ತಾಳಗುಪ್ಪ–ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಭಾರಿ ಅಡ್ಡಿ: ಅರಸಾಳು ಬಳಿ ರೈಲ್ವೆ ಹಳಿ ಮತ್ತು ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ರೈಲು ಮರ‍್ಗ ಮಧ್ಯೆ ನಿಂತಿದೆ. 3 ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರ ಪರದಾಟ, ದುರಸ್ತಿ ಕರ‍್ಯ ಹಾಗೂ ಡೀಸೆಲ್ ಎಂಜಿನ್ ಜೋಡಣೆ ಕುರಿತು ಮಾಹಿತಿ ಇಲ್ಲಿದೆ.
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ಜಿಲ್ಲೆಯ ಅರಸಾಳು ಸಮೀಪ ರೈಲ್ವೆ ಹಳಿ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮವಾಗಿ (Talguppa) ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಎಕ್ಸ್’ಪ್ರೆಸ್ (Intercity Express) ರೈಲು ಸುಮಾರು ಮೂರು ಗಂಟೆಗೂ ಅಧಿಕ ಕಾಲ ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಅರಸಾಳು ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿ ಹಾಗೂ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಘಟನೆ ತಿಳಿಯುತ್ತಿದ್ದಂತೆ ರೈಲ್ವೆ ಇಂಜಿನಿಯರ್’ಗಳು, ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮರ ತೆರವು ಹಾಗೂ ಹಾನಿಗೊಳಗಾದ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಕೆಂಚನಾಳ ಹಾಲ್ಟ್ ಬಳಿ ರೈಲು ನಿಲುಗಡೆ
ತಾಳಗುಪ್ಪದಿಂದ ಬೆಂಗಳೂರಿನತ್ತ ಸಂಚರಿಸುವ ಇಂಟರ್ಸಿಟಿ ಎಕ್ಸ್’ಪ್ರೆಸ್ ರೈಲು ಸಂಖ್ಯೆ 20652 ಇಂದು ಬೆಳಿಗ್ಗೆ 5.20ಕ್ಕೆ ತಾಳಗುಪ್ಪದಿಂದ ಪ್ರಯಾಣ ಆರಂಭಿಸಿತ್ತು. ಬೆಳಿಗ್ಗೆ 6.18ರ ಸುಮಾರಿಗೆ ಆನಂದಪುರದಿಂದದ ಹೊರಟ ಬಳಿಕ ರೈಲು ಮಾರ್ಗ ಮಧ್ಯೆ ನಿಂತಿದೆ.
ಪ್ರಸ್ತುತ ರೈಲು ಕೆಂಚನಾಳ ಹಾಲ್ಟ್ ಪ್ರದೇಶದ ಬಳಿ ನಿಂತಿದ್ದು, ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರ ಹಾಗೂ ದುರಸ್ತಿ ಕಾರ್ಯದಿಂದಾಗಿ ರೈಲಿನ ಸಂಚಾರ ಸ್ಥಗಿತಗೊಂಡಿದೆ.
Also Read>> ಡಾ. ಧನಂಜಯ ಸರ್ಜಿ ಜನ್ಮದಿನ: ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈಲನ್ನು ಮುಂದಕ್ಕೆ ಸಾಗಿಸಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.
ರೈಲಿಗೆ ಡೀಸೆಲ್ ಎಂಜಿನ್ ಜೋಡಣೆ
ವಿದ್ಯುತ್ ತಂತಿಗಳ ದುರಸ್ತಿ ಕಾರ್ಯಕ್ಕೆ ಸಮಯ ಬೇಕಾಗುತ್ತಿರುವ ಹಿನ್ನೆಲೆಯಲ್ಲಿ ರೈಲಿಗೆ ಡೀಸೆಲ್ ಎಂಜಿನ್ ಜೋಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಡೀಸೆಲ್ ಎಂಜಿನ್ ಮೂಲಕ ರೈಲನ್ನು ಸ್ವಲ್ಪ ದೂರದವರೆಗೆ ಸಂಚರಿಸುವಂತೆ ಮಾಡಿ, ವಿದ್ಯುತ್ ಸಂಪರ್ಕ ಲಭ್ಯವಾಗುವ ಪ್ರದೇಶಕ್ಕೆ ತಲುಪಿದ ಬಳಿಕ ಮತ್ತೆ ಎಲೆಕ್ಟ್ರಿಕ್ ಎಂಜಿನ್ ಬಳಸಿ ರೈಲು ಸಂಚಾರ ಮುಂದುವರಿಸುವ ಯೋಜನೆ ರೂಪಿಸಲಾಗಿದೆ.
