ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೃತ್ಯ ಗುರು ಡಾ.ಕೆ.ಎಸ್. ಪವಿತ್ರ ಅವರು ಶಿಷ್ಯೆ ಕುಮಾರಿ ಜೆ.ಎಸ್. ಮೈಥಿಲಿ ಅವರ ಭರತನಾಟ್ಯ ರಂಗ ಪ್ರವೇಶ ಡಿ.28ರಂದು ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈಥಿಲಿ ಅವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಈ ಗಳಿಗೆಗೆ ಸಾಕ್ಷಿಯಾಗಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಸಮಾಜ ಚಿಂತಕರು ಮತ್ತು ವಿದ್ವಾಂಸರಾದ ಲಕ್ಷ್ಮೀಶ್ ತೋಳ್ಪಾಡಿ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮತ್ತು ಖ್ಯಾತ ಸಾಹಿತಿ- ವಿಮರ್ಶಕ ಎಂ.ಎನ್. ಸುಂದರ್‌ರಾಜ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀವಿಜಯದ ಅಧ್ಯಕ್ಷ ಡಾ, ಕೆ.ಆರ್.ಶ್ರೀಧರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕುಮಾರಿ ಮೈಥಿಲಿ ಅವರು ಡಾ. ಟಿ. ನಿರ್ಮಲಾ ಮತ್ತು ಪ್ರೊ. ಜೆ.ಎಸ್. ಸದಾನಂದ ಅವರ ಪುತ್ರಿಯಾಗಿದ್ದು ಕಳೆದ 10 ವರ್ಷಗಳಿಂದ ಡಾ. ಕೆ.ಎಸ್. ಪವಿತ್ರ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಬಿಇ ಪದವಿಯ ಜೊತೆಗೆ ಉತ್ತಮ ದರ್ಜೆಯಲ್ಲಿ ವಿದ್ವತ್‌ಅಂತಿಮ ಪರೀಕ್ಷೆಯನ್ನು ಪೂರೈಸಿದ್ದು, ಇದೀಗ ಬೆಂಗಳೂರಿನಲ್ಲಿ ಪ್ರತಿಷ್ಠಿತ ಟಿಸಿಎಸ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಗುರುವಿನೊಡಗೂಡಿ ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post