.
ಮಾ.21ರ ನಾಳೆ ಬೆಳಿಗ್ಗೆ 9 ಗಂಟೆಗೆ ಈ ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುಪುರದ ನಂಜುಂಡೇಶ್ವರ ಸಭಾ ಭವನದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ, ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಶ್ರೀ ಈಶ್ವರನಂದಾಪುರಿ ಸ್ವಾಮೀಜಿ, ಶ್ರೀ ಮಾದರಚೆನ್ನಯ್ಯ ಸ್ವಾಮೀಜಿ ಹಾಗೂ ಕೆ.ಎಸ್.ಈಶ್ವರಪ್ಪ ಅವರಿಂದ ನೆರವೇರಿಸಲಾಗವುದು ಎಂದರು.
ಈ ಸಂದರ್ಭದಲ್ಲಿ ಕೆ.ಈ.ಕಾಂತೇಶ್ ಅವರೊಂದಿಗೆ ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯರಾದ ಶಂಕರ್‌ಗನ್ನಿ, ವಿಶ್ವನಾಥ್, ರಾಹುಲ್ ಬಿದಿರೆ, ಮೋಹನ್‌ರೆಡ್ಡಿ, ಸುನೀತಾ ಅಣ್ಣಪ್ಪ, ಯುವ ಮೋರ್ಚಾ ಅಧ್ಯಕ್ಷ ದರ್ಶನ್, ಸಂತೋಷ್ ಬಳ್ಳಕೆರೆ ಇನ್ನಿತರರು ಉಪಸ್ಥಿತರಿರುವರು ಎಂದರು.
ಅದೇ ದಿನ ನಗರದ ಶಾರದ ಅಂಧರ ವಿಕಾಸ ಕೇಂದ್ರ, ತಾಯಿ ಮನೆ, ಮಾತೃಛಾಯ, ಜೀವನ ಸಂಜೆ, ತರಂಗ, ಗುಡ್‌ಲಕ್ ಆರೈಕೆ ಕೇಂದ್ರ, ವೃದ್ದಾಶ್ರಮಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಾ.22ರ ಯುಗಾದಿ ಹಬ್ಬದಂದು ಸಂಜೆ ವಿಶೇಷ ಯುಗಾದಿ ಸಂಭ್ರಮ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು, ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಹಾದಿಮನಿ ಹಾಸ್ಯಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಯುಗಾದಿ ವಿಶೇಷ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಲಿದೆ. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದು, ಕೆ.ಈ.ಕಾಂತೇಶ್ ಉಪಸ್ಥಿತರಿರುವರು. ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್, ರಾಹುಲ್ ಬಿದಿರೆ, ರಾಜು, ಪ್ರಭಾಕರ್, ಯುವ ಮೋರ್ಚಾ ಅಧ್ಯಕ್ಷ ದರ್ಶನ್, ಸಂತೋಷ್ ಬಳ್ಳಕೆರೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post