ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೂವರು ಮಕ್ಕಳೊಂದಿಗೆ ತಾಯಿಯೊಬ್ಬರು ರೈಲ್ವೆ ಹಳಿ ಮೇಲಿನಿಂದ (Tunga River) ತುಂಗಾ ನದಿಗೆ ಹಾರಿರುವ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ಒಂದು ಮಗುವನ್ನು ಸ್ಥಳೀಯ ಯುವಕರು ರಕ್ಷಿಸಿದ್ದು, ಉಳಿದ ಇಬ್ಬರು ಮಕ್ಕಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಮಹಿಳೆ ಮೂವರು ಮಕ್ಕಳೊಂದಿಗೆ ರೈಲ್ವೆ ಹಳಿ ಮೇಲಿನಿಂದ ಹೊಳೆಗೆ ಹಾರಿದ್ದಾರೆ ಎನ್ನಲಾಗಿದೆ. ಘಟನೆ ಗಮನಿಸಿದ ಸ್ಥಳೀಯ ಯುವಕರಾದ ನವೀನ್ ಮತ್ತು ದಾದಾಪೀರ್ ತಕ್ಷಣವೇ ನೀರಿಗೆ ಧುಮುಕಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಯುವಕರು ಸಾಹಸದಿಂದ ಮಹಿಳೆ ಹಾಗೂ ಆಕೆಯ ಒಬ್ಬ ಮಗುವನ್ನು ರಕ್ಷಿಸಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಬಳಿಕ ಇಬ್ಬರನ್ನೂ ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Shivamogga : ನಾಪತ್ತೆಯಾದ ಇಬ್ಬರು ಮಕ್ಕಳು
ಘಟನೆಯ ನಂತರ ಮಹಿಳೆ ತನ್ನ ಇನ್ನಿಬ್ಬರು ಮಕ್ಕಳನ್ನು ರಕ್ಷಿಸುವಂತೆ ನಿರಂತರವಾಗಿ ಗೋಗರೆಯುತ್ತಿದ್ದಾರೆ. ಹೊಳೆಯಲ್ಲಿ ನಾಪತ್ತೆಯಾಗಿರುವ ಇಬ್ಬರು ಮಕ್ಕಳಿಗಾಗಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಕ್ಕೆ ಕೆಲವು ಅಡಚಣೆಗಳು ಎದುರಾಗುತ್ತಿವೆ ಎನ್ನಲಾಗಿದೆ. ಆದರೂ ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆಹಚ್ಚಲು ತೀವ್ರ ಕಾರ್ಯಾಚರಣೆ ಮುಂದುವರಿದಿದೆ.
Also Read>> ದೆಹಲಿ ದಲಿತ ಕಾಲೋನಿಗಳಿಗೆ ಪೇಜಾವರ ಶ್ರೀಗಳ ಭೇಟಿ | ಒಗ್ಗಟ್ಟು, ಸ್ವಚ್ಛತೆ ಮತ್ತು ಸಂಸ್ಕಾರದ ಸಂದೇಶ
ತಾಯಿ ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬದ ಹಿನ್ನೆಲೆ ಹಾಗೂ ಘಟನೆಗೆ ಕಾರಣಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆ ಮತ್ತು ಒಂದು ಮಗುವಿನ ಪ್ರಾಣ ಉಳಿಸಿದ ಯುವಕರಾದ ನವೀನ್ ಹಾಗೂ ದಾದಾಪೀರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
- ಶಿವಮೊಗ್ಗದಲ್ಲಿ ದುರಂತ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ
- ಮಕ್ಕಳ ಸಮೇತ ನದಿಗೆ ಹಾರಿದ ಮಹಿಳೆ; ತಾಯಿ ಹಾಗೂ ಮಗುವನ್ನು ರಕ್ಷಿಸಿದ ಸ್ಥಳೀಯ ಯುವಕರು
- ಸಮಯ ಪ್ರಜ್ಞೆ ಮೆರೆದ ಯುವಕರು, ನದಿಗೆ ಬಿದ್ದ ತಾಯಿ-ಮಗುವನ್ನು ಜೀವದ ಹಂಗು ತೊರೆದು ದಡಕ್ಕೆ ತಂದ ನವೀನ್ ಮತ್ತು ದಾದಾಪೀರ್
- ನದಿಯಲ್ಲಿ ಕೊಚ್ಚಿಹೋದ ಇನ್ನಿಬ್ಬರು ಮಕ್ಕಳು
- ತೀವ್ರ ಶೋಧ ಕಾರ್ಯ ಚುರುಕು
- ನದಿ ದಂಡೆಯಲ್ಲಿ ಕಣ್ಣೀರಿಡುತ್ತಿರುವ ತಾಯಿ: “ನನ್ನ ಮಕ್ಕಳನ್ನು ರಕ್ಷಿಸಿ” ಎಂದು ಗೋಗರೆತ
- ರಕ್ಷಣೆಗೊಳಗಾದ ತಾಯಿ-ಮಗು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು
- ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೂಲತಃ ಚಿತ್ರದುರ್ಗ ಜಿಲ್ಲೆಯವರು ಎಂದು ಮಾಹಿತಿ
- ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ
- ನದಿಯಲ್ಲಿ ಮಿಕ್ಕ ಇಬ್ಬರು ಮಕ್ಕಳ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಮುಳುಗು ತಜ್ಞರ ಕಾರ್ಯಾಚರಣೆ
- ಶಿವಮೊಗ್ಗ ನಗರದ ತುಂಗಾ ನದಿಯಲ್ಲಿ ಘಟನೆ
ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








