ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ (Dr. Dhananjaya Sarji) ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ವಾತಿ ಅವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಡಾ. ಧನಂಜಯ ಸರ್ಜಿ ಅವರ ಆಯುರಾರೋಗ್ಯ, ಯಶಸ್ಸು ಹಾಗೂ ಜನಸೇವಾ ಕಾರ್ಯಗಳು ಮತ್ತಷ್ಟು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಲಾಯಿತು.
Shivamogga : ಅಭಿಮಾನಿಗಳು ವಿಶೇಷ ಪೂಜೆಯಲ್ಲಿ ಭಾಗಿ
ಈ ಸಂದರ್ಭದಲ್ಲಿ ವಿಘ್ನನಿವಾರಕ ಗಣಪತಿಗೆ ಮೋದಕ ನೈವೇದ್ಯ, ಪಂಚಾಮೃತ ಅಭಿಷೇಕ ಹಾಗೂ ಸರ್ವ ಸೇವಾ ವಿಶೇಷ ಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ಶಾಸಕರ ಅಭಿಮಾನಿಗಳು ಹಾಗೂ ಹಿತೈಷಿಗಳು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು.
Also Read>> HERO MOTOCORP LAUNCHES GLAMOUR X WITH INTEGRATED-ABS
ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಸುರೇಶ್ ಸಿಂಗನಹಳ್ಳಿ, ಸರ್ಜಿ ಆಸ್ಪತ್ರೆಯ ವೈದ್ಯ ಡಾ. ವಿಜಯಕುಮಾರ್ ಮಾಯೆರ, ಆಡಳಿತಾಧಿಕಾರಿ ಮುರುಳೀಧರ್ ರಾವ್ ಕುಲಕರ್ಣಿ, ಸನ್‌ರೈಸ್ ಫೆಸಿಲಿಟಿ ಸರ್ವಿಸಸ್‌ನ ಮಾಲೀಕ ಸಿದ್ದೇಶ್, ಪ್ರಮುಖರಾದ ತಮ್ಮಡಿಹಳ್ಳಿ ನಾಗರಾಜ್, ಯತೀಶ್ ದುಮ್ಮಳ್ಳಿ, ಪೆರುಮಾಳ್, ಬಿ.ಡಿ. ಈಶ್ವರಪ್ಪ ಹಾಗೂ ಮಹಿಳಾ ಮುಖಂಡೆ ಗೀತಾ ಸೇರಿದಂತೆ ಅಭಿಮಾನಿಗಳು, ಹಿತೈಷಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಾಸಕರ ಜನ್ಮದಿನದ ಅಂಗವಾಗಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಅಭಿಮಾನಿಗಳು ಡಾ. ಧನಂಜಯ ಸರ್ಜಿ ಅವರಿಗೆ ಆರೋಗ್ಯ, ದೀರ್ಘಾಯ ಎಂದು ಹಾರೈಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