ಇದರಿಂದ ಪ್ರಯಾಣಿಕರನ್ನು ಸಾಧ್ಯವಾದಷ್ಟು ಬೇಗ ಬೆಂಗಳೂರಿನತ್ತ ಕಳುಹಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
ಗಣೇಶ ಚತುರ್ಥಿ ರಜೆ ಹಿನ್ನೆಲೆ ಪ್ರಯಾಣಿಕರ ಪರದಾಟ
ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಅನೇಕರು ಬೆಂಗಳೂರಿಗೆ ಮರಳಲು ಈ ಇಂಟರ್ಸಿಟಿ ರೈಲನ್ನು ಅವಲಂಬಿಸಿದ್ದರು. ಆದರೆ ಮಾರ್ಗ ಮಧ್ಯೆ ರೈಲು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರೈಲಿನಲ್ಲಿರುವ ಪ್ರಯಾಣಿಕರು ಹಲವು ಗಂಟೆಗಳಿಂದ ರೈಲು ಸಂಚಾರ ಪುನರಾರಂಭವಾಗುವುದನ್ನು ಕಾಯುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಹಲವು ಪ್ರಯಾಣಿಕರು ದೀರ್ಘಕಾಲ ರೈಲು ನಿಂತಿರುವುದರಿAದ ಸಮಸ್ಯೆ ಎದುರಿಸುತ್ತಿದ್ದಾರೆ.
Shivamogga : ಶಿವಮೊಗ್ಗ, ಭದ್ರಾವತಿಯಲ್ಲಿ ಪ್ರಯಾಣಿಕರ ಪರದಾಟ
ರೈಲು ಸಂಚಾರ ಸ್ಥಗಿತಗೊಂಡಿರುವ ಪರಿಣಾಮ ಶಿವಮೊಗ್ಗ ಹಾಗೂ ಭದ್ರಾವತಿ ರೈಲ್ವೆ ನಿಲ್ದಾಣಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇಂಟರ್ಸಿಟಿ ರೈಲಿಗಾಗಿ ಕಾಯುತ್ತಿದ್ದಾರೆ.
ರೈಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಪಡಿಸಿ ಮನೆಗಳಿಗೆ ಹಿಂದಿರುಗಿದ್ದಾರೆ. ಇನ್ನೂ ಕೆಲವರು ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಬಸ್ ನಿಲ್ದಾಣಗಳತ್ತ ತೆರಳಿದ್ದಾರೆ. ಮತ್ತಷ್ಟು ಪ್ರಯಾಣಿಕರು ರೈಲು ಸಂಚಾರ ಪುನರಾರಂಭವಾಗುವ ನಿರೀಕ್ಷೆಯಲ್ಲಿ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ.
ಬೆಳಿಗ್ಗೆ ಹೊರಟು ಮಧ್ಯಾಹ್ನ ಬೆಂಗಳೂರು ತಲುಪಬೇಕಿದ್ದ ರೈಲು
ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಎಕ್ಸ್’ಪ್ರೆಸ್ ಸಾಮಾನ್ಯ ವೇಳಾಪಟ್ಟಿಯಂತೆ ಬೆಳಿಗ್ಗೆ 5.20ಕ್ಕೆ ತಾಳಗುಪ್ಪದಿಂದ ಹೊರಡುತ್ತದೆ. ಬಳಿಕ 5.35ಕ್ಕೆ ಸಾಗರ, ಸುಮಾರು 7.05ಕ್ಕೆ ಶಿವಮೊಗ್ಗ ಹಾಗೂ 7.28ಕ್ಕೆ ಭದ್ರಾವತಿ ನಿಲ್ದಾಣ ತಲುಪುವ ವೇಳಾಪಟ್ಟಿಯನ್ನು ಹೊಂದಿದೆ. ರೈಲು ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ತಲುಪಬೇಕಿತ್ತು.
ಆದರೆ ಅರಸಾಳು ಸಮೀಪ ಮರ ಬಿದ್ದು ರೈಲ್ವೆ ಹಳಿ ಹಾಗೂ ವಿದ್ಯುತ್ ತಂತಿಗಳಿಗೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಹಲವು ಗಂಟೆಗಳ ವಿಳಂಬವಾಗಿದೆ.
ರೈಲ್ವೆ ಸಿಬ್ಬಂದಿ ಸ್ಥಳದಲ್ಲಿ ಮರ ತೆರವು, ಹಳಿ ಪರಿಶೀಲನೆ ಹಾಗೂ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಂಡಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ಸಂಚಾರವನ್ನು ಪುನರಾರಂಭಿಸುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








